• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುವತಿ ಹಣೆಗೆ ಗನ್‌ಯಿಟ್ಟು ಬೆದರಿಸಿ ಅತ್ಯಾಚಾರ, ಆರೋಪಿ ಬಂಧನ

|
Google Oneindia Kannada News

ಬೆಂಗಳೂರು, ಮೇ23: ಮನೆಯ ಕಟ್ಟಡದಲ್ಲಿ ಬಾಡಿಗೆಗಿದ್ದ ಯುವತಿಯ ತಲೆಗೆ ಪಿಸ್ತೂಲ್ ಇಟ್ಟು, ಹೆದರಿಸಿ ಅತ್ಯಾಚಾರವೆಸಗಿದ್ದ ಪ್ರಕರಣ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮನೆ ಮಾಲೀಕನನ್ನು ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ.

ಬಿಹಾರ‌ ಮೂಲದ ಶಾಂತಿನಗರ ನಿವಾಸಿ ಅನಿಲ್ ರವಿಶಂಕರ್ ಪ್ರಸಾದ್ ಬಂಧಿತ ಆರೋಪಿಯಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು‌ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದಿದ್ದಾರೆ.

ಅಶೋಕ್ ನಗರ ಪೊಲೀಸರು ಬಂಧಿಸಿರುವ ಆರೋಪಿಯು ಟೈಲ್ಸ್ ವ್ಯಾಪಾರ ಮಾಡಿಕೊಂಡಿದ್ದು ಶಾಂತಿನಗರದ ನಿವಾಸಿಯಾಗಿದ್ದ. ಇವನಿಗೆ ಸೇರಿದ ಮನೆಯಲ್ಲಿ ಪಶ್ಚಿಮ ಬಂಗಾಳದ ಮೂಲದ ಯುವತಿ ಕಳೆದ ಮಾರ್ಚ್‌ನಿಂದ ಬಾಡಿಗೆಗಿದ್ದಳು.

ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಳು‌. ಈ ಮಧ್ಯೆ ಮನೆಗೆ ಸ್ನೇಹಿತರು ಬರುತ್ತಿರುವ ಬಗ್ಗೆ ಮನೆ ಮಾಲೀಕ ಯುವತಿ ಬಳಿ ತಗಾದೆ ತೆಗೆದಿದ್ದ. ಇದೇ ವಿಚಾರಕ್ಕಾಗಿ‌ ಇಬ್ಬರ ನಡುವೆ ಮಾತಿನ ಸಂಘರ್ಷ ನಡೆದಿತ್ತು.

 ಸ್ನೇಹಿತನ ಬೈಕ್ ಲಾಕ್ ಮಾಡಿದ್ದ ಕಿರಾತಕ

ಸ್ನೇಹಿತನ ಬೈಕ್ ಲಾಕ್ ಮಾಡಿದ್ದ ಕಿರಾತಕ

ಯುವತಿಯು ವಾಸವಿದ್ದ ಮನೆಗೆ ಆಕೆಯ ಸ್ನೇಹಿತ ಬಂದು ಉಳಿದುಕೊಂಡಿದ್ದ. ‌ಇದನ್ನು ಗಮನಿಸಿದ ಮಾಲೀಕ ಅನಿಲ್ ರವಿಶಂಕರ್ ಪ್ರಸಾದ್ ಮನೆಯಾಚೆ ನಿಲ್ಲಿಸಿದ್ದ ಯುವತಿಯ ಸ್ನೇಹಿತನ ಬೈಕ್‌ಗೆ ಲಾಕ್ ಮಾಡಿ ಮಾರನೇ‌‌ ದಿನ ಬೆಳಗ್ಗೆ ಪೊಲೀಸರು ಬಂದು ಲಾಕ್ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಹೇಳಿದ್ದನು. ಬಾಡಿಗೆ ಕೊಟ್ಟರೆ ಇಲ್ಲಸಲ್ಲದ ಚಟುವಟಿಕೆ ನಡೆಸುತ್ತೀರಾ ಎಂದು ಬೊಬ್ಬೆ ಹೊಡೆದಿದ್ದ. ಪೊಲೀಸರು ಬಂದರೆ ನಿಮ್ಮ ‌ಮೇಲೆ ಕೇಸ್ ದಾಖಲಿಸುತ್ತಾರೆ ಎಂದ ಸುಳ್ಳು ಹೇಳಿದ್ದ.‌ ನಂತರ‌ ತಾನು‌ ಪೊಲೀಸರೊಂದಿಗೆ ಕೇಸ್ ದಾಖಲಿಸದಂತೆ ಮಾತನಾಡಿರುವುದಾಗಿ ಹೇಳಿ‌ ಅಲ್ಲಿಂದ ಹುಡುಗನನ್ನು ಕಳುಹಿಸಿದ್ದ.

 ಯುವತಿಗೆ ಬ್ಲಾಕ್ ಮೇಲ್ ಮಾಡಿದ್ದ ಮನೆ ಮಾಲೀಕ

ಯುವತಿಗೆ ಬ್ಲಾಕ್ ಮೇಲ್ ಮಾಡಿದ್ದ ಮನೆ ಮಾಲೀಕ

ಯುವಕ ಮತ್ತು ಯುವತಿ ಮನೆಯಲ್ಲಿರುವ ಘಟನೆ ಬಗ್ಗೆ ಪೋಷಕರಿಗೆ ತಿಳಿಸುವುದಾಗಿ ಯುವತಿಗೆ ಬೆದರಿಸಿದ್ದ‌. ಕಳೆದ ಏಪ್ರಿಲ್‌ 11 ರಂದು ಆಕೆಯ ಮನೆಗೆ ಹೋದ‌ ಮಾಲೀಕ ಮಾತನಾಡುವ ನೆಪದಲ್ಲಿ ತನ್ನ ಬಳಿಯಿದ್ದ ಲೈಸೆನ್ಸ್ ರಿವಾಲ್ವರ್ ತಲೆಗೆ ಇಟ್ಟು ತನ್ನೊಂದಿಗೆ ಸಹಕರಿಸುವಂತೆ ಒತ್ತಡ ಹೇರಿದ್ದ ಎಂದು ತಿಳಿದುಬಂದಿದೆ.

ಮನನೊಂದಿದ್ದ ಯುವತಿ ಪೋಷಕರೊಂದಿಗೆ ಕೃತ್ಯದ ವಿವರ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮನೆ ಮಾಲೀಕ ಅನಿಲ್ ರವಿ ಶಂಕರ್ ಪ್ರಸಾದ್‌ನ ನೀಚ ಕೃತ್ಯದಿಂದ ಸಾಕಷ್ಟು ಮನನೊಂದಿದ್ದ ಸಂತ್ರಸ್ತ ಯುವತಿ ಇತ್ತೀಚೆಗೆ ಪೋಷಕರ ಬಳಿಯಲ್ಲಿ ತನ್ನ ಅಳಲನ್ನು ತೊಡಿಕೊಂಡಿದ್ದಳು. ಯುವತಿಯ ಪೋಷಕರು ಆಕೆಯನ್ನು ಸಮಾಧಾನ ಮಾಡಿ ಅಶೋಕ್ ನಗರ ಪೊಲೀಸ್ ಠಾಣೆಗೆ ಕರೆತಂದು ದೂರನ್ನು ನೀಡಿದ್ದರು.

 ತಡವಾಗಿ ದೂರುಕೊಟ್ಟಿದ್ದೇಕೆ?

ತಡವಾಗಿ ದೂರುಕೊಟ್ಟಿದ್ದೇಕೆ?

ಯುವತಿಯ ಮೇಲೆ ಅತ್ಯಾಚಾರ ಎಸಗಿದ ಮನೆ ಮಾಲೀಕ ರವಿಶಂಕರ್ ಪ್ರಸಾದ್ ಬ್ಯುಸಿನೆಸ್ ಮ್ಯಾನ್ ಆಗಿದ್ದರಿಂದ ಸಾಕಷ್ಟು ಪ್ರಭಾವಿಯಾಗಿದ್ದ. ತನ್ನ ಪ್ರಭಾವವನ್ನು ಮೀರಿ ಕೇಸ್‌ನಿಂದ ತಪ್ಪಿಸಿಕೊಳ್ಳವುದಾಗಿ ಬೆದರಿಸಿದ್ದ. ಇದರಿಂದಾಗಿ ಹೆದರಿ ತಡವಾಗಿ ಬಂದು ದೂರನ್ನು ನೀಡುತ್ತಿರುವುದಾಗಿ ಪೊಲೀಸರ ಮುಂದೆ ಸಂತ್ರಸ್ತೆ ಹೇಳಿದ್ದಾಳೆ.

 ಅನಿಲ್ ರವಿ ಶಂಕರ್ ಪ್ರಸಾದ್ ಬಂಧನ

ಅನಿಲ್ ರವಿ ಶಂಕರ್ ಪ್ರಸಾದ್ ಬಂಧನ

ಸಂತ್ರಸ್ತ ಯುವತಿ ಕೊಟ್ಟ ದೂರಿನ ಅನ್ವಯ ಈಗಗಾಲೇ ಆರೋಪಿ ರವಿಶಂಕರ್ ಪ್ರಸಾದ್‌ನನ್ನು ಬಂಧಿಸಿರುವ ಅಶೋಕ್ ನಗರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪೊಲೀಸರು ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಆರೋಪಿಯ ಬಳಿಯಲ್ಲಿದ್ದ ಲೈಸನ್ಸ್ ರಿವಲ್ವಾರ್ ಅನ್ನು ಸಹ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

   ಬೆಸ್ಟ್ ಓಪನರ್ಸ್ ಆಫ್ ಐಪಿಎಲ್ 2022 | OneIndia Kannada
   English summary
   Bengaluru young woman rape :Ashok nagar police arrested bussiness man for raping student at gun point,know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X