ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Indira Canteens: ಇಂದಿರಾ ಕ್ಯಾಂಟೀನ್‌ಗಳಲ್ಲಿ ಕುಡಿಯಲು ನೀರಿಲ್ಲ, ಬಿಲ್ ಕಟ್ಟಿಲ್ಲ ಎಂದು ಸಂಪರ್ಕ ಕಡಿತ

ಸಿದ್ದರಾಮಯ್ಯ ಸರ್ಕಾರದ ಮಹಾತ್ವಕಾಂಕ್ಷಡಯ ಯೋಜನೆಯಾದ ಇಂದಿರಾ ಕ್ಯಾಂಟೀನ್, ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಹಸಿದು ಬರುವ ಗ್ರಾಹಕರು ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ.

|
Google Oneindia Kannada News

ಬೆಂಗಳೂರು, ಜನವರಿ, 31: ರಾಜ್ಯದಲ್ಲಿ ಬಡವರ ಹಸಿವು ನೀಗಿಸುವ ಮಹತ್ವದ ಯೋಜನೆಯಾಗಿ ಸಿದ್ದರಾಮಯ್ಯ ಸರ್ಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಯೋಜನೆ ಹಳ್ಳಹಿಡಿಯುತ್ತಿದೆ. ಈಗಾಗಲೇ ಹಣದ ಕೊರತೆ ಎದುರಿಸುತ್ತಿರುವ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳಿಗೆ ಈಗ ನೀರಿನ ಸಮಸ್ಯೆಯೂ ಎದುರಾಗಿದೆ. ಬಿಲ್ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕ್ಯಾಂಟೀನ್‌ಗಳಿಗೆ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಿದೆ.

ಬೆಂಗಳೂರಿನ 8 ವಲಯಗಳಲ್ಲೂ ಇರುವ ಇಂದಿರಾ ಕ್ಯಾಂಟೀನ್‌ಗಳಿಗೆ ನೀರಿನ ಬಿಲ್ ಬಾಕಿಯಿದೆ. ಇದರಿಂದ ಹಸಿವಿನಿಂದ ಬರುವ ಗ್ರಾಹಕರು ನೀರಿಗಾಗಿ ಪರಿತಿಸುವಂತಾಗಿದೆ. ಈ ಇಂದಿರಾ ಕ್ಯಾಂಟಿನ್​​ಗಳು ಒಟ್ಟು 40 ಲಕ್ಷ ರೂಪಾಯಿ ನೀರಿನ ಬಿಲ್ ಬಾಕಿ ಉಳಿಸಿಕೊಂಡಿವೆ ಎಂದು ತಿಳಿದು ಬಂದಿದೆ.

Praja Dhwani Bus Yatra: ಅಕ್ಕಿ ಕೊಡುವುದು ರಾಜ್ಯದ ಜನರು ಕಟ್ಟುವ ತೆರಿಗೆ ಹಣದಿಂದ,ಯಾರಪ್ಪನ ಮನೆಯಿಂದ ಅಲ್ಲ, ಸಿದ್ದರಾಮಯ್ಯPraja Dhwani Bus Yatra: ಅಕ್ಕಿ ಕೊಡುವುದು ರಾಜ್ಯದ ಜನರು ಕಟ್ಟುವ ತೆರಿಗೆ ಹಣದಿಂದ,ಯಾರಪ್ಪನ ಮನೆಯಿಂದ ಅಲ್ಲ, ಸಿದ್ದರಾಮಯ್ಯ

ನೀರಿನ ಬಿಲ್ ಪಾವತಿಯಾಗಿಲ್ಲ ಎಂಬುದನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಖಚಿತಪಡಿಸಿದ್ದಾರೆ. ಇಂದಿರಾ ಕ್ಯಾಂಟೀನ್‌ಗಳಲ್ಲಿ ಕುಡಿಯುವ ನೀರಿನ ಕೊರತೆಯ ಬಗ್ಗೆ ನನಗೆ ದೂರುಗಳು ಬಂದಿವೆ. ಒಪ್ಪಂದದಂತೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀರು ಒದಗಿಸುವ ಜವಾಬ್ದಾರಿ ಗುತ್ತಿಗೆದಾರರ ಮೇಲಿದ್ದು, ನೀರಿನ ಬಿಲ್ ಪಾವತಿಸಬೇಕು. ಇದು ಗುತ್ತಿಗೆದಾರ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ನಡುವಿನ ಒಪ್ಪಂದವಾಗಿದೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.

BWSSB disconnect Water supply to Indira Canteens

ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರು ನೀರಿನ ಟ್ಯಾಂಕರ್ ಹಾಗೂ ಶುದ್ಧೀಕರಿಸಿದ ನೀರಿನ ಕ್ಯಾನ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಗಾಂಧಿನಗರ, ವಸಂತನಗರ, ಬನ್ನಪ್ಪ ಪಾರ್ಕ್, ಶಿವಾಜಿನಗರ, ಜಯನಗರ ಸೇರಿದಂತೆ ಅನೇಕ ಕಡೆಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.

ಕಳೆದ ಒಂಬತ್ತು ತಿಂಗಳಿಂದ ಬಿಡಬ್ಲ್ಯುಎಸ್‌ಎಸ್‌ಬಿ ನೀರು ಸರಬರಾಜು ಸ್ಥಗಿತಗೊಳಿಸಿದ್ದು, ನಾವು ನೀರಿನ ಟ್ಯಾಂಕರ್‌ಗಳು ಮತ್ತು ನೀರಿನ ಕ್ಯಾನ್‌ಗಳ ಮೇಲೆ ಅವಲಂಬಿತರಾಗಿದ್ದೇವೆ ಎಂದು ಗಾಂಧಿನಗರದ ಇಂದಿರಾ ಕ್ಯಾಂಟೀನ್‌ನ ವ್ಯವಸ್ಥಾಪಕಿ ಸುವರ್ಣ ತಿಳಿಸಿದ್ದಾರೆ.

ಈಗೀನ ಗುತ್ತಿಗೆದಾರರು ಹಿಂದಿನ ಗುತ್ತಿಗೆದಾರರ ಮೇಲೆ ಮತ್ತು ಹಲವಾರು ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿರುವ ಬಿಲ್‌ಗಳನ್ನು ಬಿಬಿಎಂಪಿ ಇನ್ನೂ ತಮ್ಮ ಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ.

BWSSB disconnect Water supply to Indira Canteens

2017 ರ ಆರಂಭದಲ್ಲಿ 101 ಕ್ಯಾಂಟೀನ್‌ಗಳನ್ನು ತೆರೆದ ನಂತರ, ಅದರ ಜನಪ್ರಿಯತೆಯ ಆಧಾರದ ಮೇಲೆ ಬೆಂಗಳೂರಿನ ಎಲ್ಲಾ 198 ವಾರ್ಡ್‌ಗಳಿಗೆ ಯೋಜನೆಯನ್ನು ವಿಸ್ತರಿಸಲಾಯಿತು. ಪ್ರಸ್ತುತ ಇಂದಿರಾ ಕ್ಯಾಂಟೀನ್‌ಗಳಲ್ಲಿ 5 ರೂಪಾಯಿಗೆ ಉಪಹಾರ, 10 ರೂಪಾಯಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತಿದೆ. ಬೆಂಗಳೂರಿನ ಬಹುತೇಕ ಕ್ಯಾಂಟೀನ್‌ಗಳ ಕಾರ್ಯಾಚರಣೆಗೆ ಧನಸಹಾಯ ನೀಡಲು ಪ್ರಸ್ತುತ ಬಿಜೆಪಿ ಸರ್ಕಾರಕ್ಕೆ ಆಸಕ್ತಿಯಿಲ್ಲವಾದ ಕಾರಣ ಈ ಕ್ಯಾಂಟೀನ್‌ಗಳು ಹಲವು ಕೊರತೆಯನ್ನು ಎದುರಿಸುತ್ತಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

2017-18 ಮತ್ತು 2018-2019ರಲ್ಲಿ ಅಂದಿನ ಸರ್ಕಾರ ಕ್ರಮವಾಗಿ 100 ಕೋಟಿ ಮತ್ತು 145 ಕೋಟಿ ರೂಪಾಯಿ ಮಂಜೂರು ಮಾಡಿತ್ತು, ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಯೋಜನೆಗೆ ಯಾವುದೇ ಹಣವನ್ನು ನಿಗದಿಪಡಿಸಲಾಗಿಲ್ಲ. ಹಾಗಾಗಿ, ಪೌರಕಾರ್ಮಿಕ ಸಂಸ್ಥೆಯು ತನ್ನ ಸ್ವಂತ ಬಜೆಟ್‌ನಿಂದ ಕ್ಯಾಂಟೀನ್‌ಗಳಿಗೆ ಹಣ ಮಂಜೂರು ಮಾಡಿದೆ.

ಇಂದಿರಾ ಕ್ಯಾಂಟೀನ್‌ಗಳನ್ನು ನಡೆಸಲು ಬಿಬಿಎಂಪಿ 2022-23ರ ಬಜೆಟ್‌ನಲ್ಲಿ 60 ಕೋಟಿ ರೂಪಾಯಿ ಮೀಸಲಿಟ್ಟಿತ್ತು.

English summary
Bangalore Water Supply and Sewerage Board (BWSSB) disconnect water supply to the Indira canteens for non-payment of bills. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X