ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಥಳೀಯ ಸಂಸ್ಥೆಗಳಲ್ಲಿ ಸೋಲಿಗೆ ಮುಖಂಡರ ಕಾರಣ ಕೇಳಿದ ಯಡಿಯೂರಪ್ಪ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 4: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿರುವ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿಜೆಪಿ ಮುಖಂಡರ ಬಳಿ ಕಾರಣ ಕೇಳಿದ್ದಾರೆ. ಶೀಘ್ರವೇ ಈ ಕುರಿತು ಸಭೆ ನಡೆಸಲು ಉದ್ದೇಶಿಸಿದ್ದಾರೆ ಎನ್ನುವ ಮಾತುಗಳು ಉನ್ನತ ಮೂಲಗಳಿಂದ ಕೇಳಿಬಂದಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ತೀವ್ರ ಸೆಣೆಸಾಟ ನಡೆಸಿ ಅಂತಿಮವಾಗಿ ಬಿಜೆಪಿಗೆ ಎರಡನೇ ಸ್ಥಾನ ದೊರೆತಿದೆ. ಕಾಂಗ್ರೆಸ್‌ಗಿಂತಲೂ ಹೆಚ್ಚಿನ ಸಾಧನೆ ಮಾಡುವುದಾಗಿ ಬಿಜೆಪಿ ಇಟ್ಟುಕೊಂಡಿದ್ದ ಭರವಸೆ ಹುಸಿಯಾಗಿದೆ. ಆದರೆ ಮೊದಲು ತಾವಿದ್ದ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿಯಲು ಕಾರಣವೇನು ಎನ್ನುವ ಹುಡುಕಾಟದಲ್ಲಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ: ಯಾರು ಏನು ಹೇಳಿದರು? ಸ್ಥಳೀಯ ಸಂಸ್ಥೆಗಳ ಚುನಾವಣೆ: ಯಾರು ಏನು ಹೇಳಿದರು?

ಪಕ್ಷಗಳು ಎಷ್ಟು ವಾರ್ಡ್ ಗಳಿಂದ ಸ್ಪರ್ಧಿಸಿತ್ತು, ಎಲ್ಲೆಲ್ಲಿ ಗೆಲುವು ಸಾಧಿಸಿದೆ, ಎಲ್ಲೆಲ್ಲಿ ಸೋತಿದೆ, ಸೋಲು ಅನುಭವಿಸಿದ ಕಡೆಗಳಲ್ಲಿ ಕಾರಣವೇನೆಂದು ಆತ್ಮಾವಲೋಕನ ಮಾಡಲಿದ್ದಾರೆ. ಹಾಗಾಗಿ ಮತಗಳಿಕೆ ಕುರಿತು ನಾಯಕರಿಂದ ಮಾಹಿತಿ ನೀಡುವಂತೆ ಕೇಳಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಾಧ್ಯಮದವರ ಮುಂದೆ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಪಕ್ಷದ ಹಣಬಲದಿಂದ ಗೆಲುವು ಸಾಧಿಸಿದೆ. ಹಾಗಾಗಿ ನಮ್ಮ ನಿರೀಕ್ಷಿತ ಗುರಿಯನ್ನು ನಾವು ತಲುಪಲು ಸಾಧ್ಯವಾಗಿಲ್ಲ.

ಸ್ಥಳೀಯ ಚುನಾವಣೆ: ಸಮ್ಮಿಶ್ರ ಸರ್ಕಾರದ ಜಯ ಎಂದ ಸಚಿವ ಕಾಶೆಂಪೂರ್ ಸ್ಥಳೀಯ ಚುನಾವಣೆ: ಸಮ್ಮಿಶ್ರ ಸರ್ಕಾರದ ಜಯ ಎಂದ ಸಚಿವ ಕಾಶೆಂಪೂರ್

BSY seeks explanations from district units

ಈ ಚುನಾವಣೆ ಹಿನ್ನೆಡೆ ಎಂದು ಪರಿಗಣಿಸಲು ಸಾಧ್ಯವಿಲ್ಲ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಈಗಾದ ತಪ್ಪುಗಳೆಲ್ಲವನ್ನು ತಿದ್ದಿಕೊಂಡು ಲೋಕಸಭೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವ ಕುರಿತು ಚಿಂತನೆ ಮಾಡುತ್ತೇವೆ.

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ : 2013 v/s 2018ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ : 2013 v/s 2018

ಬಿಜೆಪಿ ನಾಯಕರು ಸಮವಾಗಿ ಸ್ಪರ್ಧೆ ಮಾಡಿದ್ದಾರೆ. ಆದರೆ ಸೋಲಿಗೆ ಕಾರಣವೇನೆಂದು ಕಂಡು ಹಿಡಿಯಬೇಕಾಗಿದೆ. ಆದರೆ ಸಮ್ಮಿಶ್ರ ಸರ್ಕಾರದ ಹಣಬಲ ಬಿಜೆಪಿಯ ಸೋಲಿಗೆ ಕಾರಣವಾಗಿರುವುದು ಸತ್ಯ ಎಂದು ಹೇಳಿದ್ದರು.

English summary
State Bjp president B.S.Yeddyurappa has asked explanations from district unit and senior leaders for the defeat in urban local bodies elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X