ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಗೆ ಹೋಗಿ ಸಂಚಾರಿ ಪೊಲೀಸರು ಸಂಗ್ರಹಿಸಿದ್ದು 18 ಕೋಟಿ ದಂಡ!

|
Google Oneindia Kannada News

ಬೆಂಗಳೂರು, ನವೆಂಬರ್ 16: ಬೆಂಗಳೂರು ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ದಂಡ ಸಂಗ್ರಹ ಮಾಡಲು ಪೊಲೀಸರು ಮನೆಗೆ ಬರಲಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಮನೆಗಳಿಗೆ ಭೇಟಿ ನೀಡಿ ಪೊಲೀಸರು 18 ಕೋಟಿ ದಂಡವನ್ನು ಸಂಗ್ರಹ ಮಾಡಿದ್ದಾರೆ.

ನಗರದಲ್ಲಿ ವಾಹನ ಸವಾರರು ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಪೊಲೀಸರು ದಂಡ ಹಾಕಿದ್ದಾರೆ. ಸುಮಾರು 150 ಕೋಟಿ ರೂ. ದಂಡ ಇಲಾಖೆಗೆ ಬರಬೇಕಿದೆ. ಆದ್ದರಿಂದ ನಗರದಲ್ಲಿ ಮನೆಗಳಿಗೆ ಭೇಟಿ ನೀಡಿ ಪೊಲೀಸರು ದಂಡವನ್ನು ಸಂಗ್ರಹ ಮಾಡುತ್ತಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸಿದರೆ ಪರೀಕ್ಷೆ; ಶೇ 60ರಷ್ಟು ಅಂಕ ಕಡ್ಡಾಯ! ಸಂಚಾರಿ ನಿಯಮ ಉಲ್ಲಂಘಿಸಿದರೆ ಪರೀಕ್ಷೆ; ಶೇ 60ರಷ್ಟು ಅಂಕ ಕಡ್ಡಾಯ!

ಅಕ್ಟೋಬರ್ ತಿಂಗಳಿನಲ್ಲಿ ಪ್ರಾಯೋಗಿಕವಾಗಿ 10ಕ್ಕಿಂತ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ಮನೆಗೆ ಹೋಗಿ ದಂಡ ಸಂಗ್ರಹ ಮಾಡಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಅಕ್ಟೋಬರ್ ತಿಂಗಳಿನಲ್ಲಿ 18 ಕೋಟಿ ದಂಡ ಸಂಗ್ರಹವಾಗಿದೆ.

ಬೆಂಗಳೂರು; ದಂಡ ಸಂಗ್ರಹಕ್ಕೆ ಮನೆಗೆ ಬರ್ತಾರೆ ಸಂಚಾರಿ ಪೊಲೀಸ್ಬೆಂಗಳೂರು; ದಂಡ ಸಂಗ್ರಹಕ್ಕೆ ಮನೆಗೆ ಬರ್ತಾರೆ ಸಂಚಾರಿ ಪೊಲೀಸ್

By Visiting Home Traffic Police Collected 18 Crore

ಸಂಚಾರಿ ಪೊಲೀಸರು ನೀಡುವ ಮಾಹಿತಿ ಪ್ರಕಾರ 2020ರ ಅಕ್ಟೋಬರ್ ತನಕ 65,23,498 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 67,85,04,430 ರೂ. ದಂಡವನ್ನು ಸಂಗ್ರಹ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಪೊಲೀಸರು ಕೇವಲ 49.13 ಕೋಟಿ ದಂಡ ಸಂಗ್ರಹ ಮಾಡಿದ್ದಾರೆ.

61 ಬಾರಿ ಸಂಚಾರಿ ನಿಯಮ ಉಲ್ಲಂಘನೆ; ಸವಾರನಿಗೆ ತರಬೇತಿ! 61 ಬಾರಿ ಸಂಚಾರಿ ನಿಯಮ ಉಲ್ಲಂಘನೆ; ಸವಾರನಿಗೆ ತರಬೇತಿ!

ಪೊಲೀಸರು ಮನೆಗೆ ಬರಬಾರದು ಎಂದು ನಿಮಗೆ ಅನ್ನಿಸಿದರೆ ಹತ್ತಿರದ ಸಂಚಾರಿ ಪೊಲೀಸ್ ಠಾಣೆಗೆ ಹೋಗಿ ತಕ್ಷಣ ದಂಡವನ್ನು ಪಾವತಿ ಮಾಡಿ ಎಂದು ಪೊಲೀಸರು ಕರೆ ನೀಡಿದ್ದಾರೆ. ಮನೆಗಳಿಗೆ ಹೋದಾಗ ಸಹ ದಂಡ ಕಟ್ಟಲು ಹಲವು ಸವಾರರಿಗೆ ಆರ್ಥಿಕ ಸ್ಥಿತಿ ನೋಡಿಕೊಂಡು ಅವಕಾಶವನ್ನು ಸಹ ನೀಡಲಾಗಿದೆ.

Recommended Video

ಲಸಿಕೆಯಿಂದ ತೊಂದ್ರೆ ಆಗತ್ತಾ! | Oneindia Kannada

ಜಂಕ್ಷನ್‌ಗಳಲ್ಲಿ ಇರುವ ಪೊಲೀಸರ ಬಳಿ ವಾಹನ ಸವಾರರು ತಮ್ಮ ವಾಹನದ ವಿರುದ್ಧ ದಾಖಲಾಗಿರುವ ಪ್ರಕರಣಗಳ ಮಾಹಿತಿ ಪಡೆಯಬಹುದು. ಆಗ ಪೊಲೀಸರು ಸಹ ದಂಡವನ್ನು ಪಾವತಿ ಮಾಡಲು ಸಮಯ ನೀಡುತ್ತಾರೆ.

English summary
Bengaluru traffic police collected 18 crore fine by visiting the home of the people who have more than five violations cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X