ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಯಪ್ಪನಹಳ್ಳಿ-ಕೆಂಗೇರಿ ನಮ್ಮ ಮೆಟ್ರೋ ರೈಲು ದರ ಪಟ್ಟಿ

|
Google Oneindia Kannada News

ಬೆಂಗಳೂರು ಆಗಸ್ಟ್ 24; ನಮ್ಮ ಮೆಟ್ರೋ ಯೋಜನೆಯ ಮೈಸೂರು-ಕೆಂಗೇರಿ ವಿಸ್ತರಿತ ಮಾರ್ಗವು ಆಗಸ್ಟ್ 29ರಂದು ಉದ್ಘಾಟನೆಗೊಳ್ಳುತ್ತಿದೆ. ಮಾರ್ಗ ಉದ್ಘಾಟನೆಗೊಂಡ ಬಳಿಕ ಬೈಯಪ್ಪನಹಳ್ಳಿಯಿಂದ ಕೆಂಗೇರಿ ತನಕ ಮೆಟ್ರೋ ರೈಲು ಸಂಚಾರ ನಡೆಸಲಿದೆ.

ಆಗಸ್ಟ್ 29ರ ಭಾನುವಾರ ಬೆಳಗ್ಗೆ 10.30ಕ್ಕೆ ಮೈಸೂರು ರಸ್ತೆ-ಕೆಂಗೇರಿ ವಿಸ್ತರಿತ ಮಾರ್ಗವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ. ಸೋಮವಾರದಿಂದ ವಾಣಿಜ್ಯ ಸಂಚಾರ ಆರಂಭವಾಗಲಿದೆ.

ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗ ಆ. 29 ರಂದು ಉದ್ಘಾಟನೆಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗ ಆ. 29 ರಂದು ಉದ್ಘಾಟನೆ

ಮೈಸೂರು ರಸ್ತೆ (ನಾಯಂಡಹಳ್ಳಿ) ಯಿಂದ ಹೊರಡುವ ರೈಲು ಕೆಂಗೇರಿ ನಿಲ್ದಾಣವನ್ನು 15 ನಿಮಿಷದಲ್ಲಿ ತಲುಪಲಿದೆ. ಪ್ರತಿ 10 ನಿಮಿಷಕ್ಕೆ ಒಂದು ರೈಲನ್ನು ಓಡಿಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಹೆಚ್ಚಿನ ರೈಲು ಓಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ನಮ್ಮ ಮೆಟ್ರೋ ವಿಸ್ತರಣೆಗೆ ಎಡಿಬಿಯಿಂದ 500 ಮಿಲಿಯನ್ ಡಾಲರ್ ಸಾಲ ನಮ್ಮ ಮೆಟ್ರೋ ವಿಸ್ತರಣೆಗೆ ಎಡಿಬಿಯಿಂದ 500 ಮಿಲಿಯನ್ ಡಾಲರ್ ಸಾಲ

ಬೈಯಪ್ಪನಹಳ್ಳಿ-ಕೆಂಗೇರಿ ನಡುವಿನ ಪ್ರಯಾಣಕ್ಕೆ 56 ರೂ. ದರವನ್ನು ನಿಗದಿ ಮಾಡಲಾಗಿದೆ. ಬೆಳಗ್ಗೆ 7 ರಿಂದ 11 ಗಂಟೆ ಮತ್ತು ಸಂಜೆ 4.30 ರಿಂದ 7.30ರ ತನಕ ಬೈಯಪ್ಪನಹಳ್ಳಿ-ಕೆಂಗೇರಿ ನಡುವೆ 10 ನಿಮಿಷಕ್ಕೆ ಒಂದು ರೈಲು ಸಂಚಾರ ನಡೆಸಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ 5 ರಿಂದ 8 ನಿಮಿಷಕ್ಕೆ ಒಂದು ರೈಲು ಓಡಿಸಲು ಬಿಎಂಆರ್‌ಸಿಎಲ್ ಸಿದ್ಧವಿದೆ.

ಸಿಲ್ಕ್‌ಬೋರ್ಡ್‌ನಿಂದ ನಮ್ಮ ಮೆಟ್ರೋ ಕಾಮಗಾರಿ ಆರಂಭಸಿಲ್ಕ್‌ಬೋರ್ಡ್‌ನಿಂದ ನಮ್ಮ ಮೆಟ್ರೋ ಕಾಮಗಾರಿ ಆರಂಭ

55 ಕಿ. ಮೀ. ಮಾರ್ಗದಲ್ಲಿ ಮೆಟ್ರೋ ಸಂಚಾರ

55 ಕಿ. ಮೀ. ಮಾರ್ಗದಲ್ಲಿ ಮೆಟ್ರೋ ಸಂಚಾರ

ಇನ್ನೂ 7.5 ಕಿ. ಮೀ. ವಿಸ್ತರಿತ ಮಾರ್ಗದಲ್ಲಿ ರೈಲು ಪ್ರಯಾಣ ಆರಂಭವಾದರೆ ಬೆಂಗಳೂರು ನಗರದಲ್ಲಿ ಒಟ್ಟು 55 ಕಿ. ಮೀ. ಮಾರ್ಗದಲ್ಲಿ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ. ದೆಹಲಿ ಮತ್ತು ಹೈದರಾಬಾದ್ ನಗರದಲ್ಲಿ ಈಗಾಗಲೇ ಮೆಟ್ರೋ 55 ಕಿ. ಮೀ. ಮಾರ್ಗದಲ್ಲಿ ಸಂಚಾರ ನಡೆಸುತ್ತಿವೆ. ಹಸಿರು ಮಾರ್ಗದಲ್ಲಿ 30 ಕಿ. ಮೀ. ಮತ್ತು ನೇರಳೆ ಮಾರ್ಗದಲ್ಲಿ 25 ಕಿ. ಮೀ. ಮೆಟ್ರೋ ರೈಲು ಸಂಚಾರ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲು ನಿಲ್ದಾಣದ ವಿವರಗಳು

ರೈಲು ನಿಲ್ದಾಣದ ವಿವರಗಳು

ಮೈಸೂರು ರಸ್ತೆ-ಕೆಂಗೇರಿ ಬಸ್ ಟರ್ಮಿನಲ್ ತನಕ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದೆ ಅಲ್ಲಿಯ ತನಕ ಮಾತ್ರ ರೈಲು ಸಂಚಾರ ನಡೆಸಲಿದೆ. ಈ ಮಾರ್ಗವನ್ನು ಚಲ್ಲಘಟ್ಟ ತನಕ ವಿಸ್ತರಣೆ ಮಾಡಲಾಗುತ್ತಿದ್ದು, ಈ ಕಾಮಗಾರಿ ಇನ್ನೂ ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಈ ಮಾರ್ಗದಲ್ಲಿ ಮೈಸೂರು ರಸ್ತೆ (ನಾಯಂಡಹಳ್ಳಿ) ಬಳಿಕ ರಾಜರಾಜೇಶ್ವರಿನಗರ, ಜ್ಞಾನಭಾರತಿ, ಪಟ್ಟಣಗೆರೆ, ಮೈಲಸಂದ್ರ, ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣಗಳಿವೆ. ಮುಂದೆ ಚಲ್ಲಘಟ್ಟ ನಿಲ್ದಾಣ ನಿರ್ಮಾಣವಾಗಲಿದೆ.

75 ಸಾವಿರ ಜನರಿಗೆ ಅನುಕೂಲವಾಗಲಿದೆ

75 ಸಾವಿರ ಜನರಿಗೆ ಅನುಕೂಲವಾಗಲಿದೆ

ನಮ್ಮ ಮೆಟ್ರೋ ನೇರಳೆ ಮಾರ್ಗದ ವಿಸ್ತರಿತ ಮಾರ್ಗ ನಿರ್ಮಾಣದಿಂದ ಸುಮಾರು 75 ಸಾವಿರ ಜನರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಮೈಸೂರು ಕಡೆಯಿಂದ ಆಗಮಿಸುವ ಜನರು ವಿಧಾನಸೌಧ, ಎಂ. ಜಿ. ರಸ್ತೆ, ಬೈಯಪ್ಪನಹಳ್ಳಿ ಕಡೆಗೆ ತೆರಳಲು ಈ ರೈಲು ಅನುಕೂಲ ಕಲ್ಪಿಸಲಿದೆ.

ಒಟ್ಟು 7.5 ಕಿ. ಮೀ. ವಿಸ್ತರಿತ ಮಾರ್ಗ (ಚಲ್ಲಘಟ್ಟ ತನಕ) ಯೋಜನೆಯ ವೆಚ್ಚ 1,560 ಕೋಟಿ ರೂ. ಆಗಿದೆ. ಪ್ರತಿ ಕಿ. ಮೀ.ಗೆ 250 ಕೋಟಿ ಗೂ ಅಧಿಕ ನಿರ್ಮಾಣ ವೆಚ್ಚ ಆಗಿದೆ. ಯೋಜನೆಗಾಗಿ ಸ್ವಾಧೀನಕ್ಕೆ ಪಡೆದ ಭೂಮಿಗೆ ಪರಿಹಾರ ನೀಡಲು ಸುಮಾರು 300 ಕೋಟಿ ವೆಚ್ಚ ಮಾಡಲಾಗಿದೆ.

Recommended Video

ಕ್ರಿಕೆಟ್ ದಿಗ್ಗಜ ನಿಂದ ಕಿಚ್ಚ ಸುದೀಪ್ ಗೆ ಬರ್ತಡೇ ಗೂ ಮುನ್ನ ಸಿಕ್ತು ವಿಶೇಷ ಗಿಫ್ಟ್ | Oneindia Kannada
ಹಲವು ಗಡುವು ಪೂರ್ಣಗೊಂಡಿದೆ

ಹಲವು ಗಡುವು ಪೂರ್ಣಗೊಂಡಿದೆ

ಮೈಸೂರು ರಸ್ತೆ-ಕೆಂಗೇರಿ ವಿಸ್ತರಿತ ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲು ಹಲವು ಗಡುವು ಪೂರ್ಣಗೊಂಡಿದೆ. ಈಗ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗುತ್ತಿದೆ. 2018ರ ಡಿಸೆಂಬರ್‌ನಲ್ಲಿಯೇ ಮಾರ್ಗ ಲೋಕಾರ್ಪಣೆಯಾಗಬೇಕಿತ್ತು. 2019ರ ಮಾರ್ಚ್‌ಗೆ ಮುಂದೂಡಲಾಗಿತ್ತು. ಬಳಿಕ 2019ರ ನವೆಂಬರ್, 2020ರ ಅಕ್ಟೋಬರ್, 2021ರ ಫೆಬ್ರವರಿ, ಏಪ್ರಿಲ್ ಗಡುವು ಇತ್ತು ಅಂತಿಮವಾಗಿ ಆಗಸ್ಟ್‌ನಲ್ಲಿ ಮಾರ್ಗ ಲೋಕಾರ್ಪಣೆಗೊಳ್ಳುತ್ತಿದೆ.
7.5 ಕಿ. ಮೀ. ಮಾರ್ಗ ಸಂಪೂರ್ಣವಾಗಿ ಎತ್ತರಿಸಿದ ಮಾರ್ಗವಾಗಿದ್ದು, ಯಾವುದೇ ಸುರಂಗದ ನಿಲ್ದಾಣಗಳಿಲ್ಲ.

English summary
Namma metro Mysore road Kengeri line will open for people on August 29, 2021. Here are the fare list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X