ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಪ್ಪ ಕಾಣಿಕೆ ಸಿಡಿ ಪ್ರಕರಣ, ಅನಂತ್- ಯಡಿಯೂರಪ್ಪಗೆ ಹಿನ್ನಡೆ

ಹೈಕಮಾಂಡ್ ಗೆ ಕಪ್ಪ ವಿಷಯಕ್ಕೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಸಂಭಾಷಣೆ ಸಿಡಿ ಪ್ರಕರಣ ಸದ್ಯ ಸೈಬರ್ ಪೊಲೀಸರ ತನಿಖೆಯಲ್ಲಿದೆ. 6 ವಾರದೊಳಗೆ ಇಬ್ಬರು ಪೊಲೀಸರ ಮುಂದೆ ಹಾಜರಾಗಬೇಕಿದೆ.

By Mahesh
|
Google Oneindia Kannada News

ಬೆಂಗಳೂರು, ಮೇ 16 : ಹೈಕಮಾಂಡ್ ಗೆ ಕಪ್ಪ ವಿಷಯಕ್ಕೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಸಂಭಾಷಣೆ ಸಿಡಿ ಪ್ರಕರಣ ಸದ್ಯ ಸೈಬರ್ ಪೊಲೀಸರ ತನಿಖೆಯಲ್ಲಿದೆ. 6 ವಾರದೊಳಗೆ ಇಬ್ಬರು ಪೊಲೀಸರ ಮುಂದೆ ಹಾಜರಾಗಬೇಕಿದೆ.

ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರು ತಮ್ಮ ಧ್ವನಿಯ ಮಾದರಿಯನ್ನು ನೀಡಿ, ಸೈಬರ್ ಕ್ರೈಂ ಪೊಲೀಸರ ಮುಂದೆ ಇನ್ನೊಂದು ವಾರದೊಳಗೆ ಹಾಜರಾಗಬೇಕಿದೆ. ಎಂದು ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್ ಮೇ 6ರಂದು ಆದೇಶ ನೀಡಿತ್ತು.[ಯಡಿಯೂರಪ್ಪ- ಅನಂತ್ ಮಾತನಾಡಿಕೊಂಡಿದ್ದು ಯಾರ ಬಗ್ಗೆ?]

Bribery CD case : ACMM-I court directs BS Yeddyurappa and Ananth Kumar to appear before Cyber police

ಆದರೆ, ಕೋರ್ಟಿಗೆ ಈ ರೀತಿ ಆದೇಶ ನೀಡುವ ಹಕ್ಕಿಲ್ಲ, ಧ್ವನಿ ಸ್ಯಾಂಪಲ್ ನೀಡುವ ಅಗತ್ಯವಿಲ್ಲ. ಅದೇಶವನ್ನು ರದ್ದುಗೊಳಿಸುವಂತೆ ಒಂದನೇ ಎಸಿಎಂಎಂ ನ್ಯಾಯಲಯದ ಮುಂದೆ ಯಡಿಯೂರಪ್ಪ ಪರ ವಕೀಲರು ಮನವಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಆದೇಶ ಹಿಂಪಡೆಯಲು ಸಾಧ್ಯವಿಲ್ಲ, 6 ವಾರಗಳೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗತಕ್ಕದು ಎಂದು ಆದೇಶ ನೀಡಿದೆ.

ಸಿದ್ದರಾಮಯ್ಯ ಅವರು, ಹೈಕಮಾಂಡ್ ಗೆ 1000 ಕೋಟಿ ರು. ನೀಡಿದ್ದಾರೆಂಬ ವಿಚಾರ ಎಂಎಲ್ಸಿ ಗೋವಿಂದರಾಜು ಡೈರಿಯಲ್ಲಿರುವುದಾಗಿ ಯಡಿಯೂರಪ್ಪ ಬಾಂಬ್ ಸಿಡಿಸಿದ್ದರು.

ನಂತರ ಬಿಜೆಪಿ ಕಚೇರಿಯಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ನಡುವೆ ನಡೆದ ಸಂಭಾಷಣೆಯ ಸಿಡಿಯನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ್ದರು. ನಂತರ ಇಬ್ಬರು ನಾಯಕರ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆ, ಎಸಿಬಿ, ಸೈಬರ್ ಪೊಲೀಸರಿಗೆ ಕಾಂಗ್ರೆಸ್ ದೂರು ನೀಡಿತ್ತು.

English summary
Bribery CD case : ACMM-I court today(May 16) has given six week time to Former CM BS Yeddyurappa and Union minister Ananth Kumar to appear before Cyber police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X