ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಮನಿಸಿ.., ಬೆಂಗಳೂರಿನಲ್ಲಿ ಹೆಚ್ಚಾಗಲಿದೆ ವಾಟರ್ ಬಿಲ್

|
Google Oneindia Kannada News

ಬೆಂಗಳೂರು, ಜನವರಿ 28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಶೇ 2 ರಷ್ಟು ಭೂ ಸಾರಿಗೆ ಕರ ವಿಧಿಸುವ ನಿರ್ಧಾರ ಬೆಂಗಳೂರಿಗರಿಗೆ ಆಘಾತ ತಂದಿದ್ದರೆ, ಇತ್ತ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್‌ಎಸ್‌ಬಿ) ಕೂಡ ಸದ್ದಿಲ್ಲದೆ ನೀರಿನ ಬೆಲೆ ಏರಿಕೆ ಮಾಡಲು ಸಿದ್ದತೆ ಮಾಡಿಕೊಂಡಿದೆ.

ಹೌದು, ನೀರಿನ ಬೆಲೆ ಏರಿಕೆ ಸಂಬಂಧ ಪ್ರಸ್ತಾವನೆಯೊಂದನ್ನು ರಾಜ್ಯ ಸರ್ಕಾರಕ್ಕೆ ಬಿಡಬ್ಲೂಎಸ್‌ಎಸ್‌ಬಿ ಸಲ್ಲಿಸಿದ್ದು, ಒಂದು ವೇಳೆ ಸರ್ಕಾರ ಇದಕ್ಕೆ ಅನುಮತಿ ನೀಡಿದರೆ, ಪ್ರತಿ ತಿಂಗಳ ನೀರಿನ ಬಿಲ್‌ನಲ್ಲಿ ಶೇ 30 ರಿಂದ 35 ರಷ್ಟು ಹೆಚ್ಚಾಗುವ ಸಂಭವವಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿಗರಿಗೆ ಮತ್ತೆ ತೆರಿಗೆ ಬಾರ ಹಾಕಿದ ಬಿಬಿಎಂಪಿಬೆಂಗಳೂರಿಗರಿಗೆ ಮತ್ತೆ ತೆರಿಗೆ ಬಾರ ಹಾಕಿದ ಬಿಬಿಎಂಪಿ

ಸೋಮವಾರ ಈ ಕುರಿತು ಅಧಿಕಾರಿಗಳ ಸಭೆ ನಡೆಸಿರುವ ಬಿಡಬ್ಲೂಎಸ್‌ಎಸ್‌ಬಿ, ಕಳೆದ ಆರು ವರ್ಷದಿಂದ ನೀರಿನ ಬಿಲ್ ಹೆಚ್ಚಳ ಆಗಿಲ್ಲ ಎಂದು ಈ ಸಾರಿ ಶೇ 30 ರಿಂದ 35 ರಷ್ಟು ಹೆಚ್ಚಳ ಮಾಡಲು ಸಿದ್ದತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.

BWSSB Increases Water Bill rate up to 35 %

ಸದ್ಯ ಬಿಡಬ್ಲೂಎಸ್‌ಎಸ್‌ಬಿ ಒಂದು ಕಿಲೋ ಲಿಟರ್ ನೀರಿಗೆ (1000 ಲೀಟರ್) ಕನಿಷ್ಠ 56 ರುಪಾಯಿಯನ್ನು ವಿಧಿಸುತ್ತದೆ. ಒಂದು ಕಿಲೋ ಲೀಟರ್ ಮೇಲೆ ಬಳಸುವ ಹೆಚ್ಚುವರಿ ನೀರಿಗೆ ಬಳಕೆಗೆ ಅನುಗುಣವಾಗಿ ದರ ವಿಧಿಸಲಾಗುತ್ತದೆ.

ಬಿಬಿಎಂಪಿಯ ಭೂ ಸಾರಿಗೆ ಕರ ಜಾರಿಗೆ ಬಂದರೆ, ಇನ್ಮುಂದೆ ಬೆಂಗಳೂರು ನಾಗರಿಕರು ತಮ್ಮ ಆಸ್ತಿ ತೆರಿಗೆಯ ಜೊತೆ ಶೇ 2 ರಷ್ಟು ಭೂಸಾರಿಗೆ ಕರವನ್ನು ಪಾಲಿಕೆಗೆ ಪಾವತಿಸಬೇಕು. ಹೀಗೆ ಸಂಗ್ರಹವಾಗುವ ತೆರಿಗೆ ಹಣವನ್ನು ಭೂ ಸಾರಿಗೆ ಇಲಾಖೆಗೆ ಕಳುಹಿಸದೇ, ಪಾಲಿಕೆಯೇ ತನ್ನ ಬಳಿ ಇಟ್ಟುಕೊಂಡು ರಸ್ತೆ, ಚರಂಡಿ, ಬೀದಿ ದೀಪಗಳ ನಿರ್ಮಾಣ ಮತ್ತು ನಿರ್ವಹಣೆಗೆ ಬಳಸಿಕೊಳ್ಳಲಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಮೇಯರ್ ಮುಂದಾಗಬೇಕು ಎಂದು ಕೌನ್ಸಿಲ್ ಸಭೆ ನಿರ್ಣಯಿಸಿದೆ. ಅತ್ತ ನೀರಿನ ಬಿಲ್ ಹೆಚ್ಚಳ ಹಾಗೂ ಭೂ ಸಾರಿಗೆ ಕರದಿಂದ ಬೆಂಗಳೂರಿಗರು ಹೆಚ್ಚಿನ ಹೊರೆ ಅನುಭವಿಸಬೇಕಾಗಿ ಬಂದಿದೆ.

English summary
Bengaluru Water Supply and Sewage Board (BWSSB) Increases Water Bill rate up to 35 %. Proposal sent to Karnataka Government by BWSSB.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X