ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಜಲಮಂಡಳಿಗೆ ತುಂಬಿದ 2 ಕೋಟಿ ನೀರು ಶುಲ್ಕ ಮಾಯ

By Nayana
|
Google Oneindia Kannada News

ಬೆಂಗಳೂರು, ಜೂನ್‌ 27: ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಲ್ಲಿ ಕಳೆದ 9 ತಿಂಗಳಿನಿಂದ 2 ಕೋಟಿ ಶುಲ್ಕ ಹಣ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು ತನಿಖೆ ಮುಂದುವರೆದಿದೆ.

ಬೆಂಗಳೂರಿನ ರಾಜರಾಜೇಶ್ವರಿನಗರ ಉಪವಿಭಾಗದಲ್ಲಿ ಗ್ರಾಹಕರು ನೀರಿನ ಶುಲ್ಕವಾಗಿ ಭರಿಸಿದ್ದ ಸುಮಾರು 2 ಕೋಟಿ ರೂ. ಹಣವನ್ನು ಸಂಬಂಧ ಪಟ್ಟ ಏಜೆನ್ಸಿಯ ಖಾತೆಗೆ ನೀಡದೆ ಮತ್ತೆ ಮಧ್ಯೆದಲ್ಲೇ ಹಣವನ್ನು ಕಬಳಿಸಿರುವುದು ಬೆಳಕಿಗೆ ಬಂದಿದೆ.

ಕಾವೇರಿ ನಿರ್ವಹಣಾ ಮಂಡಳಿಗೆ ರಾಜ್ಯದ ಇಬ್ಬರು ಪ್ರತಿನಿಧಿಗಳ ನೇಮಕಕಾವೇರಿ ನಿರ್ವಹಣಾ ಮಂಡಳಿಗೆ ರಾಜ್ಯದ ಇಬ್ಬರು ಪ್ರತಿನಿಧಿಗಳ ನೇಮಕ

ಈ ಕುರಿತು ಅಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಜಿ ರಸ್ತೆಯಲ್ಲಿರುವ ಸಿಂಡಿಕೇಟ್‌ ಬ್ಯಾಂಕ್ ಹಾಗೂ ಸಿಎಂಎಸ್‌ ಇನ್ಫೋಸಿಸ್ಟಂ ವಿರುದ್ಧ 2 kOqi 4 lkfx ೮೪ sAvird 650 ರೂಗಳ ಅವ್ಯವಹಾರ ಅಕ್ರಮವಾಗಿ ಬ್ಯಾಂಕ್‌ ಖಾತೆಗೆ ಜಲಾ ಆಗಿರುವುದು ಬೆಳಕಿಗೆ ಬಂದಿದೆ.

BWSSB investigates missing 2 crores of water bill

ಈ ಹಣ ಸಂಪೂರ್ಣ ಜಲಮಂಡಳಿಗೆ ಸೇರಿದ್ದು ಎನ್ನಲಾಗಿದೆ. ಬೆಂಗಳೂರು ಜಲಮಂಡಳಿ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ ನಡುವೆ ಆಗಿರುವ ಒಪ್ಪಂದದಂತೆ ಜಲಮಂಡಳಿಯ ಗ್ರಾಹಕರು ನೀಡಿರುವ ಹಣ ಸಿಂಡಿಕೇಟ್‌ ಬ್ಯಾಂಕ್‌ ಖಾತೆ ಮೂಲಕ ಜಲಮಂಡಳಿಗೆ ವರ್ಗಾವಣೆಯಾಗಬೇಕು ಆದರೆ, ಸಿಂಡಿಕೇಟ್‌ ಬ್ಯಾಂಕ್‌ನ ಅಕೌಂಟ್‌ಗೆ ಭರ್ತಿಯಾದ ಶುಲ್ಕದ ಹಣವನ್ನು ಸಿಎಂಎಸ್‌ಇನ್ಫೋಸಿಸ್ಟಂ ಎಂಬ ಖಾಸಗಿ ಏಜೆನ್ಸಿಗೆ ವರ್ಗಾಯಿಸಿರುವುದು ತಿಳಿದುಬಂದಿದೆ.

ಗ್ರಾಹಕರು ಜಲಮಂಡಳಿಯಲ್ಲಿ ಅಳವಡಿಸಿರುವ ಕಿಯೋಸ್ಕ್ ನಲ್ಲಿ ಹಣವನ್ನು ಭರಿಸುತ್ತಾರೆ, ಕಿಯೋಸ್ಕ್‌ನಲ್ಲಿ ಭರಿಸಿರುವ ಹಣವು ನೇರವಾಗಿ ಸಿಂಡಿಕೇಟ್‌ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗುತ್ತದೆ. ಬ್ಯಾಂಕ್ ಖಾತೆಯಿಂದ ಜಲಮಂಡಳಿಗೆ ಹೋಗಬೇಕು ಆದರೆ ಕಿಯೋಸ್ಕ್‌ಗಳನ್ನು ನಿರ್ವಹಿಸುವ ಸಿಎಂಎಸ್‌ ಇನ್ಫೋಸಿಸ್ಟಂ ಖಾತೆಗೆ ಹಣ ಹೋಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

BWSSB investigates missing 2 crores of water bill

ಈ ಕುರಿತು ಹೇಳಿಕೆ ನೀಡಿರುವ ಅಸಿಸ್ಟೆಂಡ್‌ ಕಂಟ್ರೋಲರ್‌ ಆಫ್ ಅಕೌಂಟ್‌ ಬ್ಯಾಂಕ್ ಖಾತೆಗೆ ಕಿಯೋಸ್ಕ್ ಕಂಪನಿ ಭರಿಸಿರುವ ಹಣದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿವೆ, ಪ್ರತಿಯೊಂದು ಕಿಯೋಸ್ಕ್‌ನಲ್ಲಿ ಜಮೆಯಾದ ಹಣವನ್ನು ಆಯಾದಿನಗಳಂದೇ ಬ್ಯಾಂಕ್‌ಗೆ ಭರಿಸುವುದು ಏಜೆನ್ಸಿಯ ಕರ್ತವ್ಯ, ಆದರೆ ಜಮೆಯಾದ ಶುಲ್ಕದ ಹಣ ನಿಗದಿತ ಸಮಯದಲ್ಲಿ ಜಮೆಯಾಗದಿರುವುದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

English summary
Invistigation is under way in a case of misappropriation of more than Rs.2 crore due to the BWSSB over the last nine months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X