ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೇ 35ರಷ್ಟು ನೀರಿನ ದರ ಹೆಚ್ಚಿಸಲಿದೆ ಬೆಂಗಳೂರು ಜಲಮಂಡಳಿ

|
Google Oneindia Kannada News

ಬೆಂಗಳೂರು, ಜನವರಿ 28 : ಬೆಸ್ಕಾಂ ಜೊತೆಗೆ ಬೆಂಗಳೂರು ಜಲಮಂಡಳಿ ಬೆಂಗಳೂರಿಗರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ. ಜಲಮಂಡಳಿ ನೀರಿನ ದರವನ್ನು ಏರಿಕೆ ಮಾಡಲು ಒಪ್ಪಿಗೆ ನೀಡಿದ್ದು, ಕರ್ನಾಟಕ ಸರ್ಕಾರದ ಅಂತಿಮ ಒಪ್ಪಿಗೆಗಾಗಿ ಕಾದು ಕುಳಿತಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಶೇ 35ರಷ್ಟು ದರ ಏರಿಕೆ ಮಾಡಲು ಒಪ್ಪಿಗೆ ನೀಡಿದೆ. ಸರ್ಕಾರಕ್ಕೆ ಈ ಕುರಿತು ಶಿಫಾರಸು ಕಳಿಸಲಾಗಿದೆ. ಸರ್ಕಾರ ಒಪ್ಪಿಗೆ ನೀಡಿದರೆ ದರ ಏರಿಕೆ ಜಾರಿಗೆ ಬರಲಿದೆ.

ಟ್ಯಾಂಕರ್ ನೀರು ಸರಬರಾಜಿಗೆ ವೇಳಾಪಟ್ಟಿ ಪ್ರಕಟಿಸಿದ ಜಲಮಂಡಳಿ ಟ್ಯಾಂಕರ್ ನೀರು ಸರಬರಾಜಿಗೆ ವೇಳಾಪಟ್ಟಿ ಪ್ರಕಟಿಸಿದ ಜಲಮಂಡಳಿ

ಜಲಮಂಡಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದರ ಏರಿಕೆಗೆ ಒಪ್ಪಿಗೆ ನೀಡಲಾಗಿದೆ. ಈಗಾಗಲೇ ಬೆಸ್ಕಾಂ ವಿದ್ಯುತ್ ದರ ಏರಿಕೆ ಮಾಡಲು ಮುಂದಾಗಿದೆ. ಈಗ ಜಲಮಂಡಳಿಯೂ ದರ ಏರಿಕೆ ಮಾಡಿದರೆ ಬೆಂಗಳೂರು ನಗರದ ಜನರ ಜೇಬಿಗೆ ಕತ್ತರಿ ಬೀಳಲಿದೆ.

ಪ್ರತಿ ಮನೆಗೂ ಕುಡಿಯುವ ನೀರು: ಯಡಿಯೂರಪ್ಪ ಸರ್ಕಾರದ ಹೊಸ ಯೋಜನೆಪ್ರತಿ ಮನೆಗೂ ಕುಡಿಯುವ ನೀರು: ಯಡಿಯೂರಪ್ಪ ಸರ್ಕಾರದ ಹೊಸ ಯೋಜನೆ

2013ರ ಜುಲೈನಲ್ಲಿ ನೀರಿನ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ನೀರಿನ ಬಿಲ್‌ ಜಲಮಂಡಳಿ ಆದಾಯದ ಪ್ರಮುಖ ಮೂಲವಾಗಿದೆ. ತಿಂಗಳಿಗೆ ಸುಮಾರು 90 ಕೋಟಿ ರೂ. ಆದಾಯ ಜಲಮಂಡಳಿಗೆ ಬರುತ್ತದೆ. ಜಲಮಂಡಳಿ ವಿವಿಧ ಯೋಜನೆಗಳಿಗೆ 1000 ಕೋಟಿಗೂ ಅಧಿಕ ಸಾಲವನ್ನು ಪಡೆದಿದೆ.

ನೀರು ಉಳಿಸಲು ಸಾವಿರಾರು ಒಂಟೆಗಳ ಹತ್ಯೆ: ಆಸ್ಟ್ರೇಲಿಯಾದ ಆಘಾತಕಾರಿ ನಿರ್ಧಾರನೀರು ಉಳಿಸಲು ಸಾವಿರಾರು ಒಂಟೆಗಳ ಹತ್ಯೆ: ಆಸ್ಟ್ರೇಲಿಯಾದ ಆಘಾತಕಾರಿ ನಿರ್ಧಾರ

10 ಲಕ್ಷ ನೀರಿನ ಸಂಪರ್ಕ

10 ಲಕ್ಷ ನೀರಿನ ಸಂಪರ್ಕ

ಬೆಂಗಳೂರು ಜಲಮಂಡಳಿ ಸುಮಾರು 10 ಲಕ್ಷ ನೀರಿನ ಸಂಪರ್ಕವನ್ನು ಹೊಂದಿದೆ. ಮನೆ, ವಾಣಿಜ್ಯ ಕಟ್ಟಡ ಮತ್ತು ಕೈಗಾರಿಕೆ ಎಂದು ಮೂರು ವಿಭಾಗಗಳನ್ನು ಮಾಡಲಾಗಿದೆ. ಜಲಮಂಡಳಿ ನಿತ್ಯ 1,400 ಮಿಲಿಯನ್ ಲೀಟರ್ ಎಂಎಲ್‌ಡಿ ನೀರನ್ನು ಪಂಪ್ ಮಾಡುತ್ತದೆ.

ಶೇ 60ರಷ್ಟು ಸಂಗ್ರಹ

ಶೇ 60ರಷ್ಟು ಸಂಗ್ರಹ

ಜಲಮಂಡಳಿ ಪೂರೈಕೆ ಮಾಡುವ ನೀರಿನಲ್ಲಿ ಶೇ 60ರಷ್ಟು ಮಾತ್ರ ಬಿಲ್ ವಸೂಲಿ ಮಾಡುತ್ತದೆ. ಕಳೆದ 5 ವರ್ಷಗಳಲ್ಲಿ ಜಲಮಂಡಳಿ 100 ಕೋಟಿ ರೂ.ಗಳನ್ನು ಶೇ 40ರಷ್ಟು ಪೋಲಾಗುವ ನೀರನ್ನು ತಡೆಯಲು ಬಳಕೆ ಮಾಡಲಿದೆ.

ವಿವಿಧ ಯೋಜನೆಗಳು

ವಿವಿಧ ಯೋಜನೆಗಳು

ಕಳೆದ ಮೂರು ವರ್ಷಗಳಲ್ಲಿ ಜಲಮಂಡಳಿ ಹಲವು ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಅಗತ್ಯವಿಲ್ಲದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದಾಗಿ ವೆಚ್ಚವೂ ಏರಿಕೆಯಾಗಿದೆ. ಆದ್ದರಿಂದ, ದರ ಏರಿಕೆ ಅನಿವಾರ್ಯವಾಗಿದೆ ಎಂಬುದು ಜಲಮಂಡಳಿ ವಾದವಾಗಿದೆ.

ಪರಿಷ್ಕರಣೆಯಾಗಿಲ್ಲ

ಪರಿಷ್ಕರಣೆಯಾಗಿಲ್ಲ

2013ರ ಜುಲೈನಲ್ಲಿ ಶೇ 270ರಷ್ಟು ದರವನ್ನು ಜಲಮಂಡಳಿ ಏರಿಕೆ ಮಾಡಿತ್ತು. ಬಳಿಕ ದರವನ್ನು ಹೆಚ್ಚಳ ಮಾಡಿಲ್ಲ. ಇದನ್ನೇ ಮಾನದಂಡವಾಗಿ ಇಟ್ಟುಕೊಂಡು ಏರಿಕೆ ಮಾಡಲು ಪ್ರಸ್ತಾವನೆ ಕಳಿಸಲಾಗಿದೆ. ಕರ್ನಾಟಕ ಸರ್ಕಾರದ ಒಪ್ಪಿಗೆ ಮಾತ್ರ ಬಾಕಿ ಇದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಳಿ ಇದೆ.

English summary
Bangalore Water Supply and Sewerage Board (BWSSB) has proposed to 35% hike in the water bill. Proposal submitted to government for final approval.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X