ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಸಿಟಿವಿ ಇಲ್ಲದ ಮಳಿಗೆ, ಕೆಜಿ ಚಿನ್ನ ಮಾಯ

By Mahesh
|
Google Oneindia Kannada News

ಬೆಂಗಳೂರು, ಏ.30: ಅಕ್ಷಯ ತದಿಗೆ ಹಿನ್ನೆಲೆಯಲ್ಲಿ ಆಭರಣ ಮಳಿಗೆಯಲ್ಲಿ ಮಣಗಟ್ಟಲೆ ಚಿನ್ನಾಭರಣ ಶೇಖರಿಸಿರುವುದನ್ನು ಕೆಲ ದಿನಗಳಿಂದ ಕಳ್ಳರು, ಸುರಂಗ ತೋಡಿ ಒಂದು ಕೆಜಿ ಚಿನ್ನ ದೋಚಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲಿ ನಡೆದಿದೆ.

ರಾಮಮೂರ್ತಿನಗರ ಮುಖ್ಯರಸ್ತೆಯಲ್ಲಿರುವ ಹೋಲಿ ಫ್ಯಾಮಿಲಿ ಚರ್ಚ್ ಸಮೀಪದ ಕೈರಳಿ ಜ್ಯುವೆಲರ್ಸ್ ಮಳಿಗೆ ತಲುಪಲು ಕಳ್ಳರು ರಾಜಕಾಲುವೆಯ ರಾಜಮಾರ್ಗ ಬಳಸಿಕೊಂಡಿದ್ದಾರೆ. ರಾಜಕಾಲುವೆ ಮೂಲಕ ತೆರಳಿ ಚಿನ್ನದ ಮಳಿಗೆಗೆ ಕನ್ನ ಹಾಕಿದ್ದಾರೆ ಒಂದು ಕೆ.ಜಿ.ಗೂ ಹೆಚ್ಚು ಚಿನ್ನಾಭರಣ ದೋಚಿರುವ ಘಟನೆ ರಾಮಮೂರ್ತಿನಗರ ಮುಖ್ಯರಸ್ತೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.ಮಂಗಳವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. [ಅಕ್ಷಯ ತೃತೀಯದಂದು ಚಿನ್ನ ಖರೀದಿ ಯಾಕೆ?]

ಆಭರಣ ಮಳಿಗೆ ಮಾಲೀಕ ರಾಜಗೋಪಾಲನ್ ಕೇರಳಕ್ಕೆ ತೆರಳಿದ್ದರಿಂದ ಕಳೆದ ಮೂರು ದಿನಗಳಿಂದ ಮಳಿಗೆಯನ್ನು ತೆರೆದಿರಲಿಲ್ಲ ಎನ್ನಲಾಗಿದೆ. ಇದನ್ನು ತಿಳಿದ ಕಳ್ಳರು ಪೂರ್ವಯೋಜಿತವಾಗಿ ಈ ಕೃತ್ಯ ಎಸಗಿದ್ದಾರೆ. ಒಬ್ಬ ವ್ಯಕ್ತಿ ತೂರುವಷ್ಟು ಕನ್ನ ಕೊರೆದು ನುಗ್ಗಿ ಚಿನ್ನದ ಸರ, ಉಂಗುರ, ಓಲೆ ಸೇರಿದಂತೆ ಹಲವು ಮಾದರಿಯ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದಾರೆ,'' ಎಂದು ಪೊಲೀಸರು ತಿಳಿಸಿದ್ದಾರೆ.

Kairali Jewellery Ramamurthynagar

ಸಿಸಿಟಿವಿ ಕೆಮೆರಾ ಇಲ್ಲ: ಕೈರಳಿ ಆಭರಣ ಮಳಿಗೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರಲಿಲ್ಲ. ಕಳ್ಳತನ ಮಾಡಿರುವ ವ್ಯಕ್ತಿಗಳು ಮೊದಲೇ ಇದನ್ನು ಗಮನಿಸಿದ್ದಾರೆ. ಆಭರಣ ಎಷ್ಟಿದೆ ಎಂಬ ಅರಿವು ಮುಂಚಿತವಾಗಿ ತಿಳಿದಿರುವ ಸಾಧ್ಯತೆಯಿದೆ. ವ್ಯವಸ್ಥಿತವಾಗಿ ಕನ್ನ ಹಾಕಿದ್ದಾರೆ. ಕಳುವಾಗಿರುವ ಆಭರಣಗಳ ಮೌಲ್ಯ ಸುಮಾರು 35 ಲಕ್ಷ ರೂ.ಗಳಿರಬಹುದು ಎಂದು ಅಂದಾಜಿಸಲಾಗಿದೆ. ಬೆಳ್ಳಿ ಆಭರಣಗಳನ್ನು ಮುಟ್ಟಿಲ್ಲ, ಕೇವಲ ಚಿನ್ನಕ್ಕೆ ಮಾತ್ರ ಕೈ ಹಾಕಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕೆ ಆರ್ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಂಬಂಧವಾಗಿ ಆಭರಣ ಮಳಿಗೆಯ ಇಬ್ಬರು ಉದ್ಯೋಗಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆಭರಣ ಮಳಿಗೆಗಳಲ್ಲಿ ಸಿಸಿಟಿವಿ ಅಳವಡಿಕೆ ಬಗ್ಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ನಗರದ ಹಲವಾರು ಮಳಿಗೆ ಮಾಲೀಕರು ನಿರ್ಲಕ್ಷ್ಯ ತೋರಿದ್ದಾರೆ ಎಂದು ರಾಮಮೂರ್ತಿ ನಗರ ಪೊಲೀಸರು ಹೇಳಿದರು.

English summary
Burglars entered a jeweller’s shop in Ramamurthynagar by burrowing an eight-foot tunnel through a storm-water drain situated nearby and made away with gold ornaments worth several lakhs of rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X