ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂವಿವಿ: ಎಂಜಿನಿಯರಿಂಗ್ ಪರೀಕ್ಷೆ ಮುಗಿದು 2 ದಿನದಲ್ಲೇ ರಿಸಲ್ಟ್

By Nayana
|
Google Oneindia Kannada News

ಬೆಂಗಳೂರು, ಜು.5: ಬೆಂಗಳೂರು ವಿಶ್ವವಿದ್ಯಾಲಯವು ಇದೀಗ ಮತ್ತೆ ಸುದ್ದಿಯಲ್ಲಿದೆ, ಕೆಟ್ಟ ಸುದ್ದಿಯೇನಲ್ಲ ಒಳ್ಳೆಯ ಸುದ್ದಿಯೇ. ಇತ್ತೀಚೆಗೆ ಕೇವಲ ಮೂರು ಗಂಟೆಯ ಅವಧಿಯಲ್ಲಿ ಫಲಿತಾಂಶ ನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿತ್ತು.

ಇದೀಗ ಎಲೆಕ್ಟ್ರಾನಿಕ್ಸ್‌ ಅಂಡ್ ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌ ಪರೀಕ್ಷೆ ಮುಗಿದು 2 ದಿನಗಳಲಲ್ಇ ಹಾಗೂ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಪರೀಕ್ಷೆ ಮುಗಿದ ಮೂರು ದಿನಗಳ ಒಳಗೆ ಫಲಿತಾಂಶ ನೀಡುವ ಮೂಲಕ ಎಲ್ಲರಲ್ಲಿ ಆಶ್ಚರ್ಯ ಮೂಡುವಂತೆ ಮಾಡಿದೆ.

ಪರೀಕ್ಷೆ ಮುಗಿಸಿ ಮನೆಗೆ ತೆರಳುವ ಒಳಗೆ ರಿಸಲ್ಟ್ ! ಪರೀಕ್ಷೆ ಮುಗಿಸಿ ಮನೆಗೆ ತೆರಳುವ ಒಳಗೆ ರಿಸಲ್ಟ್ !

ಈ ಮೊದಲು ಬೆಂಗಳೂರು ವಿಶ್ವವಿದ್ಯಾಲಯವು ಫಲಿತಾಂಶವನ್ನು ತಡವಾಗಿ ಪ್ರಕಟಿಸುತ್ತಿತ್ತು ಇದರಿಂದ ಹಲವು ಟೀಕೆಗೆ ಗುರುಯಾಗಿದ್ದು, ಇದೀಗ ಉಳಿದೆಲ್ಲಾ ವಿಶ್ವವಿದ್ಯಾಲಯಗಳಿಗಿಂತ ಬಹುಬೇಗ ಫಲಿತಾಂಶ ನೀಡಿದ ಕಾರಣ ಎಲ್ಲರು ಹುಬ್ಬೇರಿಸುವಂತಾಗಿದೆ.

BU announces BE results within 2 days of examination

ಸೋಮವಾರ ಎಲೆಕ್ಟ್ರಾನಿಕ್ಸ್‌ ಅಂಡ್ ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ 7 ಮತ್ತು 8 ನೇ ಸೆಮಿಸ್ಟರ್‌ ಪರೀಕ್ಷೆಗಳು ನಡೆದಿತ್ತು. 2 ದಿನಗಳ ಒಳಗೆ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್‌ ಉತ್ತರ ಪತ್ರಿಕೆಗಳನ್ನು ಮತ್ತು ಮೂರು ದಿನಗಳ ಒಳಗೆ ಕಂಪ್ಯೂಟರ್‌ ಸೈನ್ಸ್‌ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಬುಧವಾರ ಫಲಿತಾಂಶ ಪ್ರಕಟಿಸಿದೆ.

ಜು.2ರ ಸೋಮವಾರ ಸಿವಿಲ್‌ ಎಂಜಿನಿಯರಿಂಗ್‌ನ 7 ಮತ್ತು 8ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಪೂರ್ಣಗೊಳಿಸಿದ ಮೂರು ಗಂಟೆಯೊಳಗೆ ಫಲಿತಾಂಶ ನೀಡುವಲ್ಲಿ ವಿಶ್ವವಿದ್ಯಾಲಯ ಯಶಸ್ವಿಯಾಗಿತ್ತು.

English summary
Bengaluru university, which had achieved a distinction by announcing of 7 and 8 semester.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X