ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಡರಹಳ್ಳಿ ಸಾಮೂಹಿಕ ಆತ್ಮ,ಹತ್ಯೆ: ಹಲ್ಲೆಗೆರೆ ಶಂಕರ್ ಅಳಿಯಂದಿರ ಜಾಮೀನು ಅರ್ಜಿ ವಜಾ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು ಮೇ 26. ತೀವ್ರ ಕುತೂಹಲ ಕೆರಳಿಸಿದ್ದ 2021ರ ಬ್ಯಾಡರಹಳ್ಳಿ ಸಾಮೂಹಿಕ ಆತ್ಮಹತ್ಯೆ ಪ್ರಕರಣದಲ್ಲಿ ಹೈಕೋರ್ಟ್ ಆರೋಪಿಗಳಿಬ್ಬರಿಗೆ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ.

ಅಲ್ಲದೆ, ಪ್ರಕರಣದ ತನಿಖೆ ಮತ್ತು ಆರೋಪಪಟ್ಟಿ ಸಲ್ಲಿಸಲು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗೆ (ಪಿಎಸ್‌ಐ) ಅಧಿಕಾರವಿದೆ ಎಂದು ಆದೇಶ ನೀಡಿದೆ.

ಪ್ರಕರಣದಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೆ ಸಂಪಾದಕ ಹಲ್ಲೆಗೇರೆ ಶಂಕರ್ ಒಂದನೇ ಆರೋಪಿ ಆಗಿದ್ದರೆ, ಆತನ ಅಳಿಯಂದಿರಾದ ಈಡಿಗ ಶ್ರೀಕಾಂತ್ ಮತ್ತು ಇಎಸ್ ಪ್ರವೀಣ್ ಕುಮಾರ್ ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಯಾಗಿದ್ದರು.

Bengaluru Bydarahalli Mass Suicide Case: Hc Rejected Bail for Two Accused

ಆ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾ. ಕೆ. ನಟರಾಜನ್ ಅವರಿದ್ದ ಏಕಸದಸ್ಯಪೀಠ ತಿರಸ್ಕರಿಸಿದೆ.

ಹೈಕೋರ್ಟ್ ಆದೇಶವೇನು?

ದಾಖಲೆಗಳನ್ನು ಪರಿಶೀಲಿಸಿದ ನಂತರ ನ್ಯಾಯಪೀಠ, ನಾಲ್ವರು ಹಿರಿಯರ ಸಾಮೂಹಿಕ ಆತ್ಮಹತ್ಯೆ ದುರದೃಷ್ಟಕರ. ಡೆತ್ ನೋಟ್‌ಗಳನ್ನು ಬಿಟ್ಟು ಸಾರ್ವಜನಿಕರ ಗಮನ ಸೆಳೆಯಲು ಮತ್ತು ನ್ಯಾಯಕ್ಕಾಗಿ ಪೊಲೀಸ್ ಅಧಿಕಾರಿಗಳು. ತಮ್ಮ ದೇಹವನ್ನು ಪತಿಗೆ ಹಸ್ತಾಂತರಿಸಬಾರದು ಮತ್ತು ರಾಜ್ಯ/ಪೊಲೀಸರು ಅಂತ್ಯಸಂಸ್ಕಾರ ಮಾಡಬೇಕೆಂದು ಮೃತರು ಮಾಡಿದ್ದ ಟಿಪ್ಪಣಿಗಳು ಮತ್ತು ಕೋರಿಕೆಯ ವಿಷಯಗಳು ಆರೋಪಿಗಳು ಮಾಡಿದ ಅಪರಾಧದ ಗಂಭೀರತೆಯನ್ನು ತೋರಿಸುತ್ತದೆ ಎಂದು ಹೇಳಿದೆ.

ಅಲ್ಲದೆ,ಕರ್ನಾಟಕ ಪೊಲೀಸ್ ಕೈಪಿಡಿಯನ್ನು ಉಲ್ಲೇಖಿಸಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗೆ ಆರೋಪಪಟ್ಟಿ ಸಲ್ಲಿಸಲು ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯಾಗಿ ಅಧಿಕಾರವಿದೆ. ಇನ್ಸ್‌ಪೆಕ್ಟರ್ ನೀಡಿದ ದೂರಿನಲ್ಲಿಯೇ ಸಬ್‌ಇನ್‌ಸ್ಪೆಕ್ಟರ್‌ ಅವರನ್ನು ಎಸ್‌ಎಚ್‌ಒ ಎಂದು ತೋರಿಸಲಾಗಿದ್ದು, ಎಫ್‌ಐಆರ್‌ ದಾಖಲಿಸಿಕೊಂಡಿರುವ ಎಸ್‌ಐ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ಹೀಗಾಗಿ ಆರೋಪಪಟ್ಟಿ ಕಾನೂನುಬಾಹಿರವೆಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟು ಮೂರು ಅರ್ಜಿಗಳನ್ನು ವಜಾಗೊಳಿಸಿದೆ.

ಅರ್ಜಿದಾರರ ಪರ ವಕೀಲರು, ಇನ್‌ಸ್ಪೆಕ್ಟರ್ ಒಬ್ಬ ಪೊಲೀಸ್ ಠಾಣೆಯ ಎಸ್‌ಎಚ್‌ಒ ಆಗಿರುವುದರಿಂದ, ಕಡಿಮೆ ಶ್ರೇಣಿಯ ಪಿಎಸ್‌ಐಗೆ ಆರೋಪಪಟ್ಟಿ ಸಲ್ಲಿಸುವ ಅಧಿಕಾರವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಜೊತೆಗೆ ಆರೋಪಪಟ್ಟಿ ರದ್ದುಪಡಿಸುವಂತೆ ಕೋರಿ, ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಯಾವಾಗಲೂ ಇನ್‌ಸ್ಪೆಕ್ಟರ್ ಆಗಿರುತ್ತಾರೆ, ಪಿಎಸ್‌ಐ ಅಲ್ಲ, ಮತ್ತು ಯಾವುದೇ ಅಧಿಕಾರಿ (ಗಳು) ಈ ವಿಷಯವನ್ನು ತನಿಖೆ ಮಾಡಬಹುದು, ಆದರೆ ಆರೋಪಪಟ್ಟಿಯನ್ನು ಹಿರಿಯ ಅಧಿಕಾರಿ ಮಾತ್ರ ಸಲ್ಲಿಸಬಹುದು ಎಂದೂ ವಾದಿಸಲಾಗಿತ್ತು. ಅಲ್ಲದೆ, ತಮ್ಮ ವಿರುದ್ಧ ಹೊರಿಸಲಾದ (ಆತ್ಮಹತ್ಯೆಗೆ ಪ್ರಚೋದನೆ) ಆರೋಪವನ್ನು ನಿರಾಕರಿಸಿದ್ದ ಅರ್ಜಿದಾರರು, ಸಂಪೂರ್ಣ ಆರೋಪವನ್ನು ಒಂದನೇ ಆರೋಪಿಯಾಗಿರುವ ತಮ್ಮ ಮಾವನ ವಿರುದ್ಧ ಮಾಡಿದ್ದಾರೆ.

ಮತ್ತೊಂದೆಡೆ ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ್ದ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ -2 ವಿ.ಎಸ್.ಹೆಗಡೆ, ಸಿಆರ್‌ಪಿಸಿಯ ಸೆಕ್ಷನ್ 154 ಮತ್ತು 156 ರ ನಿಬಂಧನೆಗಳ ಪ್ರಕಾರ, ಯಾವುದೇ ನ್ಯಾಯಾಲಯವು ಪೊಲೀಸ್ ಅಧಿಕಾರಿಯ ತನಿಖೆಯನ್ನು ಪ್ರಶ್ನಿಸುವಂತಿಲ್ಲ. ಯಾರು ತನಿಖೆ ನಡೆಸಬೇಕೆಂದು ಅದು ಬಹಿರಂಗಪಡಿಸುವುದಿಲ್ಲ ಮತ್ತು ದೋಷಯುಕ್ತ ತನಿಖೆಯ ಆಧಾರದ ಮೇಲೆ ಆರೋಪಪಟ್ಟಿಯನ್ನು ತಳ್ಳಿ ಹಾಕಲಾಗುವುದಿಲ್ಲ . ಇದು ಕೇವಲ ಅಕ್ರಮವಾಗಿದೆ, ಅದನ್ನು ಸರಿಪಡಿಸಬಹುದು.ಆರೋಪಿಗಳ ವಿರುದ್ಧ ಗಂಭೀರ ಪೂರ್ವಾಗ್ರಹವನ್ನು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದಿದ್ದರು.

ಪ್ರಕರಣದ ಹಿನ್ನೆಲೆ:

ಟ್ಯಾಬ್ಲಾಯ್ಡ್ ಪತ್ರಿಕೆ ಸಂಪಾದಕ ಹಲ್ಲೇಗೆರೆ ಶಂಕರ್ ಅವರ ಪತ್ನಿ ಭಾರತಿ, ಅವರ ಇಬ್ಬರು ಪುತ್ರಿಯರಾದ ಸಿಂಚನಾ ಕುಮಾರಿ ಮತ್ತು ಸಿಂಧು ರಾಣಿ, ಮಗ ಮಧುಸಾಗರ್ ಮತ್ತು ಒಂಬತ್ತು ತಿಂಗಳ (ಸಿಂಧು ಅವರ ಮಗ) ಐವರು 2021ರ ಸೆಪ್ಟೆಂಬರ್ 17 ರಂದು ಮಾಗಡಿ ರಸ್ತೆಯ ತಿಗಳರಪಾಳ್ಯದಲ್ಲಿರುವ ಅವರ ನಿವಾಸದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಲವು ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಐವರ ಮೃತದೇಹಗಳು ಪತ್ತೆಯಾಗಿದ್ದವು.

ಪ್ರಕರಣದಲ್ಲಿ ಶಂಕರ್ ಒಂದನೇ ಆರೋಪಿ ಆಗಿದ್ದರೆ, ಆತನ ಅಳಿಯಂದಿರಾದ ಈಡಿಗ ಶ್ರೀಕಾಂತ್ ಮತ್ತು ಇಎಸ್ ಪ್ರವೀಣ್ ಕುಮಾರ್ 2ನೇ ಮತ್ತು 3ನೇ ಆರೋಪಿಯಾಗಿದ್ದಾರೆ. ಈ ಮೂವರ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾವಿನ ಟಿಪ್ಪಣಿಗಳು ಲಭ್ಯವಾಗಿವೆ. ಈ ಪ್ರಕರಣದಲ್ಲಿ ಶಂಕರ್ ಅವರೇ ದೂರುದಾರರು ಎಂಬುದು ಕುತೂಹಲಕಾರಿಯಾಗಿದೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

Recommended Video

Virat ಸಿಡಿಸಿದ ಅದ್ಭುತ ಫೋರ್ ಮತ್ತು ಇದಕ್ಕೆ ಗಂಗೂಲಿ ಕೊಟ್ಟ ರಿಯಾಕ್ಷನ್ ಫುಲ್ ವೈರಲ್ |#cricket|Oneindia Kannada

English summary
Bydarahalli mass suicide case: HC rejected bail for two accused and held PSI Can file chargesheet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X