ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ದೇಶದ ಮೊಟ್ಟಮೊದಲ ಸಂಪರ್ಕರಹಿತ ಮಾಲ್

|
Google Oneindia Kannada News

ಬೆಂಗಳೂರು, ಮಾರ್ಚ್ 2: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‍ಸಿಪಿಐ), ಐಸಿಐಸಿಐ ಬ್ಯಾಂಕ್ ಮತ್ತು ವೆಲೆಟ್ಸ್ ಸಹಯೋಗದಲ್ಲಿ ಬೆಂಗಳೂರಿನ ಬ್ರೂಕ್‍ಫೀಲ್ಡ್ ಮಾಲ್ ಅನ್ನು ದೇಶದ ಮೊಟ್ಟಮೊದಲ ಸಂಪರ್ಕರಹಿತ ಮಾಲ್ ಆಗಿ ಪರಿವರ್ತಿಸಿದೆ. ಬೆಂಗಳೂರಿನ ತೀರಾ ಆರಂಭಿಕ ಮಾಲ್‍ಗಳಲ್ಲೊಂದಾದ ಬ್ಯೂಕ್‍ಫೀಲ್ಡ್ ಮಾಲ್, ವೈವಿಧ್ಯಮಯ ಎಫ್ & ಬಿ ಆಯ್ಕೆಗಳು, ಮನೋರಂಜನಾ ಆಯ್ಕೆಗಳಾದ ಐನೋಕ್ಸ್ ಮಲ್ಟಿಪ್ಲೆಕ್ಸ್ ಸೌಲಭ್ಯ ಇಲ್ಲಿವೆ.

ಐಸಿಐಸಿಐ ಬ್ಯಾಂಕ್ ಎನ್‍ಪಿಸಿಐ ಪಾಲುದಾರಿಕೆಯ ಈ ವಿನೂತನ ಯೋಜನೆಗೆ ಆಯ್ಕೆ ಮಾಡಿಕೊಂಡ ಬ್ಯಾಂಕ್ ಆಗಿದೆ. ಇದರೊಂದಿಗೆ ಐಸಿಐಸಿಐ ಬ್ಯಾಂಕ್, ವಾಹನ ಸವಾರರ ಫಾಸ್ಟ್ಯಾಗ್ ಖಾತೆಯಿಂದ ಪಾರ್ಕಿಂಗ್ ಶುಲ್ಕವನ್ನು ಡೆಬಿಟ್ ಮಾಡಿ ಬಳಿಕ ಅದನ್ನು ಪಾಲುದಾರರ ಬ್ಯಾಂಕ್ ಖಾತೆಗೆ ಕ್ರೆಡಿಟ್ ಮಾಡುತ್ತದೆ. ರಾಷ್ಟ್ರಮಟ್ಟದಲ್ಲಿ ಮುಂಬೈ- ವಡೋದರ ಕಾರಿಡಾರ್ ನಲ್ಲಿ 2013ರಲ್ಲೇ ಫಾಸ್ಟ್ಯಾಗ್ ಸೇವೆಯನ್ನು ಮೊಟ್ಟಮೊದಲ ಬಾರಿಗೆ ಆರಂಭಿಸಲಾಗಿತ್ತು.

ಫೆ.15ರಿಂದ ಫಾಸ್‌ಟ್ಯಾಗ್ ಕಡ್ಡಾಯ, ಇಲ್ಲಾಂದ್ರೆ ದುಪ್ಪಟ್ಟು ದಂಡ ಫೆ.15ರಿಂದ ಫಾಸ್‌ಟ್ಯಾಗ್ ಕಡ್ಡಾಯ, ಇಲ್ಲಾಂದ್ರೆ ದುಪ್ಪಟ್ಟು ದಂಡ

ಈ ವಿನೂತನ ಯೋಜನೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಬ್ರೂಕ್‍ಫೀಲ್ಡ್ ಮಾಲ್‍ನ ನೀರಜ್ ದುಗ್ಗಲ್, "ಬ್ರೂಕ್‍ಫೀಲ್ಡ್ ಮಾಲ್‍ನಲ್ಲಿ ಸದಾ ಕಾರ್ಯಾಚರಣೆಗಳಲ್ಲಿ ಮತ್ತು ಸಂದರ್ಶಕ ಅನುಭವಗಳಲ್ಲಿ ಹೊಸ ಅನುಶೋಧನೆಗಳನ್ನು ತರುತ್ತಿರುವ ಹೆಮ್ಮೆ ನಮ್ಮದು. ವೆಲೆಟ್ಸ್ ಜತೆಗೆ ಕಾರ್ಯನಿರ್ವಹಿಸುವ ಮೂಲಕ ಎನ್‍ಇಟಿಸಿ ಫಾಸ್ಟ್ಯಾಗ್ ಚಾಲಿತವಾದ ಕಾಂಟ್ಯಾಕ್ಟ್ ಲೆಸ್ ಪಾರ್ಕಿಂಗ್ ಸೌಲಭ್ಯವು ನಮ್ಮ ಬ್ರೂಕ್‍ಫೀಲ್ಡ್ ಸಮುದಾಯಕ್ಕೆ ಸುರಕ್ಷಿತ ಮತ್ತು ಉತ್ತಮ ವಾಹನ ನಿಲುಗಡೆ ಅನುಭವವನ್ನು ಖಾತರಿಪಡಿಸುವಂಥದ್ದು" ಎಂದು ಹೇಳಿದರು.

ಸಂಪರ್ಕ ರಹಿತ ವಾಹನ ನಿಲುಗಡೆ ಸಲ್ಯೂಶನ್

ಸಂಪರ್ಕ ರಹಿತ ವಾಹನ ನಿಲುಗಡೆ ಸಲ್ಯೂಶನ್

ಎಲ್ಲ ಟೋಲ್ ಶುಲ್ಕ ಪಾವತಿಗಳಿಗೆ ಎನ್‍ಇಟಿಸಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಬಳಿಕ ಎನ್‍ಪಿಸಿಐ, ಇದೀಗ ದೇಶಾದ್ಯಂತ ಸಂಪರ್ಕ ರಹಿತ ವಾಹನ ನಿಲುಗಡೆ ಸಲ್ಯೂಶನ್ ವಿಸ್ತರಿಸಲು ಸಜ್ಜಾಗಿದೆ. ಈಗಾಗಲೇ ಮುಂಬೈ, ಬೆಂಗಳೂರು, ಚೆನ್ನೈ ಮತ್ತು ದೆಹಲಿಯ ಪ್ರಮುಖ ಮಾಲ್‍ಗಳು, ವಿಮಾನ ನಿಲ್ದಾಣಗಳು, ಖಾಸಗಿ ಪಾರ್ಕಿಂಗ್ ಲಾಟ್‍ಗಳ ಜತೆ ಮಾತುಕತೆ ಆರಂಭಿಸಿದ್ದು, ಎನ್‍ಇಟಿಸಿ ಫಾಸ್ಟ್ಯಾಗ್ ಚಾಲಿತ ಕಾಂಟ್ಯಾಕ್ಟ್ ಲೆಸ್ ವಾಹನ ನಿಲುಗಡೆ ಸಲ್ಯೂಶನ್‍ಗಳನ್ನು ಒದಗಿಸಲು ಮುಂದಾಗಿದೆ. ಇಂಥ ವಾಹನ ನಿಲುಗಡೆ ಯೋಜನೆಗಳಿಗೆ ಸಹಯೋಗ ನೀಡಲು ಹಲವು ಬ್ಯಾಂಕ್‍ಗಳಿಂದ ಕಂಪನಿಗೆ ಆಸಕ್ತಿಗಳು ವ್ಯಕ್ತವಾಗುತ್ತಿವೆ.

ಕಿಟಕಿಯನ್ನು ಕೆಳಗಿಳಿಸದೇ ಪಾವತಿಸಿ

ಕಿಟಕಿಯನ್ನು ಕೆಳಗಿಳಿಸದೇ ಪಾವತಿಸಿ

ಸಂಪರ್ಕ ರಹಿತ ವಾಹನ ನಿಲುಗಡೆ ಸೌಲಭ್ಯವು ಪ್ರಯಾಣಿಕರು ಹಾಗೂ ಸಂದರ್ಶಕರಿಗೆ ಪಾರ್ಕಿಂಗ್ ಶುಲ್ಕವನ್ನು, ಕಿಟಕಿಯನ್ನು ಕೆಳಗಿಳಿಸದೇ ಪಾವತಿಸಲು ಅನುವು ಮಾಡಿಕೊಡಲಿದೆ. ದೇಶಾದ್ಯಂತ ಪಾರ್ಕಿಂಗ್ ಲಾಟ್‍ಗಳಿಗೆ ಡಿಜಿಟಲ್ ಪಾವತಿ ಸಲ್ಯೂಶನ್‍ಗಳನ್ನು ಒದಗಿಸಬೇಕಾದರೆ ಎನ್‍ಇಟಿಸಿ ಫಾಸ್ಟ್ಯಾಗ್ ಮಾತ್ರವೇ ಶೇಖಡ 100ರಷ್ಟು ಸಂಪರ್ಕ ರಹಿತ ಪರಿಹಾರವನ್ನು ಒದಗಿಸಲು ಸಾಧ್ಯ. ಇದು ಎನ್‍ಇಟಿಸಿ ಫಾಸ್ಟ್ಯಾಗ್ ಸೊಲ್ಯೂಶನ್ ಅಳವಡಿಸಿಕೊಳ್ಳುವ ಮೂಲಕ ದೇಶಾದ್ಯಂತ ಎಲ್ಲ ಪಾರ್ಕಿಂಗ್ ಸೇವೆ ಒದಗಿಸುವವರಿಗೆ ಸುರಕ್ಷಿತ ಮತ್ತು ಸಂಪರ್ಕ ರಹಿತ ಪಾವತಿಯ ಸೌಲಭ್ಯವನ್ನು ಒದಗಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಪಾರ್ಕಿಂಗ್ ಪ್ಲಾಜಾಗಳಲ್ಲಿ ಅಳವಡಿಸಿಕೊಂಡ ಈ ಅಪ್ಲಿಕೇಶನ್‍ಗಳನ್ನು ಸಹವರ್ತಿ ಬ್ಯಾಂಕ್‍ಗಳು ಒದಗಿಸುವ ಎನ್‍ಇಟಿಸಿ ಫಾಸ್ಟ್ಯಾಗ್ ಎಪಿಐ ಮಾಡೆಲ್ ಜತೆ ಸುಲಭವಾಗಿ ಸಮನ್ವಯಗೊಳಿಸಲು ಅವಕಾಶವಿದ್ದು, ಈ ಮೂಲಕ ಪರಸ್ಪರ ಕಾರ್ಯಸಾಧ್ಯವಾದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಈ ಸಲ್ಯೂಶನ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಈ ಸಲ್ಯೂಶನ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಗ್ರಾಹಕರು ಯಾವುದೇ 29 ವಿತರಕ ಬ್ಯಾಂಕ್‍ಗಳಿಂದ ಎನ್‍ಇಟಿಸಿ ಫಾಸ್ಟ್ಯಾಗ್‍ಗಳನ್ನು ಖರೀದಿಸಬಹುದು. ಟ್ಯಾಗ್ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‍ಎಫ್‍ಐಡಿ) ತಂತ್ರಜ್ಞಾನವನ್ನು ಬಳಸಿಕೊಂಡಿದ್ದು, ಇದನ್ನು ವಾಹನದ ವಿಂಡ್‍ಸ್ಕ್ರೀನ್‍ನಲ್ಲಿ ಅಂಟಿಸಬೇಕು. ಎನ್‍ಇಟಿಸಿ ಫಾಸ್ಟ್ಯಾಗ್‍ಗಳನ್ನು ಪ್ರೀಪೆಯ್ಡ್ ಸಿಎಎಸ್‍ಎ ಖಾತೆ ಜತೆಗೆ ಸಂಪರ್ಕಿಸಬಹುದಾಗಿದೆ. ಹೀಗೆ ಖರೀದಿ ಮಾಡಿದ ಗ್ರಾಹಕರು ಯಾವುದೇ ಮಾನವ ಹಸ್ತಕ್ಷೇಪವಿಲ್ಲದೇ ಪಾರ್ಕಿಂಗ್ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ಪ್ರವೇಶದ್ವಾರದಲ್ಲಿ ಪಾರ್ಕಿಂಗ್ ಸ್ವೀಕೃತಿಯನ್ನು ಪಡೆಯಲು ಕಾಯುವುದು ಅಥವಾ ನಿರ್ಗಮನ ಬಿಂದುವಿನಲ್ಲಿ ನಗದು/ ಕ್ರೆಡಿಟ್‍ಕಾರ್ಡ್ ಪಾವತಿಗಾಗಿ ಕಾಯುವ ಅಗತ್ಯ ಇರುವುದಿಲ್ಲ. ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚ ಇರುವುದಿಲ್ಲ. ಗ್ರಾಹಕರು ಒಂದು ಬಾರಿ ಮಾತ್ರ ಟ್ಯಾಗ್ ಖರೀದಿಸಬೇಕಾಗುತ್ತದೆ ಹಾಗೂ ಪ್ರವೇಶ ಮತ್ತು ನಿರ್ಗಮನ ಬಿಂದುಗಳಲ್ಲಿ ಕಾಯುವ ಅಗತ್ಯತೆಯನ್ನು ಇಲ್ಲವಾಗಿಸುತ್ತದೆ.

Recommended Video

ಭಾರತೀಯರಿಲ್ಲದೆ ಪರ್ಸಿವರೆನ್ಸ್ ರೋವರ್ ನಿಯಂತ್ರಣ ಸಾಧ್ಯವಿಲ್ಲ | Oneindia Kannada
ಫಾಸ್ಟ್ಯಾಗ್ ಹೊಂದಿರುವವರಿಗೇ ಪ್ರತ್ಯೇಕ ಸರದಿ

ಫಾಸ್ಟ್ಯಾಗ್ ಹೊಂದಿರುವವರಿಗೇ ಪ್ರತ್ಯೇಕ ಸರದಿ

ವಿಶೇಷವಾಗಿ ಎನ್‍ಇಟಿಸಿ ಫಾಸ್ಟ್ಯಾಗ್ ಹೊಂದಿರುವವರಿಗೇ ಪ್ರತ್ಯೇಕ ಸರದಿಯ ವ್ಯವಸ್ಥೆ ಇದೆ. ಬಳಕೆದಾರರು ಈ ಲೇನ್ ಮೂಲಕ ಆಗಮಿಸಿದಾಗ, ಆಯಕಟ್ಟಿನ ಜಾಗದಲ್ಲಿ ಅಳವಡಿಸಿರುವ ಆರ್‍ಎಫ್‍ಐಡಿ ರೀಡರ್, ಟೈಮ್‍ಸ್ಟ್ಯಾಂಪ್‍ನೊಂದಿಗೆ ಟ್ಯಾಗ್ ಸೆರೆಹಿಡಿದುಕೊಂಡು, ಸ್ಥಳೀಯ ಡಾಟಾಬೇಸ್‍ನಲ್ಲಿ ವಿವರಗಳನ್ನು ದಾಸ್ತಾನು ಮಾಡುತ್ತದೆ. ವಾಹನ ನಿರ್ಗಮಿಸುವ ವೇಳೆ ಇದೇ ವಿವರಗನ್ನು ಬಳಸಿಕೊಂಡು, ಅನ್ವಯವಾಗುವ ಪಾರ್ಕಿಂಗ್ ಶುಲ್ಕವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸುತ್ತದೆ. ಈ ಮೂಲಕ ಗ್ರಾಹಕರು ಯಾವುದೇ ಕಾಯುವಿಕೆ ಸಮಯವಿಲ್ಲದೇ ಪಾರ್ಕಿಂಗ್ ಸ್ಥಳದಿಂದ ನಿರ್ಗಮಿಸಬಹುದಾಗಿದೆ. ಪ್ರತಿ ವಹಿವಾಟು ಪೂರ್ಣಗೊಂಡ ತಕ್ಷಣ, ಬಳಕೆದಾರರು ಕಡಿತವಾದ ಮೊತ್ತದ ಬಗ್ಗೆ ಎಸ್‍ಎಂಎಸ್ ಪಡೆಯುವರು.

English summary
National Payments Corporation of India (NPCI) in association with ICICI Bank and ValetEZ enables Brookefield Mall as India’s first Contactless Mall in Bengaluru making parking seamless and ready.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X