ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರು ದರ ಹೆಚ್ಚಳಕ್ಕೆ ಬ್ರೇಕ್ ಹಾಕಿದ ಜಲಮಂಡಳಿ

|
Google Oneindia Kannada News

ಬೆಂಗಳೂರು, ಮೇ 31: ನೀರು ದರ ಹೆಚ್ಚಳ ಮಾಡಲು ಹೊರಟಿದ್ದ ಜಲಮಂಡಳಿ ಸಧ್ಯಕ್ಕೆ ಬ್ರೇಕ್ ಹಾಕಿದೆ.

ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಳ : ಎಲ್ಲಿ, ಎಷ್ಟು ಏರಿಕೆ? ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಳ : ಎಲ್ಲಿ, ಎಷ್ಟು ಏರಿಕೆ?

ಈಗಾಗಲೇ ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿದ್ದು, ಜನರು ತಲೆ ಕೆಡಿಸಿಕೊಂಡಿರುವ ಜನತೆಗೆ ಕೊಂಚ ನಿರಾಳವಾದಂತಾಗಿದೆ. ನೀರಿನ ದರವನ್ನು ಶೇ.30ರಿಂದ ಶೇ.35ಕ್ಕೆ ಏರಿಸಲು ಜಲಮಂಡಳಿ ನಿರ್ಧರಸಿತ್ತು.ಬಳಿಕ ಹೆಚ್ಚಳ ಮಾಡದಿರಲು ತೀರ್ಮಾನಿಸಿದೆ. ಬುಧವಾರ ನಡೆದ ಸಭೆಯಲ್ಲಿ ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಈ ವಿಷಯ ಪ್ರಕಟಿಸಿದ್ದಾರೆ.

BWSSB decided to put off the hike on Water after meeting

ಈ ಕುರಿತು ಜೂನ್ 24ಕ್ಕೆ ಇನ್ನೊಮ್ಮೆ ಸಭೆ ಸೇರಲಿದ್ದಾರೆ, ಈಗಾಗಲೇ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ ಈ ಹೊತ್ತಿನಲ್ಲಿ ನೀರಿನ ದರವನ್ನು ಏರಿಸಿದರೆ ಜನರಿಗೆ ತೊಂದರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರತಿ ಮೂರು ವರ್ಷಕ್ಕೊಮ್ಮೆ ನೀರಿನ ದರ ಪರಿಷ್ಕರಣೆ ಮಾಡಲಾಗುತ್ತದೆ. ಸಿಬ್ಬಂದಿಗಳ ವೇತನ, ವಿದ್ಯುತ್ ದರ, ತೈಲ ದರ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಹೆಚ್ಚಳ ಮಾಡಲಾಗುತ್ತದೆ.

2014ರ ಅಕ್ಟೋಬರ್ 20ರಂದು ದರ ಏರಿಕೆಯಾಗಿತ್ತು, ಅದಕ್ಕೂ ಮೊದಲು 2005ರಲ್ಲಿ ಪರಿಷ್ಕರಿಸಲಾಗಿತ್ತು.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಗೃಹ ಬಳಕೆ ವಿದ್ಯುತ್‌ ಅನ್ನು ಪ್ರತಿ ಯೂನಿಟ್‌ಗೆ 25 ಪೈಸೆ ಹೆಚ್ಚಳ ಮಾಡಲು ಒಪ್ಪಿಗೆ ನೀಡಿದೆ.

* 30 ಯೂನಿಟ್ ತನಕ 3.75 ರೂ.

* 100 ಯೂನಿಟ್ ತನಕ 5.20 ರೂ.

* 200 ಯೂನಿಟ್ ತನಕ 6.25 ರೂ.

* 300 ಯೂನಿಟ್ ಮೇಲ್ಪಟ್ಟು 7.80 ರೂ.

English summary
BWSSB which was working on effcting 30 percent to 35 percent increase in water tariff, has deffered the hike and asked its officials to rework the proposal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X