ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವೆ ಓಡಲಿದೆ ಚಾಲಕ ರಹಿತ ಮೆಟ್ರೋ

|
Google Oneindia Kannada News

ಬೆಂಗಳೂರು, ಏ.15: ಚಾಲಕ ರಹಿತ ಮೆಟ್ರೋ ಓಡಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಎರಡನೇ ಹಂತದ ಮೆಟ್ರೋ ಯೋಜನೆಯಲ್ಲಿ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಮೊದಲ ಬಾರಿಗೆ ಚಾಲಕ ರಹಿತ ಮೆಟ್ರೋ ಓಡಾಟ ನಡೆಸಲಿದೆ.

ಕಮ್ಯುನಿಕೇಷನ್ ಬೇಸ್ಡ್ ಟ್ರೈನ್ ಕಂಟ್ರೋಲ್ ಸಿಗ್ನಲಿಂಗ್ ಸಿಸ್ಟಮ್ ತಂತ್ರಜ್ಞಾನವನ್ನು ಎರಡನೇ ಹಂತದ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತದೆ. ರೈಲನ್ನು ನಿಯಂತ್ರಣ ಕೊಠಡಿಯಿಂದಲೇ ನಿರ್ವಹಣೆ ಮಾಡಲಾಗುತ್ತದೆ. ಒಂದನೇ ಹಂತದಲ್ಲಿ ಈಗ ರೈಲು ಕಾರ್ಯಾಚರಣೆಗೊಳಿಸುತ್ತಿರುವ ವ್ಯವಸ್ಥೆಯಲ್ಲಿ ಡಿಟಿಜಿ ವ್ಯವಸ್ಥೆ ಇದೆ.

ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣಗಳು ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣಗಳು

ರೈಲು ಕಾರ್ಯಾಚರಣೆಯ ಕೆಸಲದಲ್ಲಿ ಸಣ್ಣ ತಪ್ಪುಗಳನ್ನು ಮಾಡಿದರೂ ರೈಲು ಸಂಚಾರಕ್ಕೆ ಅಡ್ಡಿಯಾಗುತ್ತದೆ. ಇದರ ಬದಲು ಸ್ವಯಂ ಚಾಲಿತ ತಂತ್ರಜ್ಞಾನವನ್ನು ತಂದರೆ ಮಾನವ ತಪ್ಪುಗಳನ್ನು ಶೂನ್ಯಮಾಡಬಹುದಾಗಿದೆ.

ಚಾಲಕ ರಹಿತ ಮೆಟ್ರೋ ಬೇರೆ ದೇಶಗಳಲ್ಲಿದೆ

ಚಾಲಕ ರಹಿತ ಮೆಟ್ರೋ ಬೇರೆ ದೇಶಗಳಲ್ಲಿದೆ

ಚಾಲಕನಿಲ್ಲದೆ ಸ್ವಯಂ ಚಾಲಿತವಾಗಿ ಚಲಿಸುವ ರೈಲು ವ್ಯವಸ್ಥೆ ಬೇರೆ ಬೇರೆ ದೇಶಗಳಲ್ಲಿವೆ. ಇದೀಗ ನಮ್ಮ ಮೆಟ್ರೋದಲ್ಲೂ ಈ ಯೋಜನೆ ಅನುಷ್ಠಾನಕ್ಕೆ ತರಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಮೊದಲು ಅನುಷ್ಠಾನ

ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಮೊದಲು ಅನುಷ್ಠಾನ

ಎರಡನೇ ಹಂತದ ಯೋಜನೆಯಡಿ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಸುವ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗ ನಿರ್ಮಾಣವಾಗುತ್ತಿದೆ. ಈ ಮಾರ್ಗದಲ್ಲಿ ಚಾಲಕ ರಹಿತ ರೈಲನ್ನು ಚಲಾಯಿಸಲು ತೀರ್ಮಾನಿಸಲಾಗಿದೆ.

ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್ ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್

2021ಕ್ಕೆ ಮಾರ್ಗ ನಿರ್ಮಾಣಗೊಂಡು ವಾಣಿಜ್ಯ ಸಂಚಾರ ಆರಂಭ

2021ಕ್ಕೆ ಮಾರ್ಗ ನಿರ್ಮಾಣಗೊಂಡು ವಾಣಿಜ್ಯ ಸಂಚಾರ ಆರಂಭ

2021ಕ್ಕೆ ಮಾರ್ಗ ಪೂರ್ಣಗೊಂಡು ವಾಣಿಜ್ಯ ಸಂಚಾರ ಆರಂಭವಾಗಲಿದೆ. ನಂತರ ಚಾಲಕ ರಹಿತ ರೈಲು ಈ ಮಾರ್ಗದಲ್ಲಿ ಕಾರ್ಯಾಚರಣೆಗೊಳ್ಳಲಿದೆ. ಎರಡನೇ ಹಂತದ ಮಾರ್ಗದಲ್ಲಿ ಹಲವಾರು ತಿರುವುಗಳಿವೆ. ಇಂತಹ ತಿಇರುವುಗಳಲ್ಲಿ ಬಹಳ ಜಾಗರೂಕತೆಯಿಂದ ರೈಲು ಸಂಚರಿಸಬೇಕಿದೆ.

ತಪ್ಪುಗಳಾದರೆ ಎನ್ನುವ ಭಯ ಬೇಡ

ತಪ್ಪುಗಳಾದರೆ ಎನ್ನುವ ಭಯ ಬೇಡ

ನೂತನ ತಂತ್ರಜ್ಞಾನದಿಂದ ಚಾಲಕರ ತಪ್ಪುಗಳೇ ಇಲ್ಲದಂತೆ ಮಾಡಬಹುದು ಚಾಲಕರು ರೈಲು ಚಲಾಯಿಸುವಾಗ ಸಣ್ಣ ತಪ್ಪು ಮಾಡಿದರೂ ಸಂಚಾರ ಸ್ಥಗಿತಗೊಳ್ಳುತ್ತದೆ. ರಾಜಾಜಿನಗರ ಮೆಟ್ರೋ ನಿಲ್ದಾಣಕ್ಕೆ ಪ್ರವೇಶಿಸುವ ಮಾರ್ಗದಲ್ಲಿ ಸಂಕಿರ್ಣವಾದ ತಿರುವು ಇದೆ. ಕೆಲ ತಿಂಗಳ ಹಿಂದೆ ಈ ತಿರುವಿನಲ್ಲಿ ನಿಗದಿಪಡಿಸಿದ್ದಕ್ಕಿಂತ ವೇಗವಾಗಿ ರೈಲು ಚಲಾಯಿಸಿದ್ದರಿಂದ ರೈಲು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದ್ದರು.

ನಮ್ಮ ಮೆಟ್ರೋದಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಶೀಘ್ರ ಜಾರಿನಮ್ಮ ಮೆಟ್ರೋದಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಶೀಘ್ರ ಜಾರಿ

English summary
If all goes as per BMRCL plans , metro commuters can look forward to travelling in driverless trains in a couple of years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X