ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿವಿ ಪರೀಕ್ಷೆ ಪರಿಕರಗಳ ಖರೀದಿಗೆ ನೀತಿ ಸಂಹಿತೆ ಅಡ್ಡಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 26: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾರಂವಾಗುವ ಪರೀಕ್ಷೆಗಳಿಗೆ ಬೇಕಾದ ಪರಿಕರಗಳನ್ನು ಕೊಳ್ಳಲು ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ. ಬೆಂಗಳೂರು ವಿವಿಯಲ್ಲಿ ಮೇ 18 ರಿಂದ ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್, ಕಾನೂನು ವಿಭಾಗದ ಪರೀಕ್ಷೆಗಳು ಆರಂಭವಾಗಲಿದೆ.

ಆದರೆ ಪರೀಕ್ಷೆಗೆ ಬೇಕಾದ ಪರಿಕರಗಳ ಖರೀದಿಗೆ ಟೆಂಡರ್ ಪ್ರಕ್ರಿಯೆಗೆ ನೀತಿ ಸಂಹಿತೆ ಅಡ್ಡಿಯಾಗಿದೆ. ಟೆಂಡರ್ ನಡೆಸಲು ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರೂ ಈವರೆಗೆ ಉತ್ತರ ಬಂದಿಲ್ಲ. ಹೀಗಾಗಿ ನಿಗದಿತ ದಿನಾಂಕದಿಂದ ಪರೀಕ್ಷೆ ಆರಂಭಗೊಳ್ಳುವುದೇ ಎಂಬ ಅನುಮಾನ ಮೂಡಿದೆ.

ಏಪ್ರಿಲ್ 30ರಂದು ಪಿಯು ಫಲಿತಾಂಶಏಪ್ರಿಲ್ 30ರಂದು ಪಿಯು ಫಲಿತಾಂಶ

ಪರೀಕ್ಷೆ ಆರಂಭಗೊಳ್ಳುವ ಸುಮಾರು ಒಂದೂವರೆ ತಿಂಗಳು ಮೊದಲೇ ಪರೀಕ್ಷೆಗೆ ಬೇಕಾದ ಸಾಮಗ್ರಿಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಅದರಂತೆ ಮೇ ನಲ್ಲಿ ನಡೆಯುವ ಪರೀಕ್ಷೆಗೆ ಫೆಬ್ರವರಿಯಲ್ಲೇ ಟೆಂಡರ್ ಕರೆಯಲಾಗಿತ್ತು.

BU exams preparations hit by model code of conduct

ಯಾರಿಗೆ ವರ್ಕ್ ಆರ್ಡರ್ ನೀಡಬೇಕು ಎಂದು ಚರ್ಚಿಸಿ, ಮಾರ್ಚ್ ಅಂತ್ಯದಲ್ಲಿ ಇನ್ನೇನು ಟೆಂಡರ್ ಪ್ರಕ್ರಿಯೆ ಶುರುವಾಗಬೇಕಿತ್ತು. ಅಷ್ಟರಲ್ಲಿ ದಿಢೀರ್ ಚುನಾವಣಾ ನೀತಿ ಸಂಹಿತೆ ಜಾರಿಯಾಯಿತು. ಅದರ ಪರಿಣಾಮ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಬೆಂಗಳೂರು ಮೌಲ್ಯಮಾಪನ ಕುಲಸಚಿವ ಡಾ. ಸಿ.ಶಿವರಾಜು ಮಾಹಿತಿ ನೀಡಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಯಾವ್ಯಾಯ ಪರೀಕ್ಷೆ: ಮೇ 18ರಿಂದ ಪದವಿಯ 2,4 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯಲಿದೆ. ಜೂನ್‌ ನಲ್ಲಿ ಸ್ನಾತಕೋತ್ತರ 2 ಮತ್ತು 4 ನೇ ಸೆಮಿಸ್ಟರ್ ಪರೀಕ್ಷೆಗಳು, ಬಳಿಕ ಎಂಜಿನಿಯರಿಂಗ್ 2,4,6 ನೇ ಸೆಮಿಸ್ಟರ್ ಹಾಗೂ ಕಾನೂನು ಪದವಿ ಪರೀಕ್ಷೆಗಳು ಹೀಗೆ ಜೂನ್ -ಜುಲೈವರೆಗೆ ಹಂತ ಹಂತವಾಗಿ ನಡೆಯಲಿದೆ.

ಪರೀಕ್ಷೆ ನಡೆಸಲು ಪ್ರಶ್ನೆ ಪತ್ರಿಕೆಗಳ ಮುದ್ರಣ, ಉತ್ತರ ಪ್ರತಿಗಳ ಖರೀದಿ, ಪರೀಕ್ಷೆ ಬರೆದ ನಂತರ ಆ ಉತ್ತರ ಪ್ರತಿಗಳನ್ನು ಕಾಲೇಜುಗಳಿಗೆ ಕಳುಹಿಸಲು 6 ಲಕ್ಷ ಕವರ್ ಗಳು, ಪರೀಕ್ಷಾ ಕಾರ್ಯಕ್ಕೆ ಬರುವ ಸಿಬ್ಬಂದಿಗಳಿಗೆ ಟಿಎ-ಡಿಎ ಫಾರಂಗಳು, ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ದಾಖಲಿಸಲು ಎ ಫಾರಂಗಳು, ಹಾಜರಾತಿ ಫಾರಂ ಸೇರಿದಂತೆ ಅನೇಕ ಪರಿಕರಗಳ ಖರೀದಿ ಇರುತ್ತದೆ.

English summary
Bengaluru University should conduct exams for degree, PG, engineering and other courses from May 18. But the varsity is worried that it was not able to purchase materials which is essential for exam process due to model code conduct accordingly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X