ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯೆಗೆ ಕಿರುಕುಳ ನೀಡಿದ ಉದ್ಯಮಿ ಬಂಧನ

By Kiran B Hegde
|
Google Oneindia Kannada News

ಬೆಂಗಳೂರು, ಡಿ. 23: ಮದುವೆಯಾಗುವಂತೆ ಒತ್ತಾಯಿಸಿ ವೈದ್ಯೆಯೊಬ್ಬರಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಉದ್ಯಮಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಉದ್ಯಮಿ ಲೋಗನಾಥನ್ (28) ತಮಿಳುನಾಡು ಮೂಲದವರು. ಜಸ್ಟ್ ಡಯಲ್ ಸಂಸ್ಥೆಯ ಮೂಲಕ ವೈದ್ಯೆಯ ದೂರವಾಣಿ ಸಂಖ್ಯೆ ಪಡೆದ ಉದ್ಯಮಿ ನಂತರ ವೈದ್ಯೆಯನ್ನು ಚಿಕಿತ್ಸೆ ನೆಪದಲ್ಲಿ ಭೇಟಿಯಾಗಿದ್ದ. ವಾಟ್ಸಾಪ್ ಮೂಲಕ ಅವರಿಗೆ ಮೆಸೇಜ್ ಕಳಿಸುತ್ತ ಸ್ನೇಹ ಮುಂದುವರಿಸಿದ್ದ.

ಕೆಲವು ದಿನಗಳ ನಂತರ ಮದುವೆ ಪ್ರಸ್ತಾಪವಿಟ್ಟಿದ್ದ. ಆದರೆ, ವೈದ್ಯೆ ತಿರಸ್ಕರಿಸಿದಾಗ ಅವರ ಫೋಟೊಗಳನ್ನು ವ್ಯಾಟ್ಸಾಪ್ ಮೂಲಕ ಡೌನ್‌ಲೋಡ್ ಮಾಡಿ ನಕಲಿ ಖಾತೆ ಸೃಷ್ಟಿಸಿದ್ದ. ಅವರ ಹೆಸರಿನಲ್ಲಿ ಅನೇಕರೊಂದಿಗೆ ಚಾಟ್ ಮಾಡುತ್ತ, ವೈದ್ಯೆಗೂ ಅಶ್ಲೀಲ ಸಂದೇಶ ಹಾಗೂ ವಿಡಿಯೋ ಕಳುಹಿಸಿದ್ದ.

ಆಗ ಸಿಟ್ಟಿಗೆದ್ದ ವೈದ್ಯೆ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆ ಗೌರವಕ್ಕೆ ಧಕ್ಕೆ ತಂದಿರುವುದು ಹಾಗೂ ಸೈಬರ್ ಅಪರಾಧ ಆರೋಪದಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಮಿಳುನಾಡಿಗೆ ತೆರಳಿ ಆರೋಪಿ ಉದ್ಯಮಿಯನ್ನು ಬಂಧಿಸಿ ಕರೆತಂದಿದ್ದಾರೆ.

arrest

ಜಸ್ಟ್ ಡಯಲ್ ವಿರುದ್ಧ ಕ್ರಮ? : ವೈದ್ಯೆಯ ಖಾಸಗಿ ಮೊಬೈಲ್ ಸಂಖ್ಯೆಯನ್ನು ಬೇರೊಬ್ಬರಿಗೆ ನೀಡಿದ ಆರೋಪದ ಮೇಲೆ ಜಸ್ಟ್ ಡಯಲ್ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಚಿಂತಿಸುತ್ತಿದ್ದಾರೆ.

ಅಗತ್ಯ ಮಾಹಿತಿ ಪಡೆಯಲು ಜಸ್ಟ್ ಡಯಲ್‌ ಸಂಸ್ಥೆಗೆ ವೈದ್ಯೆ ಕರೆ ಮಾಡಿದ್ದಾಗ ಅವರ ಮೊಬೈಲ್ ಸಂಖ್ಯೆಯನ್ನು ದಾಖಲಿಸಿಕೊಳ್ಳಲಾಗಿತ್ತು. ನಂತರ ಆರೋಪಿ ಉದ್ಯಮಿ ವೈದ್ಯರ ದೂರವಾಣಿ ಸಂಖ್ಯೆ ಕೇಳಿದಾಗ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಜಸ್ಟ್ ಡಯಲ್ ಸಂಸ್ಥೆಯನ್ನು ವಿಚಾರಣೆಗೊಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.

English summary
A businessman from Tamilnadu is arrested for harassing a lady doctor of Bengaluru. Police is thinking to take action against Just Dial company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X