ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ಪುನರ್ ಪ್ರವೇಶ, ಜನತೆಯಿಂದ ಆಕ್ರೋಶ

By Mahesh
|
Google Oneindia Kannada News

ಬೆಂಗಳೂರು, ಜ.9; ಬಿರುಗಾಳಿಯಂತೆ ಬಿಜೆಪಿಯಿಂದ ಹೊರ ನಡೆದಿದ್ದ ಯಡಿಯೂರಪ್ಪ ಕುಳಿರ್ಗಾಳಿ ಮೆಟ್ಟಿಸಿಕೊಂಡು ಸರಳವಾಗಿ ಮತ್ತೆ ಬಿಜೆಪಿ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಭ್ರಷ್ಟಾಚಾರಿ ಎಂಬ ಹಣೆಪಟ್ಟಿ ಹೊತ್ತು ಏಳು ರಾಶಿ ಶನಿಕಾಟ ಹೊಂದಿರುವಂತೆ ಊರುರು ಅಲೆದು ಕೆಜೆಪಿ ಬೆಳೆಸಲು ಹೋದ ಶಿಕಾರಿಪುರದ ಶಿಕಾರಿ ಖುದ್ದು ಬಿಜೆಪಿ ಕೇಸರಿ ಯೋಧರ ಮುಂದೆ ಮಂಡಿಯೂರಿದ್ದಾರೆ.

'ಈತ ಭ್ರಷ್ಟನಾಗಿದ್ದಾನೆ, ಪಕ್ಷದಿಂದ ಹೊರಗಿಡಿ ಯಾರೂ ಸಹವಾಸ ಮಾಡಬೇಡಿ' ಎಂದು ವಯೋವೃದ್ಧ, ರಾಜಕೀಯ ಅನುಭವಿ ಎಲ್ ಕೆ ಅಡ್ವಾಣಿ ಘರ್ಜಿಸಿದ್ದು ಈಗ ಇತಿಹಾಸ. ಭ್ರಷ್ಟಾಚಾರಿ ವಿರೋಧಿ ಸಂಸ್ಥೆ ಎಂದು ಹೇಳಿಕೊಳ್ಳುವ ಬಿಜೆಪಿ ಈಗ ಯಡಿಯೂರಪ್ಪ ಯಾವ ಈ ರೀತಿಯಿಂದ ಭ್ರಷ್ಟಾಚಾರ ಮುಕ್ತರಾಗಿದ್ದಾರೆ ಎಂಬುದನ್ನು ಹೇಳಬೇಕು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕೆಲವರಂತೂ ಅಯ್ಯೋ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಉಳಿಗಾಲವಿಲ್ಲ ಎಂದಿದ್ದರೆ, ಕಾಂಗ್ರೆಸ್ ಗೆ ಇದು ಪರೋಕ್ಷ ಬೆಂಬಲ ಎಂದು ಫರ್ಮಾನು ಹೊರಡಿಸಿದ್ದಾರೆ. ಹಲವರು ಯಡಿಯೂರಪ್ಪ ಅವರ ಮಹತ್ವದ ನಡೆಯನ್ನು ಖಂಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ #Yeddy ಟ್ರೆಂಡಿಂಗ್ ನಲ್ಲಿದ್ದು ಹರಿದಾಡುತ್ತಿರುವ ಟ್ವೀಟ್ ಗಳ ರಾಶಿಯಲ್ಲಿ ಕೆಲವನ್ನು ಹೆಕ್ಕಿ ಇಲ್ಲಿ ನೀಡಲಾಗಿದೆ ನೋಡಿ...

ಸರಳವಾಗಿ ಮತ್ತೆ ಬಿಜೆಪಿ ಅಂಗಳಕ್ಕೆ ಯಡಿಯೂರಪ್ಪ

ಸರಳವಾಗಿ ಮತ್ತೆ ಬಿಜೆಪಿ ಅಂಗಳಕ್ಕೆ ಯಡಿಯೂರಪ್ಪ

ಬಿರುಗಾಳಿಯಂತೆ ಬಿಜೆಪಿಯಿಂದ ಹೊರ ನಡೆದಿದ್ದ ಯಡಿಯೂರಪ್ಪ ಕುಳಿರ್ಗಾಳಿ ಮೆಟ್ಟಿಸಿಕೊಂಡು ಸರಳವಾಗಿ ಮತ್ತೆ ಬಿಜೆಪಿ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಮುಖ್ಯಮಂತ್ರಿಯಾಗಿ ಮೆರೆದ ಯಡಿಯೂರಪ್ಪ ಈಗ ಬಿಜೆಪಿಯ ಪ್ರಾಥಮಿಕ ಸದಸ್ಯ ಮಾತ್ರ

ಮಾಧ್ಯಮಗಳು ಯಡಿಯೂರಪ್ಪ ತೆಗಳುವುದೇ?

ಅಂದು ತೆಗಳಿದ ಮಾಧ್ಯಮಗಳು ಇಂದು ಯಡಿಯೂರಪ್ಪ ಸಹಿತ ಮೋದಿಯನ್ನು ತೆಗಳುವುದೇ?

ಅಕ್ರಮ ಗಣಿಗಾರಿಕೆ ನಿಷೇಧ ಹೇರಿದ ಮೊದಲ ಸಿಎಂ

ಅಕ್ರಮ ಗಣಿಗಾರಿಕೆ ನಿಷೇಧ ಹೇರಿದ ಮೊದಲ ಸಿಎಂ ಯಡಿಯೂರಪ್ಪ ನೆನಪಿರಲಿ ಎಂದು ಬಿಎಸ್ ವೈ ಪರ ಟ್ವೀಟ್

ಮೋದಿಗೆ ಎಎಪಿಗಿಂತ ಯಡಿಯೂರಪ್ಪ ಭಯವಿರಲಿ

ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಎಎಪಿಗಿಂತ ಯಡಿಯೂರಪ್ಪ ಭಯವಿರಲಿ

ಈ ದೇಶದಲ್ಲಿ ಭ್ರಷ್ಟಾಚಾರ ವಿರೋಧಿ ಎನ್ನುವುದೇ ಇಲ್ಲ

ಈ ದೇಶದಲ್ಲಿ ಭ್ರಷ್ಟಾಚಾರ ವಿರೋಧಿ ಪಕ್ಷ ಎನ್ನುವುದೇ ದೊಡ್ಡ ಡ್ರಾಮಾ

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಉಳಿಗಾಲವಿಲ್ಲ

ಅಯ್ಯೋ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಉಳಿಗಾಲವಿಲ್ಲ

ಬಿಜೆಪಿಗೆ ಸೇರಿಕೊಂಡಿರುವುದು ನಾಚಿಕೆಗೇಡು

ಬಿಜೆಪಿಯಿಂದ ಹೊರ ನಡೆದಿದ್ದ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಸೇರಿಕೊಂಡಿರುವುದು ನಾಚಿಕೆಗೇಡು

ಹೊಗಳಿಕೆ ತೆಗಳಿಕೆ ಎಲ್ಲವೂ ರಾಜಕೀಯದಾಟ

ಅನಂತ್ ಕುಮಾರ್, ಅಡ್ವಾಣಿ ಬೈದಿದ್ದ ಯಡಿಯೂರಪ್ಪ ಈಗ ಮೋದಿ ಪ್ರಧಾನಿಯಾಗುವುದು ನನ್ನ ಕನಸು ಎಂದಿದ್ದಾರೆ

English summary
Here are the Tweeple reaction to Yeddyurappa rejoining BJP. Former Karnataka Chief Minister B S Yeddyurappa today(Jan.9)formally rejoins BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X