ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬುಡಾಪೆಸ್ಟ್ ಬೆಂಗಳೂರು ಸಂಗೀತ ಹಬ್ಬದಲ್ಲಿ ಜಾನಪದ ಸುಧೆ

By Vanitha
|
Google Oneindia Kannada News

ಬೆಂಗಳೂರು, ಅ, 20 : ಮೆಶಿದಾ ಬ್ಯಾಂಡ್ ಎಂಬ ಹಂಗೇರಿಯನ್ ಫೋಕ್ ಗ್ರೂಪ್ 'ಬುಡಾಪೆಸ್ಟ್ ಬೆಂಗಳೂರು ಸಂಗೀತ ಹಬ್ಬ-2015' ಕಾರ್ಯಕ್ರಮವನ್ನು ನಗರದ ಭಾರತೀಯ ವಿದ್ಯಾಭವನದ ಕಿಂಚಾ ಸಭಾಂಗಣದಲ್ಲಿ ಅಕ್ಟೋಬರ್ 22ರ ಗುರುವಾರದಂದು ಸಂಜೆ 6 ಗಂಟೆಗೆ ಹಮ್ಮಿಕೊಂಡಿದೆ.

ಬುಡಾಪೆಸ್ಟ್ ಬೆಂಗಳೂರು ಸಂಗೀತ ಮನೋರಂಜನಾ ಕಾರ್ಯಕ್ರಮವನ್ನು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ICCR), ಭಾರತೀಯ ವಿದ್ಯಾಭವನ, ಇಂಟರ್ ನ್ಯಾಷನಲ್ ಆರ್ಟ್ಸ್ ಆಂಡ್ ಕಲ್ಚರಲ್ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿದೆ.[ಕ್ಯಾನ್ಸರಿಗೆ ಬಲಿಯಾದ ವೇಣು ವಾದಕ ಎನ್ ರಮಣಿ]

Budapest Bengaluru Music Festival-2015 at Bhratiya Vidya Bhavan, Bengaluru,

ನಾನಾ ದೇಶ, ಸಂಸ್ಕೃತಿಯ ನಡುವೆ ಬಾಂಧವ್ಯ ಬೆಸೆಯುವ ಉದ್ದೇಶ ಹೊಂದಿರುವ ಮೆಶಿದಾ ಬ್ಯಾಂಡ್ ಎಂಬ ಹಂಗೇರಿಯನ್ ಫೋಕ್ ಗ್ರೂಪ್ ಈಗಾಗಲೇ ಅಮೆರಿಕಾ ಫ್ರಾನ್ಸ್, ಟರ್ಕಿ, ಇಟಲಿ ಹೀಗೆ ನಾನಾ ಕಡೆ ಸಂಗೀತ ಕಾರ್ಯಕ್ರಮ ನಡೆಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನೈಜ ಜೀವನದ ಸೌಂದರ್ಯವನ್ನು ಜಾನಪದ ಹಾಡುಗಳ ಮೂಲಕ ಬಿಂಬಿಸುವಲ್ಲಿ ಸತತ ಪ್ರಯತ್ನಿಸುತ್ತಿದೆ ಎಂದು 'ಬುಡಾಪೆಸ್ಟ್ ಬೆಂಗಳೂರು' ಕಾರ್ಯಕ್ರಮ ಆಯೋಜಕರು ತಿಳಿಸಿದರು

ಈ ಹಂಗೇರಿಯನ್ ಮ್ಯೂಸಿಕ್ ಬ್ಯಾಂಡ್ ತಂಡದಲ್ಲಿನ ಮೆಶಿಯಾದ ಗೆಸಸ್ ಮಜ್ದಾ ಮಾರೀಯ ಅವರು ಹಂಗೇರಿಯಾ ಜೂನಿಯರ್ ಪ್ರೈಮ್ ಪ್ರಶಸ್ತಿ ವಿಜೇತರು. ಇವರು ಹಂಗೇರಿಯನ್ ಜಾನಪದ ಸಂಗೀತದಲ್ಲಿ ಬಹಳಷ್ಟು ಪ್ರಸಿದ್ದಿ ಪಡೆದಿದ್ದಾರೆ. ರೈನ್ಬೊ ಬ್ರಿಡ್ಜ್ ಎಂಬ ಮೊದಲ ಆಲ್ಬಂನ್ನು 2011ರಲ್ಲಿ ತಯಾರಿಸಿದ್ದಾರೆ. ಎರಡನೇ ಆಲ್ಬಂ ಆದ ಗ್ಲಾಡ್ ಮೇಶ್ ನ್ನು 2013ರಲ್ಲಿ ಜನತೆಗೆ ನೀಡಿದ್ದರು.

ಸಂಗೀತ ರಸದೌತಣಕ್ಕೆ ಪ್ರವೇಶ ಉಚಿತವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಶ್ರೀವತ್ಸ- 9845106655, www.intlarts.org ಸಂಪರ್ಕಿಸಬಹುದು

English summary
Budapest Bengaluru Music Festival-2015 at Bhratiya Vidya Bhavan, Bengaluru, Khincha auditorium. 22nd October, Thursday, at 6 PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X