ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್‌ಆರ್‌ಟಿಸಿ ಬಸ್ ಅಪಘಾತ - ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸಿದ ನಿಗಮ

|
Google Oneindia Kannada News

ಬೆಂಗಳೂರು, ಮೇ 9:ಬೆಂಗಳೂರಿನಲ್ಲಿ ಕೆಎಸ್‌ಆ್‌ಟಿಸಿ ಬಸ್ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದಿರುವ ಘಟನೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಕೆಂಗೇರಿಯ ಭಾರತ್ ಪೆಟ್ರೋಲಿಯಂ ಬಳಿಯ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ. ಕೆಎಸ್‌ಆ್‌ಟಿಸಿ ಬಸ್‌ನಲ್ಲಿ 45 ಜನ ಪ್ರಯಾಣಿಸುತ್ತಿದ್ದರು. ಅಪಘಾತದಿಂದಾಗಿ 26 ಪ್ರಯಾಣಿಕರಿಗೆ ಗಾಯಗಳಾಗಿದ್ದು. ಈ ಪೈಕಿ ಐವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ನಿಗಮದಿಂದಲೇ ಭರಿಸುವುದಾಗಿ ಕೆಎಸ್‌ಆ್‌ಟಿಸಿ ಸ್ಪಷ್ಟಪಡಿಸಿದೆ.

ರಸ್ತೆ ಗುಂಡಿಗೆ ತಪ್ಪಿಸಲು ಹೋಗಿ ಬಸ್ ನಿಯಂತ್ರವೇ ತಪ್ಪಿತೇ..?

ರಸ್ತೆ ಗುಂಡಿಗೆ ತಪ್ಪಿಸಲು ಹೋಗಿ ಬಸ್ ನಿಯಂತ್ರವೇ ತಪ್ಪಿತೇ..?

ಕೆಎಸ್‌ಆ್‌ಟಿಸಿ ಬಸ್ ಅಪಘಾತಕ್ಕೆ ರಸ್ತೆ ಗುಂಡಿ ಕಾರಣವಾಯಿತೇ ಎಂಬ ಎಂಬ ಶಂಕೆಗಳು ಮೂಡಿವೆ. ಮೆಟ್ರೋ ಪಿಲ್ಲರ್ ಪಕ್ಕದಲ್ಲಿ ರಸ್ತೆಗಳು ಹಳ್ಳದಿಣ್ಣೆಗಳಿಂದ ಕೂಡಿದೆ. ರಸ್ತೆ ಸಮತಟ್ಟಾಗಿಲ್ಲದ ಕಾರಣ ರಸ್ತೆಯ ಗುಂಡಿಯನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಕಾರಣವಾಗಿದೆ ಎಂಬ ಅನುಮಾನ ಮೂಡಿದೆ. ಮೆಟ್ರೋ ಪಿಲ್ಲರ್ ಇಲ್ಲದೇ ಇದಿದ್ದರೇ ಬಸ್ ಮತ್ತೊಂದು ಭಾಗದ ರಸ್ತೆಗೆ ಹೋಗಿ ದೊಡ್ಡ ಅನಾಹುತವೇ ಆಗಿ ಹೋಗ್ತಿತ್ತು. ನಾಲ್ಕು ಅಡಿಯ ತಡೆಗೋಡೆಗೆ ಗುದ್ದಿ ಕೊನೆಗೆ ಪಿಲ್ಲರ್ ನಂಬರ್ 546 ಗೆ ಬಸ್ ಡಿಕ್ಕಿ ಹೊಡೆದಿದೆ. ‌‌ಇನ್ನು ಇದೇ ಪಿಲ್ಲರ್ ಬಳಿ ದೊಡ್ಡ ಗುಂಡಿಯೊಂದು ಬಿದ್ದಿರುವುದು ಬೆಳಕಿಗೆ ಬಂದಿದೆ. ಇದೇ ಕಾರಣದಿಂದಾಗಿ ಗುಂಡಿ ತಪ್ಪಿಸಲು ಅಪಘಾತವಾಗಿರಬಹುದು ಎಂದು ಹೇಳಲಾಗತ್ತಿದೆ.

ಇಬ್ಬರು ಚಾಲಕರಿದ್ದ ಕೆೆಎಸ್‌ಆರ್‌ಟಿಸಿ ಬಸ್ ಅಪಘಾತ.

ಇಬ್ಬರು ಚಾಲಕರಿದ್ದ ಕೆೆಎಸ್‌ಆರ್‌ಟಿಸಿ ಬಸ್ ಅಪಘಾತ.

ಅಪಘಾತಕ್ಕೆ ಕಾರಣವಾಗಿದ್ದ ಕೆಎಸ್‌ಆರ್‌ಟಿಸಿ ಬಸ್ ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿತ್ತು ಈ ವೇಳೆ ಮಡಿಕೇರಿಯಿಂದ ಬಸ್ ಅನ್ನು ಮಂಜುನಾಥ್ ಎಂಬ ಚಾಲಕರು ಬಸ್ ಚಾಲನೆ ಮಾಡುತ್ತಿದ್ದ. ಚನ್ನಪಟ್ಟಣದಿಂದ ಚಾಲಕ ಕಂ ನಿರ್ವಾಹಕನಾಗಿದ್ದ ವೆಂಕಟರಮಣ ಬಸ್ ಚಾಲನೆ ಮಾಡಿದ್ದ ಆದರೆ ಕೆಂಗೇರಿ ಬಳಿಯ ಪಿಲ್ಲರ್ ನಂಬರ್ 546 ಸಮೀಪ ಬಸ್ ಅಪಘಾತವಾಗಿತ್ತು.

ಕೆಎಸ್‌ಆರ್‌ಟಿಸಿಯಿಂದಲೇ ಗಾಯಾಳುಗಳ ಚಿಕಿತ್ಸಾ ವೆಚ್ಚ..

ಕೆಎಸ್‌ಆರ್‌ಟಿಸಿಯಿಂದಲೇ ಗಾಯಾಳುಗಳ ಚಿಕಿತ್ಸಾ ವೆಚ್ಚ..

ಕೆಎಸ್‌ಆರ್‌ಟಿಸಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಗಾಯಗಳಾಗಿತ್ತು. ತಕ್ಷಣಕ್ಕೆ ಕೆಂಗೇರಿ ಸಮೀಪದ ಸುಪ್ರ, ಪಿನಾಕಲ್ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲಾಯಿತು. 45 ಪ್ರಯಾಣಿಕರ ಪೈಕಿ 26 ಪ್ರಯಾಣಿಕರಿಗೆ ಗಾಯಗಳಾಗಿತ್ತು. ಈ ಪೈಕಿ ಐದು ಜನರಿಗೆ ಗಂಭೀರ ಗಾಯವಾಗಿತ್ತು. ಗಂಭೀರವಾಗಿ ಗಾಯವಾಗಿದ್ದ ಗಾಯಾಳುಗಳಿಗೆ 10800, 5000 ಮತ್ತು 3000ದಂತೆ ಚಿಕಿತ್ಸಾ ವೆಚ್ಚವನ್ನು ಭರಿಸಲಾಗಿದೆ. ಇನ್ನು ಚಾಲಕ ಕಂ ನಿರ್ವಾಹಕ ವೆಂಕಟರಾಮುವಿಗೆ ಸ್ಟೇರಿಂಗ್ ತಗುಲಿ ಹೊಟ್ಟೆಗೆ ಒಳಗಾಯವಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊರ್ವ ಚಾಲಕ ಮಂಜುನಾಥನಿಗೆ ಲಘು ಪೆಟ್ಟಾಗಿದ್ದು ಇವರು ಸಹ ಬಿಜಿಎಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ

ಕೆಎಸ್ ಆರ್ ಟಿಸಿಯಲ್ಲಿ ಚಾಲಕನ ಇತಿಹಾಸವೇನು..?

ಕೆಎಸ್ ಆರ್ ಟಿಸಿಯಲ್ಲಿ ಚಾಲಕನ ಇತಿಹಾಸವೇನು..?

ವೆಂಕಟರಾಮು ಕೆಎಸ್ ಆರ್ ಟಿಸಿ ನಿಗಮದಲ್ಲಿ 13 ವರ್ಷದಿಂದ ಚಾಲಕ ಕಂ ನಿರ್ವಾಹಕನಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಇವರಿಗೆ ಯಾವುದೇ ಅಪಘಾತದ ಇತಿಹಾಸವಿಲ್ಲ ಎಂದು ಕೆಎಸ್ ಆರ್ ಟಿಸಿ ನಿಗಮವು ಸ್ಪಷ್ಟಪಡಿಸಿದೆ.

ಸಾರಿಗೆ ಸಚಿವ ಶ್ರೀರಾಮುಲುರವರ ನಿರ್ದೇಶನದ ಮೇರೆಗೆ ಗಾಯಾಳು ಚಿಕಿತ್ಸೆ ವೆಚ್ಚ ಭರಿಸಲಾಗಿದೆ. ಇನ್ನು ಅಪಘಾತ ವಿಚಾರಕ್ಕೆ ಸಂಬಂಧಿಸಿದಂತೆ ಕೆಎಸ್ಆರ್‌ಟಿಸಿ ವಿಷಾದವನನ್ನು ವ್ಯಕ್ತಪಡಿಸಿದೆ.

Recommended Video

Rohit Sharma ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada

English summary
KSRTC bus accident in Bengaluru. The transport corporation has incurred treatment costs for hospitals in the accident
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X