• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನರ ಹಣ ದೋಚುತ್ತಿರುವ ಜನಪ್ರತಿನಿಧಿಗಳು: ರವಿ ಕೃಷ್ಣಾರೆಡ್ಡಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 01: ಶಿವಾಜಿನಗರ ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾದ ಡಾ. ಅಬ್ದುಲ್ ಸುಭಾನ್ ಅವರ ಪರವಾಗಿ ಪ್ರಚಾರ ಮೆರವಣಿಗೆಯಲ್ಲಿ ಪಕ್ಷದ ಅಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರು ಭಾಗವಹಿಸಿದ್ದರು.

ಒಮ್ಮೆಯೂ ಚುನಾವಣೆ ಗೆಲ್ಲದ ಅಭ್ಯರ್ಥಿಗೆ, ಕಾಂಗ್ರೆಸ್ ಮತ್ತೆಮತ್ತೆ ಟಿಕೆಟ್ಒಮ್ಮೆಯೂ ಚುನಾವಣೆ ಗೆಲ್ಲದ ಅಭ್ಯರ್ಥಿಗೆ, ಕಾಂಗ್ರೆಸ್ ಮತ್ತೆಮತ್ತೆ ಟಿಕೆಟ್

"ರಾಜ್ಯದ ಪ್ರಮುಖ ಪಕ್ಷದ ಜನಪ್ರತಿನಿಧಿಗಳು ವಂಚಕ ಕಂಪನಿಗಳಿಗೆ ಶ್ರೀರಕ್ಷೆಯಾಗಿ ನಿಂತಿದ್ದು, ಅದರಲ್ಲಿ ನೇರವಾಗಿ ಪಾಲುದಾರರಾಗಿದ್ದಾರೆ. ರಾಜ್ಯದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ. ನೂರಾರು ಕುಟುಂಬಗಳಲ್ಲಿ ಈ ಕಾರಣಕ್ಕಾಗಿ ಸಾವು-ನೋವಾಗಿದೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಕಾರ್ಯಗಳು ನಿಂತುಹೋಗಿವೆ, ಕುಟುಂಬಗಳು ಮುರಿದು ಬಿದ್ದಿವೆ. ಈ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ವಂಚಿತರ ಪರವಾಗಿ ನ್ಯಾಯಾಲಯಗಳಲ್ಲಿ ಮತ್ತು ಇತರೆಡೆಗಳಲ್ಲಿ ನಿರಂತರ ಹೋರಾಟ ಮಾಡುತ್ತಿದೆ. ನಮ್ಮ ಪ್ರಯತ್ನದ ಫಲವಾಗಿ ಸುಮಾರು 25ಕ್ಕೂ ಹೆಚ್ಚು ಪೊಂಜಿ ಕಂಪನಿಗಳು ಬಾಗಿಲು ಹಾಕಿವಂತಾಗಿದೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಲು ಹಾಗೂ ವಂಚಿತರಿಗೆ ಶೀಘ್ರವಾಗಿ ನ್ಯಾಯ ಒದಗಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾದ ಡಾ. ಅಬ್ದುಲ್ ಸುಭಾನ್ ಅವರಿಗೆ ಮತ ನೀಡಿ ಬೆಂಬಲಿಸಬೇಕೆಂದು'' ಮತದಾರರಲ್ಲಿ ಮನವಿ ಮಾಡಿದರು.

ಅವರು ಕ್ಷೇತ್ರದ ಭಾರತೀನಗರ, ವಸಂತನಗರ, ರಸೆಲ್ ಮಾರ್ಕೆಟ್, ಶಿವಾಜಿ ನಗರದ ಪ್ರಮುಖ ಬೀದಿಗಳು, ರಾಮಸ್ವಾಮಿಪಾಳ್ಯ, ಹಲಸೂರು ಹಾಗೂ ಇತರ ಪ್ರದೇಶಗಳಲ್ಲಿ ಇಂದು ರ್ಯಾಲಿ ಮಾಡುವ ಮೂಲಕ ಪ್ರಚಾರ ಕಾರ್ಯ ಕೈಗೊಂಡರು.

ಮುಖಂಡರ ಅಸಹಕಾರ: ಕಾಂಗ್ರೆಸ್ಸಿಗೆ 'ಶಿವಾಜಿನಗರ' ದಲ್ಲಿ ಧರ್ಮಸಂಕಟಮುಖಂಡರ ಅಸಹಕಾರ: ಕಾಂಗ್ರೆಸ್ಸಿಗೆ 'ಶಿವಾಜಿನಗರ' ದಲ್ಲಿ ಧರ್ಮಸಂಕಟ

''ರಾಜ್ಯದ ನೆಲ, ಜಲ, ಭಾಷೆಯನ್ನು ರಕ್ಷಿಸಿ ಅಭಿವೃದ್ಧಿಪಡಿಸಬೇಕಾಗಿದೆ, ಭ್ರಷ್ಟ ಅಧಿಕಾರಿಗಳಿಂದ ಮತ್ತು ರಾಜಕಾರಣಿಗಳಿಂದ ರಾಜ್ಯವನ್ನು ರಕ್ಷಿಸಬೇಕಾಗಿದೆ. ಕೇವಲ ವೈಯಕ್ತಿಕ ಅಭಿವೃದ್ಧಿಗೆ, ಅಧಿಕಾರಕ್ಕಾಗಿ ಮತ್ತು ಜನರಿಗೆ ಮೋಸ ಮಾಡಲೆಂದೇ ರಾಜಕೀಯ ಮಾಡುತ್ತಿದ್ದಾರೆ. ಇಂಥವರಿಗೆ ಛೀಮಾರಿ ಹಾಕಿ, ಸ್ವಚ್ಛ- ಪ್ರಾಮಾಣಿಕ - ಜನಪರ ರಾಜಕಾರಣಕ್ಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ಬೆಂಬಲಿಸಬೇಕು. ಅವರ ಹೋರಾಟವನ್ನು ಕಂಡು ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮತ್ತು ಶಿವಾಜಿನಗರವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಸ್ಪರ್ಧಿಸಿದ್ದೇನೆ ಆದ್ದರಿಂದ ಶಿವಾಜಿನಗರದ ಮತದಾರರು ತಮ್ಮನ್ನು ಬೆಂಬಲಿಸಬೇಕು'' ಎಂದು ಪಕ್ಷದ ಅಭ್ಯರ್ಥಿಯಾದ ಡಾ. ಅಬ್ದುಲ್ ಸುಭಾನ್ ಮತದಾರರಲ್ಲಿ ಕೇಳಿಕೊಂಡರು.

English summary
Karnataka rashtra samithi President Ravi Krishna Reddy campaigned for Shivajinagar candidate, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X