ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಫೋಸಿಸ್ ಸಹಕಾರದಲ್ಲಿ ಬ್ರಾಡ್ ವೇ ರಸ್ತೆಯ ಕೋವಿಡ್ ಆಸ್ಪತ್ರೆ ಉದ್ಘಾಟನೆ

|
Google Oneindia Kannada News

ಬೆಂಗಳೂರು, ಆಗಸ್ಟ್ 26: ನಾಲ್ಕು ತಿಂಗಳ ಪರಿಶ್ರಮದಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಇಲ್ಲದೆ ಕೋವಿಡ್ ರೋಗಿಗಳಿಗೆ ಸುಸಜ್ಜಿತ ಆಸ್ಪತ್ರೆ ಲಭ್ಯವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Recommended Video

Apple ಕಂಪನಿ ಸೇರಿಕೊಳ್ಳಲು VTU ವಿದ್ಯಾರ್ಥಿಗಳಿಗೆ ಆಹ್ವಾನ | Oneindia Kannada

ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿ ಬಿಬಿಎಂಪಿಯಿಂದ ನಿರ್ಮಾಣವಾದ ''ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ''ಯನ್ನು ಇಂದು(ಆಗಸ್ಟ್ 26) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಸತಿ ಸಚಿವ ವಿ.ಸೋಮಣ್ಣ ಉಪಸ್ಥಿತರಿದ್ದರು.

ಬ್ರಾಡ್ ವೇ ಆಸ್ಪತ್ರೆಗೆ ಇನ್ಫೋಸಿಸ್ ಮೂಲ ಸೌಕರ್ಯ, ಸುಧಾಕರ್ ಮೆಚ್ಚುಗೆ ಬ್ರಾಡ್ ವೇ ಆಸ್ಪತ್ರೆಗೆ ಇನ್ಫೋಸಿಸ್ ಮೂಲ ಸೌಕರ್ಯ, ಸುಧಾಕರ್ ಮೆಚ್ಚುಗೆ

"ಬಿಬಿಎಂಪಿ ದಕ್ಷಿಣ ವಲಯದಲ್ಲಿ ಅಧಿಕಾರಿಗಳು ಸೋಂಕು ಹರಡುವಿಕೆಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಅಲ್ಲಿನ ಜನರು ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸಬೇಕು" ಎಂದು ಸಚಿವರು ಮನವಿ ಮಾಡಿದರು.

ನಾಲ್ಕು ವರ್ಷಗಳಿಂದ ಖಾಲಿ ಇದ್ದ ಕಟ್ಟಡಕ್ಕೆ ಇನ್ಫಿ ಸ್ಪರ್ಶ

ನಾಲ್ಕು ವರ್ಷಗಳಿಂದ ಖಾಲಿ ಇದ್ದ ಕಟ್ಟಡಕ್ಕೆ ಇನ್ಫಿ ಸ್ಪರ್ಶ

ನಂತರ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, "ಬಿಬಿಎಂಪಿಯ ಕಟ್ಟಡ ನಾಲ್ಕು ವರ್ಷಗಳಿಂದ ಖಾಲಿ ಇತ್ತು. ಇಂತಹ ಸಂದರ್ಭದಲ್ಲಿ 20-25 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸುವ ಆಲೋಚನೆ ಬಂದಿತ್ತು. ಆದರೆ ಕೋವಿಡ್ ಸಂಕಷ್ಟವಿದ್ದ ಹಿನ್ನೆಲೆಯಲ್ಲಿ, ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರನ್ನು ಮನವಿ ಮಾಡಿದ್ದೆ. ಅವರು ತಕ್ಷಣ ಸ್ಪಂದಿಸಿ 11 ಕೋಟಿ ರೂ. ಮೌಲ್ಯದ ಉಪಕರಣಗಳನ್ನು ನೀಡಿದರು. ವಿಪ್ರೊ ಸಂಸ್ಥೆಯವರು ವೈದ್ಯ ಸಿಬ್ಬಂದಿಯನ್ನು ನಿಯೋಜಿಸಿದರು. ಈ ಸಂಸ್ಥೆಗಳ ನೆರವಿನಿಂದಾಗಿ ಸರ್ಕಾರದ ಮೇಲೆ ಹೊರೆ ಇಲ್ಲದೆ ಆಸ್ಪತ್ರೆ ನಿರ್ಮಾಣವಾಗಿದೆ. ಈ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಹೇಳಿದರು.

ಕರ್ನಾಟಕದ ಕೋವಿಡ್ ಪರಿಸ್ಥಿತಿಯಲ್ಲಿ ಸುಧಾರಣೆ

ಕರ್ನಾಟಕದ ಕೋವಿಡ್ ಪರಿಸ್ಥಿತಿಯಲ್ಲಿ ಸುಧಾರಣೆ

ಚರಕ ಆಸ್ಪತ್ರೆ: ಆಸ್ಪತ್ರೆಯಲ್ಲಿ ಪುರುಷರಿಗೆ 60, ಮಹಿಳೆಯರಿಗೆ 50 ಹಾಗೂ ಮಕ್ಕಳಿಗೆ 20 ಸೇರಿದಂತೆ ಒಟ್ಟು 130 ಹಾಸಿಗೆಗಳಿವೆ. 20 ಐಸಿಯು ಹಾಸಿಗೆ, 20 ವೆಂಟಿಲೇಟರ್ ಸೌಲಭ್ಯವಿದೆ.

ಕರ್ನಾಟಕದ ಕೋವಿಡ್ ಪರಿಸ್ಥಿತಿಯಲ್ಲಿ ಸುಧಾರಣೆ: ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದು, ಶೇ 1%ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿಗೆ ಐಸಿ ಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದ ಚೇತರಿಕೆ ಪ್ರಮಾಣ ಶೇ.70% ಇದ್ದು, ಮರಣ ಪ್ರಮಾಣ ಶೇ.1.69%ರಷ್ಟಿದೆ ಎಂದು ಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

 ಬೆಂಗಳೂರಿಗೆ 665 ಆಂಬ್ಯುಲೆನ್ಸ್: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಬೆಂಗಳೂರಿಗೆ 665 ಆಂಬ್ಯುಲೆನ್ಸ್: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಅನ್ ಲಾಕ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿ

ಅನ್ ಲಾಕ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿ

ಅನ್ ಲಾಕ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಎಲ್ಲ ರಾಜ್ಯ ಸರ್ಕಾರಗಳು ಪಾಲಿಸುತ್ತಿವೆ. ತಿಂಗಳಾಂತ್ಯದಲ್ಲಿ ಪ್ರಧಾನಿಗಳು ಸಭೆ ನಡೆಸಿ ಸೂಕ್ತ ಮಾರ್ಗಸೂಚಿ ನೀಡುವ ನಿರೀಕ್ಷೆ ಇದೆ.

ಸೋಂಕಿತರ ಸಂಖ್ಯೆ ಹೆಚ್ಚುವ ಬಗ್ಗೆ ಆತಂಕಗೊಳ್ಳಬಾರದು. ರಾಜ್ಯದಲ್ಲಿ ಶೇ.70 ರಷ್ಟು ಮಂದಿ ಗುಣಮುಖರಾಗಿದ್ದಾರೆ. ಮರಣ ಪ್ರಮಾಣ ಕಡಿಮೆಯಾಗಿದೆ. ಇದು ಸರ್ಕಾರದ ಸಾಧನೆ. ಕೋವಿಡ್ ಗೆ ಸಂಬಂಧಿಸಿದ ಯಾವುದೇ ಖರೀದಿ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.

ವೈದ್ಯರಿಗೆ ಸಚಿವ ಡಾ.ಕೆ.ಸುಧಾಕರ್ ಅಭಿನಂದನೆ

ವೈದ್ಯರಿಗೆ ಸಚಿವ ಡಾ.ಕೆ.ಸುಧಾಕರ್ ಅಭಿನಂದನೆ

ಶಿವಾಜಿನಗರದ ಎಚ್‍ಎಸ್‍ಐಎಸ್ ಘೋಷಾ ಆಸ್ಪತ್ರೆಯಲ್ಲಿ 17 ದಿನಗಳಲ್ಲಿ, ಕೋವಿಡ್ ಸೋಂಕಿತ 50 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಲಾಗಿದೆ. ಆಸ್ಪತ್ರೆಯ ವೈದ್ಯರಿಗೆ ಸಚಿವ ಡಾ.ಕೆ.ಸುಧಾಕರ್ ಅಭಿನಂದನೆ ಸಲ್ಲಿಸಿದ್ದಾರೆ.

ಬ್ರಾಡ್ ವೇ ಆಸ್ಪತ್ರೆ ಬಗ್ಗೆ ಮತ್ತೆ ಮಾತನಾಡಿ, ಕೊರೊನಾ ರೋಗಿಗಳಿಗಾಗಿ ಈ ಆಸ್ಪತ್ರೆ‌ ನಿರ್ಮಾಣವಾಗಿದ್ದು, ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಮೊದಲಾದ ಮೂಲಸೌಕರ್ಯ ಕಲ್ಪಿಸಲಾಗಿದೆ. ಜತೆಗೆ ಸಿಬ್ಬಂದಿ‌ ನಿಯೋಜನೆಯೂ ಮಾಡಲಾಗಿದೆ.

English summary
Broadway Covid hospital developed in collaboration with Infosys Foundation opens for public; will help people of East Bengaluru: Medical Education Minister Dr.K.Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X