ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಲೇಕಣಿದು ಆತ್ಮಹತ್ಯೆ ಯತ್ನ'

By Srinath
|
Google Oneindia Kannada News

ಬೆಂಗಳೂರು, ಏ.14- ತಮ್ಮ ಪ್ರತಿಸ್ಪರ್ಧಿ ನಂದಲ್ ನಿಲೇಕಣಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವುದು ಆತ್ಮಹತ್ಯಾ ಪ್ರಯತ್ನದಂತಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅನಂತ್‌ ಕುಮಾರ್ ಜರಿದಿದ್ದಾರೆ.

ಸತತವಾಗಿ 5 ಬಾರಿ ಗೆದ್ದು, 6ನೇ ಬಾರಿ ಗೆಲ್ಲುವ ಪ್ರಯತ್ನದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರು ಆಧಾರ್ ಯೋಜನೆಯ ಮಾಜಿ ಮುಖ್ಯಸ್ಥ ನಂದಲ್ ನಿಲೇಕಣಿ ಅವರನ್ನು ಎದುರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಪಿಟಿಐ ಸುದ್ದಿ ಸಂಸ್ಥೆ ಜತೆ ಮಾತನಾಡಿರುವ ಅನಂತ್, ನಂದನ್ ನಿಲೇಕಣಿ ಅವರದು ಆತ್ಮಹತ್ಯಾ ಯತ್ನವೇ ಸರಿ. ಅವರು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಆ ಪಕ್ಷವೋ ಭ್ರಷ್ಟಾಚಾರ ಮತ್ತು ಹಗರಣಗಳನ್ನು ಪ್ರತಿನಿಧಿಸುತ್ತದೆ. ಅದರರ್ಥ ನಿಲೇಕಣಿ ಸಹ ಭ್ರಷ್ಟಾಚಾರ ಮತ್ತು ಹಗರಣಗಳನ್ನು ಪ್ರತಿನಿಧಿಸುತ್ತಿದ್ದಾರೆ ಎಂದಾಯಿತು ಎಂದು ಲೇವಡಿ ಮಾಡಿದ್ದಾರೆ. (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಹೀಗಿದೆ ನೋಡಿ)

by-representing-congress-in-polls-nilekani-committing-hara-kiri-ananth
ಇನ್ನು, ಬೆಂಗಳೂರಿನ ಇನ್ಫೋಸಿಸ್ ಕಂಪನಿಯ ಸಹ ಸಂಸ್ಥಾಪಕರಾಗಿ ಮತ್ತು ಆಧಾರ್ ಯೋಜನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವುದು ನಿಲೇಕಣಿಗೆ ವರವಾಗಲಿದೆ ಎಂಬ ವಾದವನ್ನು ಸಹ ಅನಂತ್ ಇದೇ ಸಂದರ್ಭದಲ್ಲಿ ಅಲ್ಲಗಳೆದಿದ್ದಾರೆ. ನಿಲೇಕಣಿ ಅವರನ್ನು ಜನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಷ್ಟೇ ನೋಡುತ್ತಾರೆ. ಆದರೆ ಆ ಪಕ್ಷವು ಭ್ರಷ್ಟಾಚಾರದಿಂದ ತುಂಬಿತುಳುಕಿದೆ ಎಂದು ಅನಂತ್ ತಮ್ಮ ವಾದವನ್ನು ಸಮರ್ಥಿಸಿಕೊಂಡರು. (ಅನಂತಕುಮಾರ್ ಗ್ಯಾಲರಿ ಚಿತ್ರಗಳು)

ಕಾಂಗ್ರೆಸ್ ಅಂದರೆ ಆರ್ಥಿಕ ಸಂಕಷ್ಟಗಳು ಮತ್ತು ಬೆಲೆಯೇರಿಕೆ ಸಂಕಟಗಳನ್ನು ಪ್ರತಿನಿಧಿಸುವ ಪಕ್ಷವಾಗಿದೆ. ಆದ್ದರಿಂದ ನಿಲೇಕಣಿ ಸಹ ಆರ್ಥಿಕ ಸಂಕಷ್ಟ ಮತ್ತು ಬೆಲೆಯೇರಿಕೆ ಸಂಕಟಗಳನ್ನೇ ಪ್ರತಿನಿಧಿಸುತ್ತಿದ್ದಾರೆ. ಮೊಣಕಾಲಿನಲ್ಲಿ ಚೈತನ್ಯವೇ ಇಲ್ಲದ ಶಕ್ತಿಹೀನ ಸರಕಾರ ಮತ್ತು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದ ಬಲಹೀನ ಪ್ರಧಾನಿ (ಮನಮೋಹನ್ ಸಿಂಗ್) ಅವರನ್ನು ನಿಲೇಕಣಿ ಪ್ರತಿನಿಧಿಸುತ್ತಾರೆ ಎಂದು ನಿಲೇಕಣಿ ವಿರುದ್ಧ ಅನಂತ್ ಹರಿಹಾಯ್ದಿದ್ದಾರೆ.

ಅವರು ಕಾಂಗ್ರೆಸ್ ಪಕ್ಷದ ಎಲ್ಲ ನ್ಯೂನತೆಗಳನ್ನು ಪ್ರತಿನಿಧಿಸುತ್ತಾರೆ. UIDAI ಅಧ್ಯಕ್ಷರಾಗಿ ಕ್ಯಾಬಿನೆಟ್ ದರ್ಜೆಯ ಸ್ಥಾನ ಅನುಭವಿಸುತ್ತಿರುವಾಗ ಪಕ್ಷದ ವತಿಯಿಂದ ಅನಂತ ಭ್ರಷ್ಟಾಚಾರಗಳು ನಡೆಯುತ್ತಿದ್ದರೂ ಅದರ ವಿರುದ್ಧ ನಿಲೇಕಣಿ ಒಂದೇ ಒಂದು ಮಾತನ್ನೂ ಆಡಲಿಲ್ಲ. ಹಣದುಬ್ಬರ, ಆರ್ಥಿಕ ಸಂಕಷ್ಟಗಳು ತಾಂಡವವಾಡುತ್ತಿದ್ದಾಗ ನಿಲೇಕಣಿ ಮೌನವಾಗಿಬಿಟ್ಟರು. ಅವುಗಳ ವಿರುದ್ಧ ನಿಲೇಕಣಿ ಧ್ವನಿಯೆತ್ತಲೇ ಇಲ್ಲ ಎಂದು ಅನಂತ್ PTIಗೆ ತಿಳಿಸಿದ್ದಾರೆ.

English summary
By representing Congress in elections Nilekani committing hara-kiri says BJP MP HN Ananth Kumar, The 54-year-old Ananth said: "He has committed hara-kiri. Today, he represents whatever Congress is representing. Since Congress represents corruption and scams, now he also represents corruption and scams."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X