ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ತ ಚುನಾವಣೆ ಘೋಷಣೆ, ಇತ್ತ ಅನರ್ಹ ಶಾಸಕರೊಡನೆ BSY ಸಭೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21: ಚುನಾವಣಾ ಆಯೋಗ ಕರ್ನಾಟಕದ 15 ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕ ಘೋಷಿಸುತ್ತಿದ್ದಂತೆಯೇ, ಕರ್ನಾಟಕದ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ.

ಉಪಚುನಾವಣೆ ಘೋಷಣೆಯಾದ ವಿಧಾನಸಭೆ ಕ್ಷೇತ್ರಗಳ ಪಟ್ಟಿಉಪಚುನಾವಣೆ ಘೋಷಣೆಯಾದ ವಿಧಾನಸಭೆ ಕ್ಷೇತ್ರಗಳ ಪಟ್ಟಿ

ಹದಿನೇಳು ಅನರ್ಹ ಶಾಸಕರೊಡನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅರಣ್ಯ ಭವನದಲ್ಲಿ ತುರ್ತು ಸಭೆ ನಡೆಸಿದ್ದಾರೆ ಎಂಬ ವದಂತಿ ಹಬ್ಬಿದೆ.

ಚುನಾವಣಾ ಆಯೋಗದಿಂದ ಆಘಾತ: ಅನರ್ಹ ಶಾಸಕರ ಮುಂದಿನ ದಾರಿಗಳೇನು?ಚುನಾವಣಾ ಆಯೋಗದಿಂದ ಆಘಾತ: ಅನರ್ಹ ಶಾಸಕರ ಮುಂದಿನ ದಾರಿಗಳೇನು?

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹದಿನೇಳು ಅನರ್ಹ ಶಾಸಕರೂ ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ ಸಭೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಕಾನೂನಾತ್ಮಕ ಸಲಹೆಗಳಿಗಾಗಿ ಅಡ್ವೋಕೆಟ್ ಪ್ರಭುಲಿಂಗ ನಾವದಗಿ ಅವರನ್ನು ಯಡಿಯೂರಪ್ಪ ಸಭೆಗೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.

BS Yediyurappa meeting with 17 Disqualified MLAs from Karnataka

ಕರ್ನಾಟಕದ ಒಟ್ಟು ಹದಿನೇಳು ಕ್ಷೇತ್ರಗಳಾದ ಚಿಕ್ಕಬಳ್ಳಾಪುರ, ಮಹಾಲಕ್ಷ್ಮಿ ಲೇಔಟ್, ಹೊಸಕೋಟೆ , ಹುಣಸೂರು, ಗೋಕಾಕ, ಯಶವಂತಪುರ, ಅಥಣಿ, ಕಾಗವಾಡ, ಶಿವಾಜಿನಗರ, ಕೆ.ಆರ್.ಪೇಟೆ, ಕೆ.ಆರ್.ಪುರಂ, ಹಿರೇಕೆರೂರು, ರಾಣೆಬೆನ್ನೂರು, ವಿಜಯನಗರ, ಯಲ್ಲಾಪುರಗಳಲ್ಲಿ ಉಪಚುನಾವಣೆ ನಡೆಯಲಿದೆ. ಅಕ್ಟೋಬರ್ 21 ರಂದು ಮತದಾನ ನಡೆಯಲಿದ್ದು, ಫಲಿತಾಂಶ ಅಕ್ಟೋಬರ್ 24 ಕ್ಕೆ ಪ್ರಕಟವಾಗಲಿದೆ. ಸೆಪ್ಟೆಂಬರ್ 23 ಕ್ಕೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸೆಪ್ಟೆಂಬರ್ 30 ನಾಮಪತ್ರ ಸಲ್ಲಿಕೆ ಕೊನೆಯ ದಿನ ಆಗಿದೆ.

English summary
After Election Commission announced dates of election for 15 assembly constituencies of Karnataka, CM BS Yediyurappa holds meeting with 17 disqualified MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X