ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2020ರೊಳಗೆ ನಮ್ಮ ಮೆಟ್ರೋ ಮಾರ್ಗಗಳ ಕಾಮಗಾರಿ ಪೂರ್ಣ

|
Google Oneindia Kannada News

ಬೆಂಗಳೂರು, ಆಗಸ್ಟ್ 31 : ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಿ. ಎಂ. ಆರ್. ಸಿ. ಎಲ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕಾಮಗಾರಿ ನಡೆಯುತ್ತಿರುವ ಬಹುತೇಕ ಮಾರ್ಗಗಳು 2020 ರೊಳಗೆ ಸಂಚಾರಕ್ಕೆ ಮುಕ್ತವಾಗಲಿವೆ.

ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಯಡಿಯೂರಪ್ಪ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) 'ನಮ್ಮ ಮೆಟ್ರೋ' ಪ್ರಗತಿ ಪರಿಶೀಲನೆ ನಡೆಸಿದರು.

ನೇರಳೆ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಮಾಸ್ಟರ್ ಪ್ಲ್ಯಾನ್ನೇರಳೆ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಮಾಸ್ಟರ್ ಪ್ಲ್ಯಾನ್

ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಪಿ.ಬ್ರವಿಕುಮಾರ್, ಮುಖ್ಯ ಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀ ನಾರಾಯಣ್, ಬಿ. ಎಂ. ಆರ್. ಸಿ. ಎಲ್. ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಉಪಸ್ಥಿತರಿದ್ದರು.

ಕೆಂಪೇಗೌಡ ಏರ್‌ಪೋರ್ಟ್ ಮೆಟ್ರೋ ಮಾರ್ಗದಲ್ಲಿ ಹೊಸ ನಿಲ್ದಾಣಗಳುಕೆಂಪೇಗೌಡ ಏರ್‌ಪೋರ್ಟ್ ಮೆಟ್ರೋ ಮಾರ್ಗದಲ್ಲಿ ಹೊಸ ನಿಲ್ದಾಣಗಳು

ಜನರಿಗೆ ಸಹಕಾರಿಯಾಗಲು ನಮ್ಮ ಮೆಟ್ರೋ ಮತ್ತು ಬಸ್‌ಗಳಲ್ಲಿ ಉಪಯೋಗಿಸಬಹುದಾದ ಸಾಮಾನ್ಯ ಸಂಚಾರಿ ಕಾರ್ಡ್ ಪರಿಚಯಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ನಗರದಲ್ಲಿ ನಡೆಯುತ್ತಿರುವ 2ನೇ ಹಂತದ ಮೆಟ್ರೋ ಕಾಮಗಾರಿ ಬಗ್ಗೆ ವಿವರವಾದ ಚರ್ಚೆ ನಡೆಯಿತು.

ಮೆಟ್ರೋ ಸುರಂಗ ಕೊರೆಯುವುದಷ್ಟೇ ಅಲ್ಲ, ಕಟ್ಟಡಗಳ ಸುರಕ್ಷತೆಯೂ ಮುಖ್ಯಮೆಟ್ರೋ ಸುರಂಗ ಕೊರೆಯುವುದಷ್ಟೇ ಅಲ್ಲ, ಕಟ್ಟಡಗಳ ಸುರಕ್ಷತೆಯೂ ಮುಖ್ಯ

ಮೆಟ್ರೋದಲ್ಲಿ 4.5 ಲಕ್ಷ ಜನರ ಪ್ರಯಾಣ

ಮೆಟ್ರೋದಲ್ಲಿ 4.5 ಲಕ್ಷ ಜನರ ಪ್ರಯಾಣ

ಬೆಂಗಳೂರಿನ ವಾಹನ ದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ, ಸುಗಮ ಹಾಗೂ ತ್ವರಿತ ಸಂಚಾರಕ್ಕೆ ನಮ್ಮ ಮೆಟ್ರೋ ಮಹತ್ತರವಾದ ಕೊಡುಗೆ ನೀಡಿದೆ. peak hourನಲ್ಲಿ ಒಂದು ಮಾರ್ಗದಲ್ಲಿ 19500 ಪ್ರಯಾಣಿಕರು ಮೆಟ್ರೋ ಬಳಸುತ್ತಿದ್ದು, ಪ್ರತಿ ದಿನ ಸುಮಾರು 4.5 ಲಕ್ಷ ಜನ ಮೆಟ್ರೊ ಮೂಲಕ ಪ್ರಯಾಣಿಸುತ್ತಿದ್ದಾರೆ.

ನಮ್ಮ ಮೆಟ್ರೋ 2ನೇ ಹಂತ

ನಮ್ಮ ಮೆಟ್ರೋ 2ನೇ ಹಂತ

ಪ್ರಸ್ತುತ 72 ಕಿ.ಮೀ ಉದ್ದ ಹಾಗೂ 61 ನಿಲ್ದಾಣಗಳನ್ನು ಹೊಂದಿರುವ ಮೆಟ್ರೋ-2 ನೇ ಹಂತ ಅನುಷ್ಠಾನದ ವಿವಿಧ ಹಂತಗಳಲ್ಲಿದೆ. ಬಹುತೇಕ ಮಾರ್ಗಗಳು 2020 ರೊಳಗೆ ಸಂಚಾರಕ್ಕೆ ಮುಕ್ತವಾಗಲಿವೆ. ಸರ್ಕಾರ 2ನೇ ಹಂತ 'ಎ' ಅಡಿಯಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಕೆ.ಆರ್.ಪುರಂವರೆಗೆ 17 ಕಿ.ಮೀ. ಉದ್ದದ ಮೆಟ್ರೋ ಮಾರ್ಗವನ್ನು 5995 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿದೆ.

ಐಟಿ ಉದ್ಯೋಗಿಗಳಿಗೆ ಅನುಕೂಲ

ಐಟಿ ಉದ್ಯೋಗಿಗಳಿಗೆ ಅನುಕೂಲ

2ನೇ ಹಂತ 'ಬಿ' ಅಡಿಯಲ್ಲಿ ಕೆ.ಆರ್.ಪುರಂನಿಂದ ವಿಮಾನ ನಿಲ್ದಾಣದ ತನಕ 38 ಕಿ.ಮೀ. ಉದ್ದದ ಮೆಟ್ರೋ ಮಾರ್ಗವನ್ನು ರೂ. 10,584 ಕೋಟಿ ವೆಚ್ಚದಲ್ಲಿ ಕೈಗೊಂಡಿದೆ. ಈ ಎರಡು ಮಾರ್ಗಗಳ ವ್ಯಾಪ್ತಿಯಲ್ಲಿ ಬರುವ ಐಟಿ ಕಂಪನಿಗಳ ಉದ್ಯೋಗಿಗಳಿಗೆ ಇದರಿಂದ ಬಹಳ ಉಪಯೋಗವಾಗಲಿದೆ. ಜಂಟಿ ಉದ್ಯಮ ಮಾದರಿಯಡಿ ಕೇಂದ್ರ ಸರ್ಕಾರದಿಂದ ಅನುದಾನಕ್ಕೆ ಸಹ ಮನವಿ ಸಲ್ಲಿಸಲಾಗಿದೆ.

ನಮ್ಮ ಮೆಟ್ರೋ 3ನೇ ಹಂತ

ನಮ್ಮ ಮೆಟ್ರೋ 3ನೇ ಹಂತ

ಫೇಸ್-3 ರಲ್ಲಿ 86 ಕಿ.ಮೀ. ಉದ್ದದ 6 ಹೊಸ ಮೆಟ್ರೋ ಮಾರ್ಗ ನಿರ್ಮಿಸಲು ನಿರ್ಧರಿಸಿದ್ದು ಇದು ಹಂತ 1- ಮತ್ತು ಹಂತ-2 ನ್ನು ಸಂಪರ್ಕಿಸುವ ಉದ್ದೇಶವೂ ಇದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಮೆಟ್ರೋ ಮತ್ತು ಬಸ್‍ಗಳಲ್ಲಿ ಉಪಯೋಗಿಸಬಹುದಾದ ಸಾಮಾನ್ಯ ಸಂಚಾರಿ ಕಾರ್ಡ್‌ಅನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದೆ. ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ಬಿಎಂಟಿಸಿ ಬಸ್ ಸೇವೆಗಳನ್ನು ಕಲ್ಪಿಸಲಾಗುತ್ತದೆ.

ಕೋಚ್‌ಗಳಿಗೆ ಪರಿವರ್ತನೆ

ಕೋಚ್‌ಗಳಿಗೆ ಪರಿವರ್ತನೆ

ಈಗ ಇರುವ ಮೂರು ಕೋಚ್‌ಗಳನ್ನು ಹೊಂದಿರುವ 50 ರೈಲುಗಳನ್ನು, 6 ಕೋಚ್ ರೈಲುಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕ ಸೈಕಲ್ ಸೇವೆಯನ್ನು ಒದಗಿಸಲಾಗುವುದು. ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.

English summary
Karnataka Chief Minister B.S.Yediyurappa chaired Bangalore Metro Rail Corporation Limited (BMRCL) meeting. Under Phase 2 BMRCL is building a metro network of 72 km in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X