ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಜೆಟ್; ಬೆಂಗಳೂರು ಏರ್ ಪೋರ್ಟ್‌ ಮೆಟ್ರೋಗೆ ಕೇಂದ್ರದ ಒಪ್ಪಿಗೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 02; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ರ ಬಜೆಟ್ ಮಂಡನೆ ಮಾಡಿದ್ದಾರೆ. ಬೆಂಗಳೂರು ನಗರಕ್ಕೆ ಬಜೆಟ್‌ನಲ್ಲಿ ಕೊಡುಗೆ ನೀಡಲಾಗಿದ್ದು, 14,788 ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಲಾಗಿದೆ.

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಮ್ಮ ಮೆಟ್ರೋ ಯೋಜನೆ ಜಾರಿಗೊಳಿಸಲಾಗುತ್ತಿದೆ. ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಬಜೆಟ್‌ನಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಒಪ್ಪಿಗೆ ಕೊಡಲಾಗಿದೆ.

ಬಜೆಟ್ 2021; ನಮ್ಮ ಮೆಟ್ರೋ 2ಎ ಮತ್ತು 2ಬಿ ಯೋಜನೆ ವಿಸ್ತರಣೆಬಜೆಟ್ 2021; ನಮ್ಮ ಮೆಟ್ರೋ 2ಎ ಮತ್ತು 2ಬಿ ಯೋಜನೆ ವಿಸ್ತರಣೆ

ನಿರ್ಮಲಾ ಸೀತಾರಾಮನ್ ನಮ್ಮ ಮೆಟ್ರೋ 2ಎ ಮತ್ತು 2ಬಿ ಯೋಜನೆ ವಿಸ್ತರಣೆಗೆ ಬಜೆಟ್‌ನಲ್ಲಿ 14,788 ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಿದ್ದಾರೆ. ಈ ಅನುದಾನದಲ್ಲಿ ನಗರದಲ್ಲಿ ಒಟ್ಟು 58.19 ಕಿ. ಮೀ. ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ.

ಬಜೆಟ್ 2021; ಕರ್ನಾಟಕದ ಸಂಸದೆ ರಾಜ್ಯಕ್ಕೆ ಕೊಟ್ಟಿದ್ದೇನು? ಬಜೆಟ್ 2021; ಕರ್ನಾಟಕದ ಸಂಸದೆ ರಾಜ್ಯಕ್ಕೆ ಕೊಟ್ಟಿದ್ದೇನು?

Budget Union Govt Approved For Metro Line To Bengaluru Airport

ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಯೋಜನೆಯ 2ಎ ಮತ್ತು 2ಬಿ ಅಡಿ ಬೆಂಗಳೂರು ನಗರದ ಹೊರ ವಲಯಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ತಯಾರು ಮಾಡಿತ್ತು. ಈ ಯೋಜನೆಗೆ ಅಧಿಕೃತವಾಗಿ ಕೇಂದ್ರದ ಒಪ್ಪಿಗೆ ಸಿಕ್ಕಿದೆ.

ಆತ್ಮ ನಿರ್ಭರ ಬಜೆಟ್ ಅಲ್ಲ ಆತ್ಮ ಬರ್ಬರ ಬಜೆಟ್; ಸಿದ್ದರಾಮಯ್ಯ ಆತ್ಮ ನಿರ್ಭರ ಬಜೆಟ್ ಅಲ್ಲ ಆತ್ಮ ಬರ್ಬರ ಬಜೆಟ್; ಸಿದ್ದರಾಮಯ್ಯ

ನಮ್ಮ ಮೆಟ್ರೋ ಯೋಜನೆ 2 (ಎ) ಸಿಲ್ಕ್ ಬೋರ್ಡ್- ಕೆ. ಆರ್. ಪುರಂ, ಯೋಜನೆ 2(ಬಿ) ಕಸ್ತೂರಿ ನಗರ-ಹೆಬ್ಬಾಳ-ವಿಮಾನ ನಿಲ್ದಾಣ) ಮಾರ್ಗವಾಗಿದ್ದು, ಕಳೆದ ತಿಂಗಳು ಯೋಜನೆಯ ಪ್ರಾಥಮಿಕ ಕಾಮಗಾರಿಗಳು ಆರಂಭವಾಗಿವೆ.

ಈ ಮಾರ್ಗದ ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಶೇ 35ರಷ್ಟು ಅನುದಾನ ನೀಡಲಿದೆ. ಉಳಿದ 35 ಶೇ ಅನುದಾನವನ್ನು ಸಾಲ ಪಡೆಯಲಾಗುತ್ತದೆ. ಖಾಸಗಿ ಕಂಪನಿಗಳು ಶೇ 15ರಷ್ಟು ಬಂಡವಾಳ ಹೂಡಿಕೆಯನ್ನು ಮಾಡಲಿವೆ.

Recommended Video

Budget 2021 : ಮೋದಿ ಸರ್ಕಾರ ಕೊಟ್ಟ ದೊಡ್ಡ ಶಾಕ್ ಇದೆ | Oneindia Kannada

English summary
In a union Budget 2021 government approved to build a 58.19 km metro line to connect Silk Board to Kempegowda International Airport (KIA), Bengaluru. Rs 14,788 crore announced in budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X