• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿ ನಕಲಿ, ಆರೋಪವೆಲ್ಲ ಸುಳ್ಳು: ಯಡಿಯೂರಪ್ಪ

|

ಬೆಂಗಳೂರು, ಮಾರ್ಚ್ 22: ಬಿಜೆಪಿ ಹೈಕಮಾಂಡ್‌ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಪ್ಪ ಕಾಣಿಕೆ ನೀಡುತ್ತಿದ್ದರು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಮಾಡಿರುವ ಆರೋಪವನ್ನು ಯಡಿಯೂರಪ್ಪ ಅವರು ಅಲ್ಲಗೆಳೆದಿದ್ದಾರೆ.

'ಕಪ್ಪ ನೀಡಿರುವ ವಿಚಾರವನ್ನು ಬಿಎಸ್ ಯಡಿಯೂರಪ್ಪ ಹಾಗೂ ದಿವಂಗತ ಸಂಸದ ಅನಂತ್ ಕುಮಾರ್ ಅವರು ಸಂಭಾಷಣೆ ನಡೆಸಿದ್ದು ದೃಢಪಟ್ಟಿದೆ. ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಡಿಯನ್ನು ಕಾಂಗ್ರೆಸ್ ಈ ಹಿಂದೆ ಕೂಡಾ ಬಿಡುಗಡೆ ಮಾಡಿತ್ತು. ಆದರೆ, ತನಿಖೆ ಪ್ರಗತಿ ಕಂಡಿಲ್ಲ, ಈ ಬಗ್ಗೆ ಲೋಕಪಾಲ ತನಿಖೆ ನಡೆಯಲಿದೆ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಕಪ್ಪ ಕಾಣಿಕೆ ಸಿಡಿ ಪ್ರಕರಣ, ಅನಂತ್- ಯಡಿಯೂರಪ್ಪಗೆ ಹಿನ್ನಡೆ

ಆದರೆ, ಕಾಂಗ್ರೆಸ್ ಇಂದು ಬಿಡುಗಡೆ ಮಾಡಿರುವ ಕೈ ಬರಹವುಳ್ಳ ಡೈರಿ ಹಾಗೂ ಅದರಲ್ಲಿರುವ ಹಸ್ತಾಕ್ಷರ ಎಲ್ಲವೂ ನಕಲಿ, ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಚುನಾವಣೆ ಸಂದರ್ಭದಲ್ಲಿ ಈ ರೀತಿ ಆರೋಪಗಳು ಮಾಡುವುದು ಕಾಂಗ್ರೆಸ್ಸಿನಿಂದ ನಿರೀಕ್ಷಿತ ಎಂದು ಯಡಿಯೂರಪ್ಪ ಹೇಳಿದರು.

ಹೈಕಮಾಂಡಿಗೆ ಕಪ್ಪ ಕೊಟ್ಟ ಯಡಿಯೂರಪ್ಪ ವಿರುದ್ಧ ಲೋಕಪಾಲ ತನಿಖೆಗೆ ಆಗ್ರಹ

ಕೇಂದ್ರ ಸಚಿವ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಸೇರಿದಂತೆ ವಿವಿಧ ನಾಯಕರಿಗೆ 1800 ಕೋಟಿ ರು ಗೂ ಅಧಿಕ ಮೊತ್ತವನ್ನು ಯಡಿಯೂರಪ್ಪ ಅವರು ನೀಡಿದ್ದಾರೆ ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಸುರ್ಜೆವಾಲ ಆಗ್ರಹಿಸಿದ್ದಾರೆ.

ಯಡಿಯೂರಪ್ಪ ಸಿಡಿಸಿದ ಬಾಂಬಿಗೆ ಪ್ರತಿಬಾಂಬ್

ಯಡಿಯೂರಪ್ಪ ಸಿಡಿಸಿದ ಬಾಂಬಿಗೆ ಪ್ರತಿಬಾಂಬ್

ಸಿದ್ದರಾಮಯ್ಯ ಅವರು, ಹೈಕಮಾಂಡ್ ಗೆ 1000 ಕೋಟಿ ರು. ನೀಡಿದ್ದಾರೆಂಬ ವಿಚಾರ ಎಂಎಲ್ಸಿ ಗೋವಿಂದರಾಜು ಡೈರಿಯಲ್ಲಿರುವುದಾಗಿ ಯಡಿಯೂರಪ್ಪ ಬಾಂಬ್ ಸಿಡಿಸಿದ್ದರು. ನಂತರ ಬಿಜೆಪಿ ಕಚೇರಿಯಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ನಡುವೆ ನಡೆದ ಸಂಭಾಷಣೆಯ ಸಿಡಿಯನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ್ದರು. ನಂತರ ಇಬ್ಬರು ನಾಯಕರ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆ, ಎಸಿಬಿ, ಸೈಬರ್ ಪೊಲೀಸರಿಗೆ ಕಾಂಗ್ರೆಸ್ ದೂರು ನೀಡಿತ್ತು. ಸದ್ಯ ಈ ಪ್ರಕರಣದ ವಿಚಾರಣೆ ಕೋರ್ಟಿನಲ್ಲಿದೆ

ಅಪ್ಪನ ಪರ ವಿಜಯೇಂದ್ರ ವಾದ

ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರು ಟ್ವೀಟ್ ಮಾಡಿ, ಕಾಂಗ್ರೆಸ್ ಬಿಡುಗಡೆ ಮಾಡಿರುವ ಸಿಡಿ ನಕಲಿ, ಆರೋಪಗಳೆಲ್ಲವೂ ಸುಳ್ಳು ಎಂದಿದ್ದಾರೆ.

ಕಾಂಗ್ರೆಸ್ಸಿಗರು ನಾಯಕರು ವೈಚಾರಿಕವಾಗಿ ದಿವಾಳಿ

ಕಾಂಗ್ರೆಸ್ಸಿಗರು ನಾಯಕರು ವೈಚಾರಿಕವಾಗಿ ದಿವಾಳಿ

* ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರು ವೈಚಾರಿಕವಾಗಿ ದಿವಾಳಿಯಾಗಿದ್ದಾರೆ.

* ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ಚರ್ಚಿಸಲು ಯಾವುದೇ ಅಭಿವೃದ್ಧಿಪರ ವಿಷಯಗಳಿಲ್ಲ.

* ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಜನಪ್ರಿಯತೆ ದಿನ ಕಳೆದಂತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ತೀವ್ರ ಹತಾಶೆಗೊಂಡಿದ್ದಾರೆ.

ದಾಖಲೆಗಳೆಲ್ಲವೂ ನಕಲಿ ಎಂದು ಸಾಬೀತಾಗಿದೆ

ದಾಖಲೆಗಳೆಲ್ಲವೂ ನಕಲಿ ಎಂದು ಸಾಬೀತಾಗಿದೆ

* 2019ರ ಚುನಾವಣೆಯಲ್ಲಿ ಸೋಲು ತಮಗೆ ಕಟ್ಟಿಟ್ಟ ಬುತ್ತಿ ಎನ್ನುವುದು ಕಾಂಗ್ರೆಸ್ ನಾಯಕರಿಗೆ ಸ್ಪಷ್ಟವಾಗಿ ಅರಿವಾಗಿದೆ.

* ಕಾಂಗ್ರೆಸ್ ನಾಯಕರು ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡಿದ್ದಾರೆ.

* ಈಗ ಪ್ರಸ್ತಾಪಿಸಿರುವ ಭ್ರಷ್ಟಾಚಾರದ ಆರೋಪದ ಕುರಿತು ಈ ಹಿಂದೆಯೇ ವಿಚಾರಣೆ ನಡೆದು ಇದಕ್ಕೆ ಸಂಬಂಧಿಸಿದ ದಾಖಲೆಗಳಲ್ಲವೂ ನಕಲಿ ಎಂದು ಸಾಬೀತಾಗಿದೆ

ಕಾಂಗ್ರೆಸ್ಸಿನಿಂದ ಅಪಪ್ರಚಾರ ಮತ್ತು ನಕಲಿ ಸುದ್ದಿ

ಕಾಂಗ್ರೆಸ್ಸಿನಿಂದ ಅಪಪ್ರಚಾರ ಮತ್ತು ನಕಲಿ ಸುದ್ದಿ

ಆದಾಯ ತೆರಿಗೆ ಇಲಖೆಯು ದಾಖಲೆಗಳನ್ನು ಮತ್ತು ನನ್ನ ಕೈ ಬರಹ ಹಾಗೂ ಸಹಿಯನ್ನು ಕೂಡಾ ತಪಾಸಣೆಗೆ ಒಳಪಡಿಸಿದ್ದು, ಅವೆಲ್ಲವೂ ನಕಲಿ ಎನ್ನುವುದು ದೃಢಪಟ್ಟಿದೆ.

ಕಾಂಗ್ರೆಸ್ ನಾಯಕರು ದುರುದ್ದೇಶಪೂರಿತ ಅಪಪ್ರಚಾರ ಮತ್ತು ನಕಲಿ ಸುದ್ದಿಗಳನ್ನು ಹರಡುವುದರಲಿ ನಿಸ್ಸೀಮರು.

ರಾಜಕೀಯವಾಗಿ ಲಾಭ ಪಡೆಯುವ ಉದ್ದೇಶ ಬಿಟ್ಟರೆ ಇದರ ಹಿಂದೆ ಯಾವುದೇ ವಾಸ್ತವಾಂಶ ಇಲ್ಲ

ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಿರುವ ವಿಷಯಗಳು ಅಪ್ರಸ್ತುತ ಮತ್ತು ಸುಳ್ಳಿನ ಕಂತೆ. ಈ ವಿಷಯ ಮುಗಿದ ಅಧ್ಯಾಯ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bribery CD case : Surjewala releases Caravan Report Excerpts and a dairy exposes Former CM BS Yeddyurappa. BS Yeddyurappa refutes all the allegations and said Dairy released by Congress is totally false and fabricated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more