ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಲಂಡನ್- ಬ್ರಿಟಿಷ್ ಏರ್‍ವೇಸ್‍ನ ಎ350 ವಿಮಾನ ವಿಶೇಷವೇನು?

|
Google Oneindia Kannada News

ಬೆಂಗಳೂರು ಜನವರಿ 10: ಅಂತಾರಾಷ್ಟ್ರೀಯ ವಿಮಾನಯಾನದಲ್ಲಿ ತನ್ನದೇ ಆದ ಖ್ಯಾತಿಯನ್ನು ಗಳಿಸಿರುವ ಬ್ರಿಟಿಷ್ ಏರ್‍ವೇಸ್ ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಲಂಡನ್‍ಗೆ ಬಹುನಿರೀಕ್ಷಿತ ಕ್ಲಬ್ ಸೂಟ್ ಒದಗಿಸುವ ಎ350 ವಿಮಾನದ ಸಂಚಾರವನ್ನು ಆರಂಭಿಸಿದೆ.

ಬ್ರಿಟಿಷ್ ಏರ್‍ವೇಸ್‍ನ ಏಷ್ಯಾ ಪೆಸಿಫಿಕ್‍ನ ಮಾರಾಟ ವಿಭಾಗದ ಮುಖ್ಯಸ್ಥ ಮೋರನ್ ಬರ್ಜರ್ ಅವರು ಈ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡಿ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ವಿಮಾನ ಯಾನ ಸಂಸ್ಥೆಯ ಪ್ರಗತಿ ಮತ್ತು ಬದ್ಧತೆ ಬಗ್ಗೆ ವಿವರಣೆ ನೀಡಿದರು.

ಕ್ಲಬ್ ಸೂಟ್ ಅನ್ನು ಒಳಗೊಂಡಿರುವ ಅತ್ಯಾಧುನಿಕ ಮತ್ತು ಹೊಸ ಬ್ರ್ಯಾಂಡ್‍ನ ಬ್ಯುಸಿನೆಸ್ ಕ್ಯಾಬಿನ್ ಒಳಗೊಂಡಿರುವ ವಿಮಾನ ಎನಿಸಿರುವ ಬ್ರಿಟಿಷ್ ಏರ್‍ವೇಸ್‍ನ ಈ ವಿಮಾನವನ್ನು ಸ್ವಾಗತಿಸಿದ ಮೊದಲ ವಿಮಾನನಿಲ್ದಾಣ ಎಂಬ ಹೆಗ್ಗಳಿಕೆಗೆ ಬೆಂಗಳೂರು ವಿಮಾನನಿಲ್ದಾಣ ಪಾತ್ರವಾಗಿದೆ.

ಬೆಂಗಳೂರಿನಿಂದ ಲಂಡನ್‌ಗೆ ನೇರ ವಿಮಾನ ಕಾರ್ಯಾಚರಣೆಬೆಂಗಳೂರಿನಿಂದ ಲಂಡನ್‌ಗೆ ನೇರ ವಿಮಾನ ಕಾರ್ಯಾಚರಣೆ

ಈ ಎ350 ವಿಮಾನಕ್ಕೆ ''ಹಷ್ಲಿನರ್'' ಎಂಬ ಹೆಸರನ್ನು ನಾಮಕರಣ ಮಾಡಲಾಗಿದ್ದು, ಹೆಚ್ಚು ಪರಿಸರಸ್ನೇಹಿಯಾಗಿದೆ. ಇಲ್ಲಿ ಅತ್ಯಂತ ಕಡಿಮೆ ಶಬ್ಧ ಮತ್ತು ಸಿಒ2 ಮಾಲಿನ್ಯವೂ ಕಡಿಮೆ ಇರುತ್ತದೆ. ಅಂದರೆ, ಶೇ.40 ರಷ್ಟು ಶಬ್ಧದ ಪ್ರಮಾಣ ಕಡಿಮೆ ಇದ್ದು, ಶೇ.25 ರಷ್ಟು ಇಂಧನ ಬಳಕೆ ಕಡಿಮೆ ಇರುತ್ತದೆ.

ಈ ವಿಮಾನದಲ್ಲಿ ಪ್ರತ್ಯೇಕ ಕೋಣೆ

ಈ ವಿಮಾನದಲ್ಲಿ ಪ್ರತ್ಯೇಕ ಕೋಣೆ

ಈ ವಿಮಾನದಲ್ಲಿ ಪ್ರತ್ಯೇಕ ಕೋಣೆ, ಅತ್ಯದ್ಭುತ ಖಾಸಗಿತನ ನೀಡುವ ಮತ್ತು 1-2-1 ಕಾನ್‍ಫಿಗರೇಶನ್‍ನ ಫ್ಲಾಟ್ ಬೆಡ್ ಸೀಟುಗಳನ್ನು ಹೊಂದಿದ್ದು, ಅತ್ಯಂತ ಲಕ್ಷುರಿತನವನ್ನು ನೀಡಲಿದೆ. ಸಾಮಾನ್ಯಕ್ಕಿಂತ ಶೇ.40 ರಷ್ಟು ಹೆಚ್ಚುವರಿ ಸ್ಟೋರೇಜ್‍ಗೆ ಅವಕಾಶವಿದ್ದು, ಯೂನಿಟ್ ಮತ್ತು ಮಿರರ್, ಹೈಸ್ಪೀಡ್ ವೈಫೈ ವ್ಯವಸ್ಥೆ ಇದೆ. ಇದಲ್ಲದೇ, 18.5 ಇಂಚಿನ ಫ್ಲೈಟ್ ಎಂಟರ್‍ಟೇನ್ಮೆಂಟ್ ಸ್ಕ್ರೀನ್‍ಗಳನ್ನೂ ಒಳಗೊಂಡಿದ್ದು ಪ್ರಯಾಣಿಕರ ಪ್ರಯಾಣದ ಅನುಭವವನ್ನು ಇಮ್ಮಡಿಗೊಳಿಸಲಿದೆ. ಇದರಲ್ಲಿ ಹೈ ಡೆಫಿನಿಶನ್ ಗೇಟ್ ಟು ಗೇಟ್ ಪ್ರೋಗ್ರಾಮಿಂಗ್ ಮತ್ತು ಪಿಸಿ/ಯುಎಸ್‍ಬಿ ಪವರ್ ಸೌಲಭ್ಯವೂ ಇದೆ. ಈ ಎಲ್ಲಾ ಸೌಲಭ್ಯಗಳನ್ನು ಈಗಿನ ಯುಗದ ಪ್ರಯಾಣಿಕರ ಅಭಿರುಚಿಗೆ ತಕ್ಕಂತೆ ಕಲ್ಪಿಸಲಾಗಿದೆ.

ಎ350 ವಿಮಾನಕ್ಕೆ ''ಹಷ್ಲಿನರ್'' ಎಂಬ ಹೆಸರು

ಎ350 ವಿಮಾನಕ್ಕೆ ''ಹಷ್ಲಿನರ್'' ಎಂಬ ಹೆಸರು

ಈ ಎ350 ವಿಮಾನಕ್ಕೆ ''ಹಷ್ಲಿನರ್'' ಎಂಬ ಹೆಸರನ್ನು ನಾಮಕರಣ ಮಾಡಲಾಗಿದ್ದು, ಹೆಚ್ಚು ಪರಿಸರಸ್ನೇಹಿಯಾಗಿದೆ. ಬ್ರಿಟಿಷ್ ಏರ್‍ವೇಸ್‍ನ ಏಷ್ಯಾ ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯದ ಮಾರಾಟ ವಿಭಾಗದ ಮುಖ್ಯಸ್ಥ ಮೋರನ್ ಬರ್ಜರ್ ಅವರು, ''ಬ್ರಿಟೀಷ್ ಏರ್‍ವೇಸ್‍ಗೆ ಭಾರತ ಅತ್ಯಂತ ಪ್ರಮುಖವಾದ ಮಾರುಕಟ್ಟೆಯಾಗಿದೆ. ಮುಂಬೈ ಹೊರತಾದ ಸ್ಥಳಗಳಿಂದ ನಾವು ಹೆಚ್ಚು ಹೆಚ್ಚು ವಿಮಾನ ಹಾರಾಟವನ್ನು ಮಾಡುತ್ತಿದ್ದೇವೆ. ಭಾರತೀಯ ಪ್ರಯಾಣಿಕರಿಗೆ ನಾವು ದೀರ್ಘಾವಧಿಯಿಂದಲೂ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಬೆಂಗಳೂರಿನಿಂದ ಹೊಸದಾದ ಎ350 ವಿಮಾನ ಹಾರಾಟವನ್ನು ಆರಂಭಿಸುವ ಮೂಲಕ ನಾವು ಭಾರತದ ಗ್ರಾಹಕರಿಗೆ ಅತ್ಯುತ್ತಮವಾದ ಪ್ರಯಾಣ ಅನುಭವವನ್ನು ನೀಡಲು ಬದ್ಧರಾಗಿದ್ದೇವೆ" ಎಂದು ತಿಳಿಸಿದರು.

ಭಾರತದಲ್ಲಿ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣ

ಭಾರತದಲ್ಲಿ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣ

''ಭಾರತದಲ್ಲಿ ಅತ್ಯಂತ ಬ್ಯುಸಿಯಾಗಿರುವ ವಿಮಾನನಿಲ್ದಾಣಗಳಲ್ಲಿ ಬೆಂಗಳೂರು ಒಂದಾಗಿದೆ. ಇದು ವಿಮಾನಯಾನದ ಹಬ್ ಆಗಿದ್ದು, ಹೊಸ ಕ್ಲಬ್ ಸೂಟ್ ಅನ್ನು ಒಳಗೊಂಡಿರುವ ಎ350 ವಿಮಾನವನ್ನು ಇಲ್ಲಿಂದಲೇ ಪರಿಚಯಿಸಲು ನಮಗೆ ಅತ್ಯಂತ ಸಂತಸವೆನಿಸುತ್ತಿದೆ. ಇದು ನಮ್ಮ ಪ್ರಸ್ತುತದ 6.5 ಬಿಲಿಯನ್ ಡಾಲರ್ ಹೂಡಿಕೆ ಕಾರ್ಯಕ್ರಮದ ಒಂದು ಭಾಗವಾಗಿದೆ. ನಾವು ಭಾರತದಲ್ಲಿ ಅತ್ಯುತ್ತಮವಾದ ಅಸ್ತಿತ್ವವನ್ನು ಹೊಂದಿದ್ದೇವೆ. ನಮ್ಮ ಗ್ರಾಹಕರಿಗೆ ತಡೆರಹಿತವಾದ ಸೇವೆಗಳು ಮತ್ತು ಪ್ರಯಾಣ ಅನುಭವವನ್ನು ನೀಡುವ ನಿಟ್ಟಿನಲ್ಲಿ ನಮ್ಮ ಹೂಡಿಕೆಯನ್ನು ಮತ್ತಷ್ಟು ಹೆಚ್ಚು ಮಾಡಲು ಯೋಜನೆಗಳನ್ನು ರೂಪಿಸುತ್ತಿದ್ದೇವೆ" ಎಂದು ಅವರು ತಿಳಿಸಿದರು.

ವಿಶ್ವದ ಅತ್ಯಂತ ಆಧುನಿಕ ವಿಮಾನ

ವಿಶ್ವದ ಅತ್ಯಂತ ಆಧುನಿಕ ವಿಮಾನ

ಈ ವಿಮಾನದ ಬಗ್ಗೆ ಮಾಹಿತಿ ನೀಡಿದ ಅವರು, "ಅತ್ಯಾಧುನಿಕತೆಯ ಹೊಸ ಹಂತಕ್ಕೆ ಈ ವಿಮಾನ ಕೊಂಡೊಯ್ಯಲಿದೆ. ಆರಾಮದಾಯಕ ಮತ್ತು ಖಾಸಗಿತನಕ್ಕೆ ಹೇಳಿ ಮಾಡಿಸಿದಂತಹ ವ್ಯವಸ್ಥೆ ಇದರಲ್ಲಿದೆ. ಈ ಕ್ಲಬ್ ಸೂಟ್‍ನ ಪ್ರತಿಯೊಂದು ಅನುಭವವೂ ಅತ್ಯದ್ಭುತವಾಗಿರುತ್ತದೆ. ಈ ಮೂಲಕ ಬ್ರಿಟಿಷ್ ಏರ್‍ವೇಸ್ ಗ್ರಾಹಕರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಪ್ರಯಾಣಿಕರು ಈ ಸೇವೆಯನ್ನು ಬಳಸಿಕೊಂಡು ಹೊಸ ಅನುಭವವನ್ನು ಪಡೆಯಲಿದ್ದಾರೆ ಎಂಬ ವಿಶ್ವಾಸ ನಮಗಿದೆ" ಎಂದರು.

ಈ ಎ350 ವಿಮಾನವನ್ನು ಅತ್ಯಂತ ಜಾಗರೂಕತೆಯಿಂದ ವಿನ್ಯಾಸಗೊಳಿಸಲಾಗಿದ್ದು, ಶಬ್ಧದ ಮಟ್ಟವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹೆಚ್ಚು ಎತ್ತರವಿರುವ ಕ್ಯಾಬಿನ್ ಮತ್ತು ಅತ್ಯಾಕರ್ಷಕವಾದ ಲೈಟಿಂಗ್ ವ್ಯವಸ್ಥೆ ಇದ್ದು ಪ್ರಯಾಣಿಕರ ಪ್ರಯಾಣವನ್ನು ಮಧುರಗೊಳಿಸಲಿದೆ. ಹೆಚ್ಚಿನ ಮಟ್ಟದ ತಾಪಮಾನ ಇದ್ದರೂ ಗ್ರಾಹಕರಿಗೆ ಉತ್ತಮ ತಂಗಾಳಿಯ ವ್ಯವಸ್ಥೆ ಇದ್ದು, ಅವರಿಗೆ ತಾಪಮಾನದ ಅನುಭವವೇ ಆಗುವುದಿಲ್ಲ. ಈ ಮೂಲಕ ಆಹ್ಲಾದಕರ ವಾತಾವರಣದಲ್ಲಿ ಅವರು ಪ್ರಯಾಣಿಸಲಿದ್ದಾರೆ. ಈ ಎ350 ವಿಮಾನವು ವಿಶ್ವದ ಅತ್ಯಂತ ಆಧುನಿಕ ವಿಮಾನವೆಂಬ ಹೆಗ್ಗಳಿಕೆ ಹೊಂದಿದ್ದು, 97,000 lbs ನೊಂದಿಗೆ ದೊಡ್ಡ ಇಂಜಿನ್‍ನೊಂದಿಗೆ ಟೇಕಾಫ್ ಆಗಲಿದೆ.

ಹೊಚ್ಚ ಹೊಸ ಕ್ಲಬ್ ವರ್ಲ್ಡ್ ಕ್ಯಾಬಿನ್

ಹೊಚ್ಚ ಹೊಸ ಕ್ಲಬ್ ವರ್ಲ್ಡ್ ಕ್ಯಾಬಿನ್

ಈ ಹೊಚ್ಚ ಹೊಸ 56 ಆಸನಗಳನ್ನು ಒಳಗೊಂಡಿರುವ ಕ್ಲಬ್ ವರ್ಲ್ಡ್ ಕ್ಯಾಬಿನ್ ಅನ್ನು ಹೊಂದಿರುವ ಎ350 3 ವರ್ಗದ ಕ್ಯಾಬಿನ್‍ಗಳನ್ನು ಹೊಂದಿದೆ. ವರ್ಲ್ಡ್ ಟ್ರಾವೆಲ್ಲರ್ ಪ್ಲಸ್ (ಪ್ರೀಮಿಯಂ ಎಕಾನಮಿ) ಕ್ಯಾಬಿನ್ ಇದ್ದು, ಇದರಲ್ಲಿ ಪ್ಲಶ್ ಪಿಲ್ಲೋ ಮತ್ತು ಕ್ವಿಲ್ಟ್ಸ್, ಹೊಸ ಅಮೆನಿಟಿ ಕಿಟ್ ಮತ್ತು ಸುಧಾರಿತವಾದ ಡೈನಿಂಗ್ ವ್ಯವಸ್ಥೆ ಇರಲಿದೆ. ವಲ್ರ್ಡ್ ಟ್ರಾವೆಲ್ಲರ್ (ಎಕಾನಮಿ) ಕ್ಯಾಬಿನ್‍ನಲ್ಲಿ 219 ಸೀಟುಗಳಿರುತ್ತವೆ. ಗ್ರಾಹಕರು ಹೈಸ್ಪೀಡ್‍ನ ವೈಫೈಯಲ್ಲದೇ ತಮ್ಮ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಇಂಟರ್ನೆಟ್ ಬ್ರೌಸ್ ಮಾಡುವ ಅವಕಾಶವನ್ನು ಹೊಂದಲಿದ್ದಾರೆ.

6.5 ಬಿಲಿಯನ್ ಹೂಡಿಕೆಯ ಬ್ರಿಟಿಷ್ ಏರ್‍ವೇಸ್ ತನ್ನ ಕ್ಲಬ್ ವರ್ಲ್ಡ್, ವರ್ಲ್ಡ್ ಟ್ರಾವೆಲ್ಲರ್ ಪ್ಲಸ್ ಮತ್ತು ವರ್ಲ್ಡ್ ಟ್ರಾವೆಲ್ಲರ್ ಕ್ಯಾಬಿನ್‍ಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. Do&Co ನ ಕೇಟರಿಂಗ್‍ನ ಹೊಸ ರೆಸ್ಟೋರೆಂಟ್ ಸ್ಟೈಲ್, ಅತ್ಯುತ್ತಮ ಕಂಪನಿಯ ವೈಫೈ ವ್ಯವಸ್ಥೆ ಸೇರಿದಂತೆ ಮತ್ತಿತರೆ ಹಲವಾರು ಸೌಲಭ್ಯಗಳನ್ನು ಕಲ್ಪಿಸುತ್ತಿದೆ.

English summary
The A350 aircraft is special in the sense that it is the only plane of the British Airways in India, which is loaded with luxuries such as club suites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X