ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಜನರಿಗೆ ಶೀಘ್ರದಲ್ಲೇ ತಟ್ಟಲಿದೆ ನೀರಿನ ದರ ಏರಿಕೆ ಬಿಸಿ

|
Google Oneindia Kannada News

ಬೆಂಗಳೂರು, ಜನವರಿ 10 : ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಶೀಘ್ರದಲ್ಲೇ ದರ ಏರಿಕೆಯ ಬಿಸಿ ತಟ್ಟಲಿದೆ. ಹೌದು, ಬೆಂಗಳೂರು ಜಲಮಂಡಳಿ ನೀರಿನ ದರ ಏರಿಕೆಗೆ ಪ್ರಸ್ತಾವನೆ ಸಿದ್ಧಪಡಿಸಿದೆ.

ಬೆಂಗಳೂರು ಜಲಮಂಡಳಿ ಶೇ 30 ರಿಂದ 35ರಷ್ಟು ದರ ಏರಿಕೆ ಮಾಡಬೇಕು ಎಂದು ಪ್ರಸ್ತಾವನೆ ಸಿದ್ಧಪಡಿಸಿದೆ. ಸರ್ಕಾರದ ಒಪ್ಪಿಗೆ ಸಿಕ್ಕಿದರೆ ಮುಂದಿನ ತಿಂಗಳಿನಿಂದ ಹೊಸ ದರ ಜಾರಿಗೆ ಬರುವ ನಿರೀಕ್ಷೆ ಇದೆ.

286 ಕೋಟಿ ವೆಚ್ಚದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ286 ಕೋಟಿ ವೆಚ್ಚದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ

2014ರ ನಂತರ ನೀರಿನ ದರವನ್ನು ಏರಿಕೆ ಮಾಡಿಲ್ಲ. ನಾಲ್ಕು ವರ್ಷಗಳಲ್ಲಿ ವಿದ್ಯುತ್, ನಿರ್ವಹಣೆ ಸೇರಿದಂತೆ ಅನೇಕ ವೆಚ್ಚಗಳು ಅಧಿಕವಾಗಿದೆ. ಆದ್ದರಿಂದ, ಶೇ 30 ರಿಂದ 35ರಷ್ಟು ದರ ಏರಿಕೆಗೆ ಅನುಮತಿ ನೀಡಬೇಕು ಎಂಬುದು ಜಲಮಂಡಳಿಯ ವಾದವಾಗಿದೆ.

ನೀರಿನ ದರ ಹೆಚ್ಚಳ, ಪ್ರಸ್ತುತ ದರ ಎಷ್ಟಿದೆ? ನೀರಿನ ದರ ಹೆಚ್ಚಳ, ಪ್ರಸ್ತುತ ದರ ಎಷ್ಟಿದೆ?

2016ರಲ್ಲಿ ನೀರಿನ ದರವನ್ನು ಹೆಚ್ಚಳ ಮಾಡಲು ಜಲಮಂಡಳಿ ಪ್ರಸ್ತಾವನೆ ಸಲ್ಲಿಸಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿರಲಿಲ್ಲ. ಈಗ ಜಲಮಂಡಳಿ ನಷ್ಟವನ್ನು ತುಂಬಿಕೊಳ್ಳಲು ಜನರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ....

ರಾಜಕಾಲುವೆಗೆ ತ್ಯಾಜ್ಯ, ಜಲಮಂಡಳಿ ವಿರುದ್ಧ ದೂರುರಾಜಕಾಲುವೆಗೆ ತ್ಯಾಜ್ಯ, ಜಲಮಂಡಳಿ ವಿರುದ್ಧ ದೂರು

ವಿದ್ಯುತ್ ದರ ಹೆಚ್ಚಳವಾಗಿದೆ

ವಿದ್ಯುತ್ ದರ ಹೆಚ್ಚಳವಾಗಿದೆ

2014ರ ನಂತರ ನೀರಿನ ದರ ಏರಿಕೆ ಮಾಡಿಲ್ಲ. ನಾಲ್ಕು ವರ್ಷಗಳಲ್ಲಿ ವಿದ್ಯುತ್ ದರ ಹೆಚ್ಚಳವಾಗಿದೆ. ನಿರ್ವಹಣಾ ವೆಚ್ಚ, ಕಾರ್ಮಿಕರ ಸಂಬಳ ಎಲ್ಲಾ ಸೇರಿದಂತೆ ಜಲಮಂಡಳಿಗೆ ನಷ್ಟ ಉಂಟಾಗಿದೆ. ಆದ್ದರಿಂದ, ನೀರಿನ ದರವನ್ನು ಹೆಚ್ಚಳ ಮಾಡಲು ಅವಕಾಶ ನೀಡಬೇಕು ಎಂಬುದು ಜಲಮಂಡಳಿ ವಾದವಾಗಿದೆ.

2014ರ ನಂತರ ದರ ಏರಿಕೆ

2014ರ ನಂತರ ದರ ಏರಿಕೆ

2005ರ ಬಳಿಕ ನೀರಿನ ದರವನ್ನು ಜಲಮಂಡಳಿ ಏರಿಕೆ ಮಾಡಿರಲಿಲ್ಲ. ಈ ವಾದವನ್ನು ಮುಂದಿಟ್ಟುಕೊಂಡು 2014ರಲ್ಲಿ ದರ ಏರಿಕೆ ಮಾಡಲಾಗಿತ್ತು. 2016ರಲ್ಲಿ ದರ ಏರಿಕೆಗೆ ಸಲ್ಲಿಸಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿಗಳ ಒಪ್ಪಿಗೆ ಸಿಕ್ಕಿರಲಿಲ್ಲ. ಈಗ ದರ ಏರಿಕೆಗೆ ಹೊಸ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಮೊದಲು ಸೋರಿಕೆ ತಡೆಗಟ್ಟಿ

ಮೊದಲು ಸೋರಿಕೆ ತಡೆಗಟ್ಟಿ

ಜಲಮಂಡಳಿ ನೀರಿನ ದರ ಏರಿಕೆ ಮಾಡಲು ಪ್ರಸ್ತಾವನೆ ಸಿದ್ಧಪಡಿಸಿರುವುದಕ್ಕೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರು ಸರಬರಾಜಿನಲ್ಲಿ ಶೇ 40ರಷ್ಟು ಸೋರಿಕೆಯಾಗುತ್ತಿದೆ. ಮೊದಲು ಇದನ್ನು ಸರಿಪಡಿಸಿ ಬಳಿಕ ನೀರಿನ ದರವನ್ನು ಏರಿಕೆ ಮಾಡಿ ಎಂದು ಜನರು ಜಲಮಂಡಳಿಯನ್ನು ಒತ್ತಾಯಿಸಿದ್ದಾರೆ.

2014ರಲ್ಲಿ ಎಷ್ಟು ಏರಿಕೆಯಾಗಿತ್ತು?

2014ರಲ್ಲಿ ಎಷ್ಟು ಏರಿಕೆಯಾಗಿತ್ತು?

ಗೃಹ ಬಳಕೆಯ ದರಗಳನ್ನು 2014ರಲ್ಲಿ 12 ರೂ.ನಿಂದ 80 ರೂ. ತನಕ, ವಾಣಿಜ್ಯ ಬಳಕೆಯ ದರವನ್ನು 65 ರೂ.ನಿಂದ 80 ರೂ. ವರೆಗೆ ಹೆಚ್ಚಳ ಮಾಡಲಾಗಿತ್ತು. ಈ ಬಾರಿ ಶೇ 30 ರಿಂದ 35 ರಷ್ಟು ಏರಿಕೆ ಮಾಡಲು ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ.

English summary
Bangalore Water Supply and Sewerage Board (BWSSB) come up with a proposal to hike water tariff 30 to 35 percent. Final decision likely to take soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X