ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಬಿ. ವೈ. ವಿಜಯೇಂದ್ರ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 18 : ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿ. ವೈ. ವಿಜಯೇಂದ್ರ ಪಾಲ್ಗೊಂಡಿದ್ದರು. ಮುಖ್ಯಮಂತ್ರಿಗಳ ಪುತ್ರನ ಭಾಗವಹಿಸಿದ ಕುರಿತು ಚರ್ಚೆ ಆರಂಭವಾಗಿತ್ತು.

ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಅನುಕೂಲವಾಗುವಂತೆ ಪರಿಣಿತರ ಸಭೆ ಗುರುವಾರ ನಡೆಯಿತು. ಡಾ. ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಪಾಲ್ಗೊಂಡಿದ್ದರು.

 ಲಿಂಗಾಯತ ಸಮುದಾಯದ ಭವಿಷ್ಯದ ನಾಯಕ ಬಿವೈ ವಿಜಯೇಂದ್ರ? ಲಿಂಗಾಯತ ಸಮುದಾಯದ ಭವಿಷ್ಯದ ನಾಯಕ ಬಿವೈ ವಿಜಯೇಂದ್ರ?

ಸರ್ಕಾರಿ ಸಭೆಯಲ್ಲಿ ಮುಖ್ಯಮಂತ್ರಿಗಳ ಪುತ್ರನಿಗೆ ಏನು ಕೆಲಸ? ಎಂಬ ಚರ್ಚೆಗಳು ಆರಂಭವಾಗಿದ್ದವು. ಬೆಂಗಳೂರು ನಗರದ ಕೆಲವು ಪ್ರಮುಖ ನಾಗರಿಕರು, ಪದಾಧಿಕಾರಿಗಳು, ಪರಿಣಿತರೊಂದಿಗೆ ಲಂಡನ್‌ನ ಸಂಚಾರ ಪ್ರಮುಖರಾದ ವರ್ಮಾ ಮತ್ತು ಬೆನ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಎಚ್ ಡಿ ಕುಮಾರಸ್ವಾಮಿಗೆ ಎಲ್ಲಿದೆ ನೈತಿಕತೆ?; ವಿಜಯೇಂದ್ರ ಎಚ್ ಡಿ ಕುಮಾರಸ್ವಾಮಿಗೆ ಎಲ್ಲಿದೆ ನೈತಿಕತೆ?; ವಿಜಯೇಂದ್ರ

BY Vijayendra Clarification On Participate In Dycm development

ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಬಿಎಂಆರ್‌ಸಿಎಲ್ ಮುಖ್ಯಸ್ಥ ಅಜಯ್ ಸೇಠ್, ಬಿಎಂಟಿಸಿ ಮುಖ್ಯಸ್ಥೆ ಶಿಖಾ, ಬೆಂಗಳೂರು ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡ ಮುಂತಾದವರು ಉಪಸ್ಥಿತರಿದ್ದರು.

ಮಗ ವಿಜಯೇಂದ್ರ ಮೂಲಕ ಯಡಿಯೂರಪ್ಪ ವರ್ಗಾವಣೆ ದಂಧೆ: ಎಚ್ ಡಿಕೆಮಗ ವಿಜಯೇಂದ್ರ ಮೂಲಕ ಯಡಿಯೂರಪ್ಪ ವರ್ಗಾವಣೆ ದಂಧೆ: ಎಚ್ ಡಿಕೆ

ವಿಜಯೇಂದ್ರ ಸ್ಪಷ್ಟನೆ : ಉಪ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡ ಬಗ್ಗೆ ಬಿ. ವೈ. ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ಶುಕ್ರವಾರ ಅವರು ಟ್ವೀಟ್ ಮಾಡಿದ್ದು, "ಲಂಡನ್ ನಿಂದ ಆಗಮಿಸಿದ್ದ ಸಂಚಾರ ತಜ್ಞರೊಂದಿಗೆ, ಬೆಂಗಳೂರಿನ ವಾಹನದಟ್ಟಣೆ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಬಿಪ್ಯಾಕ್ ಆಯೋಜಿಸಿದ್ದ ಚರ್ಚೆ ಕಾರ್ಯಕ್ರಮದಲ್ಲಿ, ಮಿತ್ರರಾದ ಆರ್.ಕೆ.ಮಿಶ್ರಾ, ಯುನೈಟೆಡ್ ವೇ ಸಂಸ್ಥೆಯ ಪ್ರಶಾಂತ್ ಪ್ರಕಾಶ್ ಮೊದಲಾದವರೊಂದಿಗೆ ನಗರದ ಒಬ್ಬ ಸಾಮಾನ್ಯ ನಾಗರಿಕನಾಗಿ ಭಾಗವಹಿಸಿದ್ದೆ" ಎಂದು ಹೇಳಿದ್ದಾರೆ.

ಉಪ ಮುಖ್ಯಮಂತ್ರಿಗಳು ನಡೆಸಿದ ಸರ್ಕಾರಿ ಸಭೆಯಲ್ಲಿ ಮುಖ್ಯಮಂತ್ರಿಗಳ ಪುತ್ರನಿಗೆ ಏನು ಕೆಲಸ? ಎಂದು ಪ್ರಶ್ನೆ ಮಾಡಿದ್ದವರಿಗೆ ವಿಜಯೇದ್ರ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ.

English summary
Karnataka chief minister B.S.Yediyurappa son B.Y. Vijayendra participate in the meeting on Bengaluru development chaired by Dr. Ashwath Narayan deputy chief minister. In a tweet B.Y. Vijayendra clarified why he take part in meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X