ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನಿಂದ ಬಜೆಟ್ ತಯಾರಿ ಆರಂಭಿಸಿದ ಬಿ ಎಸ್ ವೈ, ಯಾರಿಗೆ ಏನೂ ಕೊಡ್ತಾರೆ?

By ಅನಿಲ್ ಬಾಸೂರ್
|
Google Oneindia Kannada News

ಬೆಂಗಳೂರು, ಜ. 06: ಬಜೆಟ್ ಪೂವರ್ಭಾವಿ ಸಭೆಯನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿನಿಂದ ಆರಂಭಿಸಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಮೊದಲ ಪೂರ್ವಬಾವಿ ಸಭೆಯನ್ನು ವಿಧಾನಸೌದಲ್ಲಿ ಇವತ್ತು ನಡೆಸಿದ್ದಾರೆ.

ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವಂತೆ ಸಿಎಂ ಯಡಿಯೂರಪ್ಪರಿಗೆ ಒತ್ತಾಯಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವಂತೆ ಸಿಎಂ ಯಡಿಯೂರಪ್ಪರಿಗೆ ಒತ್ತಾಯ

ಬರುವ ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡನೆ ಆಗಲಿದೆ. ಇದೇ ಹಿನ್ನೆಲೆಯಲ್ಲಿ ಇಂದಿನಿಂದ ಎಲ್ಲ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಯನ್ನು ಸಿಎಂ ಯಡಿಯೂರಪ್ಪ ತೆಗೆದುಕೊಳ್ಳಲಿದ್ದಾರೆ. ವಾಣಿಜ್ಯ ತೆರಿಗೆ ಸಂಗ್ರಹದ ಮಾಹಿತಿ ಪಡೆದು ಹಲವು ಸೂಚನೆಗಳನ್ನು ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಕೊಟ್ಟಿದ್ದಾರೆ.

Budget review mmeeting begins in vidhansoudha

ಮುಂದಿನ ದಿನಗಳಲ್ಲಿ ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಜನರನ್ನು ಕರೆದು ವಿವರಗಳನ್ನು ಮಾಹಿತಿಯನ್ನೂ ಮುಖ್ಯಮಂತ್ರಿ ಯಡಿಯೂರಪ್ಪ ಪಡೆದುಕೊಳ್ಳಲಿದ್ದಾರೆ.

ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಬೇಕು ಎಂಬ ಒತ್ತಾಯ ಈಗಾಗಲೇ ಯಡಿಯೂರಪ್ಪ ಅವರಿಗೆ ಬಂದಿದೆ. ಕೃಷಿ ಹಾಗೂ ನೀರಾವರಿ ಕ್ಷೇತ್ರಗಳಿಗೆ ಹೆಚ್ಚಿನ ಮಹತ್ವ ಕೊಡುವುದಾಗಿ ನಿನ್ನೆ ಹಳೇಬೀಡುನಲ್ಲಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಮೊದಲ ಬಾರಿ ಸಿಎಂ ಆಗಿದ್ದಾಗ 2011ರಲ್ಲಿ ಪ್ರತ್ಯೇಕ ಕೃಷಿ ಬಜೆಟ್ ನ್ನು ದೇಶಕ್ಕೆ ಮಾದರಿಯಾಗಿ ಯಡಿಯೂರಪ್ಪ ಮಂಡಿಸಿದ್ದರು. ಇದೀಗ ಮತ್ತೆ ಕೃಷಿಬಜೆಟ್ ಮಾಡಲು ಯಡಿಯೂರಪ್ಪ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯಿದೆ.

ಬೆಳಗಾವಿಯಲ್ಲಿ ಮಾರ್ಚ್ ನಲ್ಲಿ ಬಜೆಟ್ ಅಧಿವೇಶನ?

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಚಲಿಗಾಲದ ಅಧಿವೇಶವನ್ನು ಬೆಳಗಾವಿಯಲ್ಲಿ ನಡೆಸಿರಲಿಲ್ಲ. ವರ್ಷದ ಮೊದಲ ಜಂಟಿ ಅಧಿವೇಶನವೂ ಬೆಂಗಳೂರಿನಲ್ಲಿ ಇದೇ ಫೆ. 17 ರಿಂದ 21ರವರೆಗೆ ನಡೆಯಲಿದೆ. ಹಾಗಾಗಿ ಮಾರ್ಚ್ ನಲ್ಲಿ ನಡೆಯುವ ಬಜೆಟ್ ಅಧಿವೇಶನ ಬೆಳಗಾವಿ ಸುವರ್ಣಸೌದಲ್ಲಿ ನಡೆಯುವ ಸಾಧ್ಯತೆಯಿದೆ.

English summary
Chief minister yediyurappa taken budget review meeting in vidhanasoudah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X