ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂರು ಬಿ.ಇಡಿ ಕಾಲೇಜುಗಳಿಗೆ ಬೆಂಗಳೂರು ವಿವಿಯಿಂದ ಅರ್ಧಚಂದ್ರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ಬೆಂಗಳೂರು ವಿಶ್ವವಿದ್ಯಾಲಯವು ಮೂರು ಬಿಇಡಿ ಕಾಲೇಜುಗಳಿಗೆ ದಾಖಲಾಗದಂತೆ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಈ ಸಾಲಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯ ಮೂರು ಬಿಇಡಿ ಕಾಲೇಜುಗಳಿಗೆ ಸಂಯೋಜನೆಯನ್ನು ನವೀಕರಿಸುವ ಕಾರಣ ಈ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಡಿ ಎಂದು ಸೂಚನೆ ನೀಡಿದೆ.

ಪ್ರಿನ್ಸ್ ಕಾಲೇಜ್ ಆಫ್ ಎಜುಕೇಷನ್( ಬನ್ನೇರುಘಟ್ಟ ಮುಖ್ಯರಸ್ತೆ, ಶ್ರೀನಿಧಿ ಕಾಲೇಜ್ ಆಫ್ ಎಜುಕೇಷನ್ ಫಾರ್ ವಿಮೆನ್(ಬನ್ನೇರುಘಟ್ಟ ರಸ್ತೆ) ಮತ್ತು ಶುತ್ತರಿಯಾ ಕಾಲೇಜ್ ಆಫ್ ಎಜುಕೇಷನ್(ಬಿ.ನಿಜಗಲ್ ನೆಲಮಂಗಲ) ಸಂಯೋಜನೆಯನ್ನು ನವೀಕರಿಸಿಲ್ಲ. ಇದರಿಂದ ಈ ಕಾಲೇಜಿಗೆ ಬರಲು ಇಚ್ಛಿಸಿರುವ ವಿದ್ಯಾರ್ಥಿಗಳು ಹಾಗೂ ಆ ಕಾಲೇಜುಗಳ ಆಸುಪಾಸಿನಲ್ಲಿ ವಿದ್ಯಾರ್ಥಿಗಳಿಗೆ ಬೇಸರ ಉಂಟಾಗಿದೆ.

ಸೆಂಟ್ರಲ್‌ ಕಾಲೇಜು ಬಿಡದೇ ಬೆಂಗಳೂರು ವಿಶ್ವವಿದ್ಯಾಲಯ ಹಠಸೆಂಟ್ರಲ್‌ ಕಾಲೇಜು ಬಿಡದೇ ಬೆಂಗಳೂರು ವಿಶ್ವವಿದ್ಯಾಲಯ ಹಠ

ಈ ಶೈಕ್ಷಣಿಕ ವರ್ಷಗಳದಲ್ಲಿ ಆ ಕಾಲೇಜುಗಳಲ್ಲಿಯೇ ದಾಖಲಾತಿ ಪಡೆಯಬೇಕು ಎಂದುಕೊಂಡಿದ್ದ ವಿದ್ಯಾರ್ಥಿಗಳಿಗೆ ನಿರಾಸೆ ಉಂಟಾಗಿದೆ. ಒಂದು ವೇಳೆ ಬಿ.ಇಡಿ ಕೋರ್ಸ್ ಗಳಿಗೆ ಪ್ರವೇಶ ಪಡೆದರೆ ಅದಕ್ಕೆ ವಿಶ್ವವಿದ್ಯಾಲಯ ಜವಾಬ್ದಾರಿಯಲ್ಲ ಎಂದು ಸ್ಪಷ್ಟಪಡಿಸಿದೆ.

BU cancels three B.ED college affiliation of recognition

ಬೆಂವಿವಿ ಸಿಬ್ಬಂದಿ ಚೆಕ್ಕರ್‌ ಹೊಡೆಯುವಂತಿಲ್ಲ: ಬಯೋಮೆಟ್ರಿಕ್‌ ಬಂತಲ್ಲ ಬೆಂವಿವಿ ಸಿಬ್ಬಂದಿ ಚೆಕ್ಕರ್‌ ಹೊಡೆಯುವಂತಿಲ್ಲ: ಬಯೋಮೆಟ್ರಿಕ್‌ ಬಂತಲ್ಲ

ಕೆಲವೊಮ್ಮೆ ಮಾನ್ಯತೆ ರದ್ದು ಮಾಡಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಾರೆ ಕಾಲೇಜಿನ ಆಡಲಿತ ಮಂಡಳಿಯು ಈ ವಿಚಾರಗಳನ್ನು ವಿದ್ಯಾರ್ಥಿಗಳ ಗಮನಕ್ಕೆ ತಂದಿರುವುದಿಲ್ಲ ವಿದ್ಯಾರ್ಥಿಗಳು ಮೋಸಹೋಗುತ್ತಾರೆ, ಜತೆಗೆ ಅವರ ಕೋರ್ಸ್ ಕೂಡ ವ್ಯರ್ಥವಾಗುತ್ತದೆ ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಣೆ ಹೊರಡಿಸಿದೆ.

English summary
Bangalore university has canceled the affiliation of recognition of three B.Ed colleges and appealed students not to take admissions in these colleges hence forth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X