ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಸ್‌ವೈ ಆಡಿಯೋ: ಆಂತರಿಕ ತನಿಖಾ ಸಮಿತಿ ರಚನೆಯಲ್ಲಿ ವಿಳಂಬ ಏಕೆ?

|
Google Oneindia Kannada News

ಬೆಂಗಳೂರು, ನವೆಂಬರ್ 6: ಆಪರೇಷನ್ ಕಮಲ ಮಾಡಿದ್ದು ಹೌದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಅದಕ್ಕೊಂದು ಆಂತರಿಕ ತನಿಖಾ ಸಮಿತಿ ರಚಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ತನಿಖಾ ಸಮಿತಿ ರಚನೆಯಾಗಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಯಡಿಯೂರಪ್ಪ ಆಡಿಯೋ ವಿವಾದ; ಬಿಜೆಪಿಯ ಸ್ಪಷ್ಟನೆಗಳುಯಡಿಯೂರಪ್ಪ ಆಡಿಯೋ ವಿವಾದ; ಬಿಜೆಪಿಯ ಸ್ಪಷ್ಟನೆಗಳು

ಇದೀಗ ನಳಿನ್ ಕುಮಾರ್ ದೆಹಲಿ ಪ್ರವಾಸದಲ್ಲಿದ್ದು ಅಲ್ಲಿಂದ ಬಂದ ಬಳಿಕ ಸಮಿತಿ ರಚನೆಯಾಗಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.

ತನಿಖಾ ಸಮಿತಿ ವಿಳಂಬ ಏಕೆ?

ತನಿಖಾ ಸಮಿತಿ ವಿಳಂಬ ಏಕೆ?

ಒಂದೊಮ್ಮೆ ತನಿಖಾ ಸಮಿತಿ ರಚಿಸಿ ಅದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಈ ರೀತಿ ಹೇಳಿದ್ದು ಹೌದು ಎಂದು ಸಾಬೀತಾದರೆ, ವರದಿ ಬಂದರೆ ಅದರಿಂದ ಪಕ್ಷಕ್ಕೆ ಕೆಟ್ಟ ಹೆಸರು. ಹಾಗಾಗಿ ತನಿಖಾ ಸಮಿತಿ ರಚನೆ ವಿಳಂಬ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಭಾನುವಾರವೇ ಸಮಿತಿ ರಚನೆ ಎಂದು ಹೇಳಿದ್ರು

ಭಾನುವಾರವೇ ಸಮಿತಿ ರಚನೆ ಎಂದು ಹೇಳಿದ್ರು

ಕಳೆದ ಭಾನುವಾರವೇ ಸಮಿತಿ ರಚಿಸುವುದಾಗಿ ನಳಿನ್ ಕುಮಾರ್ ಕಟೀಲು ಹೇಳಿದ್ದರು. ಆದರೆ ಇನ್ನೂ ಎರಡು ದಿನಗಳ ಕಾಲ ಸಮಿತಿ ರಚನೆ ಅನುಮಾನವಾಗಿದೆ. ಕಟೀಲ್ ದೆಹಲಿಯಿಂದ ಬಂದ ಬಳಿಕವಷ್ಟೇ ಸಮಿತಿ ರಚನೆಯಾಗಲಿದೆ.

ನಳಿನ್ ಕುಮಾರ್ ಮಾಡಿದ ಜೋಕ್ ಹೇಳಿದ ಸಿದ್ದರಾಮಯ್ಯ!ನಳಿನ್ ಕುಮಾರ್ ಮಾಡಿದ ಜೋಕ್ ಹೇಳಿದ ಸಿದ್ದರಾಮಯ್ಯ!

ಯಡಿಯೂರಪ್ಪ ಆಡಿಯೋ ಪರಿಗಣಿಸುತ್ತೇವೆ

ಯಡಿಯೂರಪ್ಪ ಆಡಿಯೋ ಪರಿಗಣಿಸುತ್ತೇವೆ

ಸುಪ್ರೀಂ ಪೀಠ, ಸಿಡಿ ವಿಚಾರ ಬಿಟ್ಟು ಎಲ್ಲವನ್ನೂ ಕೇಳಿಯೇ ಆಗಿದೆ. ತೀರ್ಪು ಸಿದ್ದಗೊಳ್ಳುತ್ತಿರುವ ಹಂತದಲ್ಲಿ ಆಡಿಯೋ ಕುರಿತು ಹೊಸ ವಾದ ಬೇಡ. ತೀರ್ಪಿನಲ್ಲಿ ಸಿಡಿ ವಿಚಾರವನ್ನು ಪರಿಗಣಿಸುತ್ತೇವೆ ಎಂದಿದೆ.

ವಿಡಿಯೋದಿಂದ ಬೆಚ್ಚಿಬಿದ್ದ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆವಿಡಿಯೋದಿಂದ ಬೆಚ್ಚಿಬಿದ್ದ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ

ಏನಿದು ಆಪರೇಷನ್ ಕಮಲ ಆಡಿಯೋ

ಏನಿದು ಆಪರೇಷನ್ ಕಮಲ ಆಡಿಯೋ

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಆಪರೇಷನ್​ ಕಮಲದ ಉಸ್ತುವಾರಿಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಮತ್ತು ಕೇಂದ್ರ ಗೃಹಸಚಿವ ಅಮಿತ್​ ಶಾ ಅವರೇ ಹೊತ್ತಿದ್ದರು ಎಂದು ಮಾತನಾಡಿದ್ದರು ಎನ್ನಲಾಗಿತ್ತು. ಬಿಎಸ್ ಯಡಿಯೂರಪ್ಪ ಧ್ವನಿಯನ್ನೇ ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು. ಜತೆಗೆ ಕಾಂಗ್ರೆಸ್​ ರಾಜ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​ ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರು ಬಿಜೆಪಿಯ ವಿರುದ್ಧ ಈ ಆಡಿಯೋವನ್ನು ಅಸ್ತ್ರವಾಗಿ ಬಳಸಿದ್ದರು.

English summary
Chief minister BS Yediyurappa Operation Lotus Issue.Why Delay In Formation Of Internal Investigation Committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X