ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಟಿವಿ ಸಮೀಕ್ಷೆ: ಫಲಿತಾಂಶ ನಿರ್ಧರಿಸುವ ಪ್ರಶ್ನೆಗಳಿಗೆ ಜನರ ಉತ್ತರ

By Manjunatha
|
Google Oneindia Kannada News

ಬೆಂಗಳೂರು, ಮೇ 09: ಕನ್ನಡದ ಸುದ್ದಿ ವಾಹಿನಿ ಬಿಟಿವಿ ಯು ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಕುರಿತು ಜನಾಭಿಪ್ರಾಯ ಸಂಗ್ರಹಿಸಿದ್ದು, ಮರದಾರರಿಗೆ ಹಲವು ಪ್ರಶ್ನೆಗಳನ್ನು ಮಾಡಿ ಉತ್ತರ ಪಡೆದಿದ್ದಾರೆ.

ಬಿಟಿವಿ ಕೇಳಿದ ಪ್ರಶ್ನೆಗಳು ಮತ್ತು ಅದಕ್ಕೆ ಮತದಾರರು ನೀಡಿದ ಉತ್ತರಗಳು ಇಲ್ಲಿವೆ ನೋಡಿ...
ರಾಜ್ಯದಲ್ಲಿ ಈ ಬಾರಿ ಯಾವ ಸರ್ಕಾರ ಅಧಿಕಾರಕ್ಕೆ ಬಂದರೆ ಎಂಬ ಅತಿ ಮುಖ್ಯ ಪ್ರಶ್ನೆಗೆ ಶೇಕಡಾ 33% ಮತದಾರರು ಕಾಂಗ್ರೆಸ್‌ ಅಧಿಕಾರಕ್ಕೆ ಒಳ್ಳೆಯದು ಎಂದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತಮ ಎಂದು 30% ಮಂದಿ ಅಭಿಪ್ರಾಯಪಟ್ಟರೆ ಜೆಡಿಎಸ್‌ ಅಧಿಕಾರಕ್ಕೆ ಬರಲೆಂದು 20% ಜನ ಆಶಿಸಿದ್ದಾರೆ.

ಪಬ್ಲಿಕ್ ಟಿವಿ ಸಮೀಕ್ಷೆ: ರಾಜ್ಯದ ಭವಿಷ್ಯ ನಿರ್ಧರಿಸಲಿರುವ ಆ 22 ಪ್ರಶ್ನೆಗಳುಪಬ್ಲಿಕ್ ಟಿವಿ ಸಮೀಕ್ಷೆ: ರಾಜ್ಯದ ಭವಿಷ್ಯ ನಿರ್ಧರಿಸಲಿರುವ ಆ 22 ಪ್ರಶ್ನೆಗಳು

ಚುನಾವಣಾ ಸಮಯದಲ್ಲಿ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆ ದಾಳಿಗಳು ರಾಜಕೀಯ ಪ್ರೇರಿತವಾ? ಎಂಬ ಪ್ರಶ್ನೆಗೆ ಬಹುತೇಕ ಏಕಪಕ್ಷೀಯ ಉತ್ತರವೇ ದೊರೆತಿದೆ. ಹೌದು ಈ ದಾಳಿಗಳು ರಾಜಕೀಯ ಪ್ರೇರಿತ ಎಂದು 63% ಮಂದಿ ಅಭಿಪ್ರಾಯಪಟ್ಟಿದ್ದಾರೆ. ಇಲ್ಲ ಅದು ರಾಜಕೀಯ ಪ್ರೇರಿಯವಲ್ಲ ಎಂದು 35% ಜನ ಹೇಳಿದ್ದರೆ, ಏನೂ ಹೇಳಲಾರೆವೂ ಎಂದಿರುವವರು 28% ಜನ.

ನರೇಂದ್ರ ಮೋದಿ ಭಾಷಣ ವರ್ಕ್‌ ಆಗುತ್ತಾ

ನರೇಂದ್ರ ಮೋದಿ ಭಾಷಣ ವರ್ಕ್‌ ಆಗುತ್ತಾ

ನರೇಂದ್ರ ಮೋದಿ ಭಾಷಣಗಳು ಮತಗಳಾಗಿ ಪರಿವರ್ತನೆ ಆಗುತ್ತವೆಯಾ? ಎಂಬ ಬಹುಮುಖ್ಯ ಪ್ರಶ್ನೆಗೆ ಶೇ 56% ಮತದಾರರು ಹೌದು ಎಂಬ ಉತ್ತರ ನೀಡಿದ್ದಾರೆ. 36% ಜನ ಇಲ್ಲ ಮೋದಿ ಭಾಷಣ ಬೋರ್ಗಲ್ಲ ಮೇಲೆ ಮಳೆಯಷ್ಟೆ ಎಂದು ಅಭಿಪ್ರಾಯಪಟ್ಟಿದ್ದಾರೆ. 20% ಜನ ಏನೂ ಹೇಳಿಲ್ಲ.

'ಜನ್ ಕಿ ಬಾತ್' ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ, ಬಿಜೆಪಿಗೆ ಮೇಲುಗೈ'ಜನ್ ಕಿ ಬಾತ್' ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ, ಬಿಜೆಪಿಗೆ ಮೇಲುಗೈ

ರಾಜ್ಯ ಬಿಜೆಪಿ ನಾಯಕರು ಬೊಂಬೆಗಳಾ?

ರಾಜ್ಯ ಬಿಜೆಪಿ ನಾಯಕರು ಬೊಂಬೆಗಳಾ?

ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರನ್ನು ನಿರ್ಲಕ್ಷಿಸಿದ್ದಾರಾ? ಎಂಬ ಪ್ರಶ್ನೆಗೆ ಹೌದು ಎಂದವರೇ ಹೆಚ್ಚು. ಶೇ 63% ಜನ ರಾಷ್ಟ್ರೀಯ ಬಿಜೆಪಿ ನಾಯಕರು ರಾಜ್ಯ ಬಿಜೆಪಿ ನಾಯಕರನ್ನು ನಿರ್ಲಕ್ಷಿಸಿದ್ದಾರೆ ಎಂದಿದ್ದಾರೆ. ಶೇ 31% ಮತದಾರರು ಹಾಗೇನೂ ಇಲ್ಲ ಎಂದಿದ್ದಾರೆ.

ಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?ಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಜನಾರ್ದನ ರೆಡ್ಡಿ ಬಿಜೆಪಿಗೆ ಮಾರಕವಾ?

ಜನಾರ್ದನ ರೆಡ್ಡಿ ಬಿಜೆಪಿಗೆ ಮಾರಕವಾ?

ಬಿಜೆಪಿ ಪರ ಗಣಿ ಹಗರಣ ಆರೋಪಿ ಜನಾರ್ಧನ ರೆಡ್ಡಿ ಕಾಣಿಸಿಕೊಂಡಿದ್ದ ಆ ಪಕ್ಷಕ್ಕೆ ಸಮಸ್ಯೆ ಆಗುತ್ತಾ? ಎಂಬ ಪ್ರಶ್ನೆಗೆ ಹೌದು ಎಂದಿದ್ದಾರೆ ಹೆಚ್ಚಿನ ಜನ. ರೆಡ್ಡಿ ಯಿಂದ ಬಿಜೆಪಿಗೆ ತೊಂದರೆ ಎಂದವರ 75%. ತೊಂದರೆ ಏನೂ ಆಗದು ಎಂದು 19% ಹೇಳಿದ್ದಾರೆ. ಹೇಳಲಾಗದು ಎಂದು 6% ಜನ ಹೇಳಿದ್ದಾರೆ.

ಸಿಎಂ ನಾನೇ ಎಂದದ್ದು ಸಿದ್ದು ತಪ್ಪಾ?

ಸಿಎಂ ನಾನೇ ಎಂದದ್ದು ಸಿದ್ದು ತಪ್ಪಾ?

ಬಿಟಿವಿಯು ಇನ್ನೂ ಹಲವು ಪ್ರಶ್ನೆಗಳನ್ನು ಕೇಳಿದೆ. ಸಿಎಂ ನಾನೇ ಎಂದು ಸಿದ್ದರಾಮಯ್ಯ ಹೇಳಿರುವುದು ದಲಿತರನ್ನು ಕೆರಳಿಸಿದೆಯಾ? ಎಂಬ ಪ್ರಶ್ನೆಗೆ ಹೌದು ಎಂದಿದ್ದಾರೆ ಬಹುಪಾಲು ಮತದಾರರು. 57% ಮತದಾರರು ಹೌದು ಎಂದಿದ್ದರೆ 38% ಜನ ಇಲ್ಲ ಎಂದಿದ್ದಾರೆ. 8%

ಮುಂದಿನ ಮುಖ್ಯಮಂತ್ರಿ ಯಾರು?

ಮುಂದಿನ ಮುಖ್ಯಮಂತ್ರಿ ಯಾರು?

ಮುಂದಿನ ಮುಖ್ಯಮಂತ್ರಿ ಯಾರಾಗಬೇಕು? ಎಂಬ ಅತ್ಯಂತ ಮಹತ್ವದ ಪ್ರಶ್ನೆಗೆ ಸಮೀಕ್ಷೆ ಪ್ರಕಾರ ಜನರ ಆಯ್ಕೆ ಕುಮಾರಸ್ವಾಮಿ. ಎಚ್‌ಡಿಕೆ ನಮ್ಮ ಸಿಎಂ ಆಗಲಿ ಎಂದು 38% ಜನ ಹೇಳಿದ್ದರೆ. ಯಡಿಯೂರಪ್ಪ ಅವರು ನಮ್ಮ ಸಿಎಂ ಆಗಲಿ ಎಂದು 31% ಜನ ಅಭಿಪ್ರಾಯಪಟ್ಟಿದ್ದಾರೆ. ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು 29% ಮತದಾರರು ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್-ಮೋದಿ ನಡುವೆ ಯಾರು ಸ್ಟ್ರಾಂಗ್?

ರಾಹುಲ್-ಮೋದಿ ನಡುವೆ ಯಾರು ಸ್ಟ್ರಾಂಗ್?

ಕಾಂಗ್ರೆಸ್‌ನ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನಡುವೆ ಯಾರು ಹೆಚ್ಚು ಸ್ಟ್ರಾಂಗ್ ಎಂಬ ಪ್ರಶ್ನೆಗೆ ಮೋದಿ ಅವರಿಗೆ ಹೆಚ್ಚು ವೋಟು ಬಿದ್ದಿದೆ. ಶೇ 58 ಮಂದಿ ಮೋದಿ ಅವರೇ ಶಕ್ತಿವಂತರು ಎಂದಿದ್ದಾರೆ ರಾಹುಲ್ ಗಾಂಧಿ ಯನ್ನು ಒಪ್ಪಿಕೊಂಡಿರುವ ಮಂದಿ 37% ಏನೂ ಹೇಳದ ಜನ 5%.

English summary
Kannada News Chanel Btv did opinion poll about Karnataka assembly elections 2018. they ask vote deciding questions and get answers from voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X