ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡಾಯ ಶಾಸಕರ ರಾಜೀನಾಮೆ: ರಾಜಭವನಕ್ಕೆ ಯಡಿಯೂರಪ್ಪ?

|
Google Oneindia Kannada News

Recommended Video

ಬಂಡಾಯ ಶಾಸಕರ ರಾಜೀನಾಮೆ: ರಾಜಭವನಕ್ಕೆ ಯಡಿಯೂರಪ್ಪ? | Oneindia Kannada

ಬೆಂಗಳೂರು, ಜುಲೈ 6: ಬಹುದಿನಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಕಂಡಿದ್ದ ಕನಸು ನನಸಾಗುವ ಸಮಯ ಬಂದಂತಿದೆ.

ನಾವು ಏನೂ ಮಾಡುವುದಿಲ್ಲ ಸರ್ಕಾರವನ್ನೂ ಕಾಂಗ್ರೆಸ್‌ ಶಾಸಕರೇ ಕೆಡವುತ್ತಾರೆ ಎಂಬುವ ಮಾತನ್ನೂ ಯಾವಾಗಲೂ ಆಡುತ್ತಿದ್ದ ಯಡಿಯೂರಪ್ಪ ಅವರ ಮಾತು ಸತ್ಯವಾಗುವಂತೆ ಗೋಚರಿಸುತ್ತಿದೆ. ಇನ್ನಾದರೂ ಯಡಿಯೂರಪ್ಪ ಮುಖದಲ್ಲಿ ನಗು ಮೂಡುತ್ತದೆಯೇ ಎಂದು ಕಾದು ನೋಡಬೇಕಿದೆ.

ಮೈತ್ರಿಯಲ್ಲಿ ಮತ್ತೆ ಬಂಡಾಯ: ಅಪ್ಪ-ಮಗಳು ಸೇರಿ ಒಟ್ಟು 13 ಶಾಸಕರ ರಾಜೀನಾಮೆ? ಮೈತ್ರಿಯಲ್ಲಿ ಮತ್ತೆ ಬಂಡಾಯ: ಅಪ್ಪ-ಮಗಳು ಸೇರಿ ಒಟ್ಟು 13 ಶಾಸಕರ ರಾಜೀನಾಮೆ?

ಕಾಂಗ್ರೆಸ್ ಜೆಡಿಎಸ್ ಸೇರಿ ಒಟ್ಟು 13 ಶಾಸಕರೂ ಸ್ಪೀಕರ್‌ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ನೀಡಿದ್ದು, ರಾಜ್ಯಪಾಲರನ್ನು ಭೇಟಿ ಮಾಡಲು ವಿಧಾನಸೌಧದಿಂದ ರಾಜಭವನದ ವರೆಗೆ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದಾರೆ. ಯಡಿಯೂರಪ್ಪ ಕೂಡ ರಾಜಭವನಕ್ಕೆ ತೆರಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

BS Yeddyurappa to meet Governor Soon

ಹಾಗಾದರೆ ನನಗೆ ಈ ರಾಜೀನಾಮೆಗೆ ಏನೂ ಸಂಭಂದವಿಲ್ಲ ಎಂದು ಹೇಳುತ್ತಲೇ ಒಂದೊಂದೇ ವಿಕೇಟ್ ಸೇರಿ ಒಟ್ಟು 14 ವಿಕೆಟ್ ಪತನಕ್ಕೆ ಇವರೇ ಕಾರಣಕರ್ತರಾದರೇ ಎನ್ನುವುದು ಕೂಡ ಪ್ರಶ್ನೆಯಾಗಿದೆ.

ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಎನ್ನಲಾಗುತ್ತಿದೆ. ಆದರೆ ಈ ರಾಜೀನಾಮೆಯನ್ನು ಡಿಕೆ ಶಿವಕುಮಾರ್ ತಳ್ಳಿ ಹಾಕಿದ್ದರು.

ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್, ಕೆಆರ್ ಪುರಂ ಶಾಸಕ ಭೈರತಿ ಬಸವರಾಜು, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಕೆಆರ್ ಪೇಟೆ ಶಾಸಕ ನಾರಾಯಣಗೌಡ, ಹುಣಸೂರು ಶಾಸಕ ಎಚ್ ವಿಶ್ವನಾಥ್, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವವರ ಪಟ್ಟಿಯಲ್ಲಿದ್ದಾರೆ ಎಂದು ವರದಿಯಾಗಿದೆ.

English summary
Reports says Congress jds mlas to meet governor soon, 13 mlas including two from jds are already resigned and they will meet governor. BS Yeddyurappa also going to Rajbhavan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X