ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲ್ವೆ ಗುಜರಿ ವಸ್ತುಗಳಿಂದ ನಿರ್ಮಾಣವಾಯ್ತು ಅಬ್ದುಲ್ ಕಲಾಂ ಮೂರ್ತಿ

|
Google Oneindia Kannada News

ಬೆಂಗಳೂರು, ಜುಲೈ 22: ಯಶವಂಪುರ ರೈಲ್ವೆ ನಿಲ್ದಾಣದಲ್ಲಿ ಇದೀಗ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಮೂರ್ತಿ ತಲೆ ಎತ್ತಿದೆ. ಗುಜರಿ ವಸ್ತುಗಳನ್ನು ಬಳಸಿಕೊಂಡು ಈ ಮೂರ್ತಿ ಸಿದ್ಧಪಡಿಸಲಾಗಿದೆ, ಆರನೇ ಪ್ಲಾಟ್‌ಫಾರಂನ ರೈಲ್ವೆ ಹಳಿ ಪಕ್ಕದಲ್ಲಿ ಈ ಮೂರ್ತಿ ನಿಮಿಸಲಾಗಿದೆ.

800 ಕಿ.ಗ್ರಾಂನಷ್ಟು ಗುಜರಿ ವಸ್ತುಗಳನ್ನು ಬಳಸಿ ಇದನ್ನು ನಿರ್ಮಿಸಲಾಗಿದೆ. ಒಟ್ಟು ಇದಕ್ಕೆ 45 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಯಶವಂತಪುರ ಕೋಚಿಂಗ್ ಡಿಪೋದ ಎಂಜಿನಿಯರ್‌ಗಳು ಇದನ್ನು ಸಿದ್ಧಪಡಿಸಿದ್ದಾರೆ. ಗುಜರಿಗೆ ಹಾಕಿದ್ದ ರೈಲಿನ ವಿವಿಧ ಭಾಗಗಳನ್ನು ಬಳಸಿಕೊಳ್ಳಲಾಗಿದೆ.

ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಶೀಘ್ರ ಬಸ್‌ ಬೇ ಆರಂಭ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಶೀಘ್ರ ಬಸ್‌ ಬೇ ಆರಂಭ

ಇದು 7.8 ಅಡಿ ಎತ್ತರವಿದೆ, ಯಶವಂಪುರಕ್ಕೆ ಬರುವ ಪ್ರಯಾಣಿಕರು ಇದನ್ನು ನೋಡಬಹುದಾಗಿದೆ. ನಿತ್ಯ ಯಶವಂಪುರ ಮಾರ್ಗದಲ್ಲಿ 200 ಪ್ಯಾಸೆಂಜರ್ ರೈಲುಗಳು ಓಡಾಡುತ್ತವೆ.

Bust Of Missile Man APJ Abdul Kalam Made From Scrap Materials Is The New Attraction At Yeshwantpur

ನಟ್ಸ್, ಬೋಲ್ಟ್ಸ್, ಮೆಟಾಲಿಕ್ ರೋಪ್, ಡ್ಯಾಂಪರ್ ವಸ್ತುಗಳನ್ನು ಮೈಸೂರು ವರ್ಕ್‌ಶಾಪ್‌ನಿಂದ ತರಿಸಿಕೊಳ್ಳಲಾಗಿದೆ. ಮೊದಲು ಪ್ಲಾಸ್ಟರ್ ಪ್ಯಾರಿಸ್ ಬಳಸಿಕೊಂಡು ಮೂರ್ತಿ ಮಾಡಿಕೊಳ್ಳಲಾಗುತ್ತದೆ. ಬಳಿಕ ಅದರ ಮೇಲೆ ನಟ್ಸ್‌, ಬೋಲ್ಟ್‌ಗಳನ್ನು ಬಳಕೆ ಮಾಡಲಾಗಿದೆ.

Recommended Video

ಕುಮಾರಸ್ವಾಮಿನ ಹತ್ತಿರ ಬಿಟ್ಕೊಬೇಡಿ ಅಂತ ನಾನು ಮೊದ್ಲೇ BSY ಗೆ ಹೇಳಿದ್ದೆ | Oneindia Kannada

''ನಮ್ಮ ಡಿಪೋ 20 ವರ್ಷಗಳಷ್ಟು ಹಳೆಯದು, ಇಲ್ಲಿರುವ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಕಲಾಕೃತಿಯನ್ನು ರಚನೆ ಮಾಡುವ ಕುರಿತು ಆಲೋಚಿಸುತ್ತಿದ್ದೆವು. ಈಗಾಗಲೇ ಕೆಂಪೇಗೌಡ ಹೆರಿಟೇಜ್ ಗಾರ್ಡನ್‌ನಲ್ಲಿ ಸ್ವಾಮಿ ವಿವೇಕಾನಂದರ 3ಡಿ ಮೂರ್ತಿಯನ್ನು ನಿರ್ಮಿಸಲಾಗಿದೆ'' ಎಂದು ಎಂಜಿನಿಯರ್ ಸಿಪಿ ಶ್ರೀಧರ್ ತಿಳಿಸಿದ್ದಾರೆ.

English summary
A golden-hued bust of former President Dr APJ Abdul Kalam installed beside the railway tracks at the platform six side of the Yesvantpur railway station has become the cynosure of all eyes as well as an inspiration for railway employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X