ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯ 110 ಹಳ್ಳಿ ವ್ಯಾಪ್ತಿಯ ಕಟ್ಟಡಗಳಿಗೆ ಜಲಮಂಡಳಿಯಿಂದ ಎನ್ಒಸಿ

|
Google Oneindia Kannada News

ಬೆಂಗಳೂರು, ಮಾರ್ಚ್ 08: ಬಿಬಿಎಂಪಿ ವ್ಯಾಪ್ತಿಯ 110ಹಳ್ಳಿಗಳಿಗೆ ನೀರು ಪೂರೈಸುವ ಖಾತರಿ ಇರುವುದರಿಂದ ಜಲಮಂಡಳಿಯು ಈ ಪ್ರದೇಶಗಳಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ ನಿರಾಪೇಕ್ಷಣಾ ಪತ್ರ ನೀಡಲು ಆರಂಭಿಸಿದೆ.

110 ಹಳ್ಳಿಗಳಲ್ಲಿ ನೀರು ಪೂರೈಸದ ಜಲಮಂಡಳಿಯು ಕಟ್ಟಡಗಳಿಗೆ ಎನ್‌ಒಸಿ ನೀಡುವುದನ್ನು ಆಕ್ಷೇಪಿಸಿ ಹಸಿರು ನ್ಯಾಯಮಂಡಳಿಯಲ್ಲಿ ದೂರು ಸಲ್ಲಿಕೆಯಾಗಿತ್ತು. ಇದರಿಂದ ಸಮಸ್ಯೆಯಾಗಬಹುದೆಂದು ಅರಿತ ಜಲಮಂಡಳಿ 110 ಹಳ್ಳಿಗಳಲ್ಲಿ ಎನ್ಒಸಿ ನೀಡುವುದಕ್ಕೆ ತಾತ್ಕಾಲಿಕ ತಡೆ ನೀಡಿತ್ತು. ಇತ್ತೀಚೆಗೆ 110 ಹಳ್ಳಿಗಳಿಗೆ ನೀರು ಪೂರೈಸಲು ಪೈಪ್ ಅಳವಡಿಸುವ ಕಾಮಗಾರಿಗೆ ಚಾಲನೆ ದೊರೆತಿದೆ. 15 ಹಳ್ಳಿಗಳಲ್ಲಿ ನೀರು ಹರಿಸಲು ಪೈಪ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ನೀರು ಹರಿಸಲು ಸಿದ್ಧತೆ ನಡೆಸಲಾಗಿದೆ.

ಬೆಂಗಳೂರು: ಶೌಚಗುಂಡಿ ಸ್ವಚ್ಛತೆಗೆ 25 ಜೆಟ್ಟಿಂಗ್ ಯಂತ್ರ ಖರೀದಿಬೆಂಗಳೂರು: ಶೌಚಗುಂಡಿ ಸ್ವಚ್ಛತೆಗೆ 25 ಜೆಟ್ಟಿಂಗ್ ಯಂತ್ರ ಖರೀದಿ

ಈ ಹಳ್ಳಿಗಳಲ್ಲಿ ಕಾವೇರಿ 5ನೇ ಹಂತದ ಯೋಜನೆಯಡಿ ದೊರೆಯುವ ನೀರನ್ನು ಪೂರೈಸಲಾಗುತ್ತದೆ. ಈ ಯೋಜನೆಗೆ ಜೈಕಾ ಆಲ ನೀಡಲು ಒಪ್ಪಿದ್ದು, ಇದಕ್ಕೆ ಸಂಬಂಧಿಸಿದ ಒಡಂಬಡಿಕೆಗೆ ಸಹಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಎನ್ಒಸಿ ನೀಡುವ ಪ್ರಕ್ರಿಯೆಗೆ ಮರು ಚಾಲನೆ ನೀಡಲಾಗಿದೆ.

BWSSB issues NOC for new buildings in 110 villages

ಆದರೆ ಎಲ್ಲ ಕಟ್ಟಡಗಳಿಗೆ ಎನ್ಒಸಿ ಅಗತ್ಯವಿಲ್ಲ. 110 ಹಳ್ಳಿಗಳ ವ್ಯಾಪ್ತಿಯ ಬೃಹತ್ ಅಪಾರ್ಟ್ ಮೆಂಟ್ ಗಳು, ವಾಣಿಜ್ಯ ಕಟ್ಟಡಗಳು, ಲೇಔಟ್ ಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಈ ಹಳ್ಳಿಗಳಲ್ಲಿ ಕುಡಿಯುವ ನೀಡು ಪೂರೈಸುವ ಜತೆಗೆ ಒಳಚರಂಡಿ ಕಾಮಗಾರಿಯನ್ನೂ ಆರಂಭಿಸಲಾಗಿದೆ. ಒಳಚರಂಡಿ ಸಂಪರ್ಕವನ್ನು ಎಲ್ಲ ಕಟ್ಟಡಗಳು ಪಡೆಯಲೇಬೇಕಾಗಿರುವುದರಿಂದ ಎನ್ಒಸಿ ಕಡ್ಡಾಯವಾಗಿದೆ.

English summary
BWSSB will issue no objection certificates to new buildings in outskirts 110 villages in Bengaluru which are provided Cauvery water soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X