ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೇರಾ ಅನುಷ್ಠಾನ ಕುರಿತು ಬಿಲ್ಡರ್‌ಗಳಿಂದ ಸರ್ಕಾರಕ್ಕೆ ದೂರು

|
Google Oneindia Kannada News

ಬೆಂಗಳೂರು, ನವೆಂಬರ್ 20: ಕರ್ನಾಟಕ ರೇರಾ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇಂದು(ನವೆಂಬರ್ 20) ರಾಜ್ಯ ಸರ್ಕಾರಕ್ಕೆ ಬಿಲ್ಡರ್ ಗಳು ಹಾಗೂ ಇತರೆ ಕಟ್ಟಡ ನಿರ್ಮಾಣ ಸಂಘದವರು ದೂರು ನೀಡಿದ್ದಾರೆ.

ರಾಜ್ಯದಲ್ಲಿ ರೇರಾ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡದೆ ಇರುವುದರಿಂದ ಮನೆ ಕೊಂಡುಕೊಳ್ಳಲು ಜನರು ಮುಂದಾಗುತ್ತಿಲ್ಲ, ಇದರಿಂದ ಉದ್ಯಮಕ್ಕೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ನ್ಯಾಯಾಲಯಗಳ ಆದೇಶದಂತೆ ರೇರಾ ಕಾಯ್ದೆಯನ್ನು ಅನುಷ್ಠಾನ ಮಾಡಬೇಕು ಎಂದು ಸಚಿವ ಯುಟಿ ಖಾದರ್ ಅವರಿಗೆ ಬಿಲ್ಡರ್‌ಗಳ ನಿಯೋಗ ಮನವಿ ಮಾಡಿದೆ.

ರೇರಾ ಕಾಯ್ದೆ ವೆಬ್ ಸೈಟಿಗೆ ಚಾಲನೆ, ಲಾಗ್ ಇನ್ ಹೇಗೆ?ರೇರಾ ಕಾಯ್ದೆ ವೆಬ್ ಸೈಟಿಗೆ ಚಾಲನೆ, ಲಾಗ್ ಇನ್ ಹೇಗೆ?

ಇದಲ್ಲದೆ ರೇರಾ ಕಾಯ್ದೆಯನ್ನು ಉಲ್ಲಂಘಿಸುವಂತಹ ಬಿಲ್ಡರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೂ ಕೂಡ ನಿಯಮ ರೂಪಿಸಬೇಕು ಹಾಗೆಯೇ ರೇರಾ ಪ್ರಾಧಿಕಾರವು ಧನಾತ್ಮಕವಾಗಿ ಕಾರ್ಯೋನ್ಮುಖವಾಗಬೇಕೆಂದು ನಿಯೋಗವು ಸಚಿವರಿಗೆ ಮನವಿ ಮಾಡಿದೆ. ಸಚಿವರು ಇದಕ್ಕೆ ಪ್ರತಿಕ್ರಿಯಿಸಿದ್ದು ಶೀಘ್ರವೇ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಭಾಗವಹಿಸಿದ್ದ ಬಿಲ್ಡರ್‌ಗಳು ತಿಳಿಸಿದ್ದಾರೆ.

Builders shows their displeasure over RERA implementation

ನಿವೇಶನ, ಫ್ಲ್ಯಾಟ್ ಖರೀದಿಸುವವರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಿಯಲ್ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ ರೇರಾ ಜಾರಿಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ವನ್ನು ಜುಲೈನಲ್ಲಿ ಸರ್ಕಾರ ಪ್ರಕಟಿಸಿತ್ತು.

ರೇರಾ ಕಾಯ್ದೆ ಜಾರಿಯಿಂದ ರಿಯಲ್‌ ಎಸ್ಟೇಟ್‌ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ, ಲೂಟಿಗೆ ಕಡಿವಾಣ ಬೀಳಲಿದೆ. ಐಎಎಸ್ ಅಧಿಕಾರಿ ವಿನೋತ್ ಪ್ರಿಯಾ ಅವರನ್ನು ರೇರಾ ಕಾಯ್ದೆ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಸರ್ಕಾರ ನೇಮಕಗೊಳಿಸಲು ಆದೇಶ ಹೊರಡಿಸಿತ್ತು.

ರೇರಾ ಕಾಯ್ದೆ ವಿರುದ್ಧ ರವಿಕೃಷ್ಣಾ ರೆಡ್ಡಿರಿಂದ ರಾಜ್ಯಪಾಲರಿಗೆ ದೂರುರೇರಾ ಕಾಯ್ದೆ ವಿರುದ್ಧ ರವಿಕೃಷ್ಣಾ ರೆಡ್ಡಿರಿಂದ ರಾಜ್ಯಪಾಲರಿಗೆ ದೂರು

ಇನ್ನು ರೇರಾ ವೆಬ್​ ಪೋರ್ಟಲ್ ಆರಂಭಿಸಲಾಗಿದ್ದು, ಈ ವೆಬ್​ ಪೋರ್ಟಲ್​'ನಲ್ಲಿ ರೇರಾ ಯೋಜನೆಗಳು,ನಿವೇಶನ ನೋಂದಣಿ, ಎಸ್ಟೇಟ್ ಏಜೆಂಟರ್ ಬಗ್ಗೆ ದೂರು ಸಲ್ಲಿಸಲು ಅವಕಾಶವಿದೆ. ಆದರೆ ಈ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಬಿಲ್ಡರ್‌ಗಳು ಮನವಿ ಮಾಡಿದ್ದಾರೆ.

English summary
Karnataka builders shows their displeasure with the minister UT Khader they requested to amend the RERA act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X