ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಂಕಿಂಗ್‌ ಪರೀಕ್ಷೆಗಾಗಿ ಆನ್‌ಲೈನ್‌‌ ಕೋಚಿಂಗ್‌

By Ashwath
|
Google Oneindia Kannada News

ಬೆಂಗಳೂರು, ಏ.29: ಬ್ಯಾಂಕಿಂಗ್‌ ಕ್ಷೇತ್ರದ ಪರೀಕ್ಷಾ ಅಭ್ಯರ್ಥಿಗಳಿಗೆ ಇಂಟರ್‌‌ನೆಟ್‌‌ ಮೂಲಕವೇ ತರಬೇತಿ ನೀಡಲು ದೇಶದಲ್ಲಿ ಪ್ರಥಮ ಬಾರಿಗೆ ಬ್ರೆಟ್‌ ಸಂಸ್ಥೆ ಕೋಚಿಂಗ್‌ ವೆಬ್‌ಸೈಟ್‌‌ನ್ನು ಆರಂಭಿಸಿದೆ.

ಪ್ರೆಸ್‌ ಕ್ಲಬ್‌‌ನಲ್ಲಿ ಇಂದು ಈ ವೆಬ್‌ಸೈಟ್‌ನ್ನು ಬಿಡುಗಡೆ ಮಾಡಿ ಮಾತನಾಡಿದ ಕೆನರಾ ಬ್ಯಾಂಕ್‌ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್‌‌.ಕೆ ದುಬೆ ' ಐಟಿ ಕ್ಷೇತ್ರದಷ್ಟೇ ಈಗ ಬ್ಯಾಂಕಿಂಗ್‌‌‌‌ ಕ್ಷೇತ್ರ ಬೆಳೆಯುತ್ತಿದೆ. ವರ್ಷದಿಂದ ವರ್ಷ‌ಕ್ಕೆ ಬ್ಯಾಂಕ್‌ಗಳ ಶಾಖೆ ಹೆಚ್ಚಾಗುತ್ತಿದೆ. ಶಾಖೆಗಳು ಹೆಚ್ಚಾಗುತ್ತಿದ್ದರೂ ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿ‌ಗಳ ಪ್ರಮಾಣ ಸಹಾಯವಾಗಲು ಈ ವೆಬ್‌ಸೈಟ್‌ನ್ನು ಆರಂಭಿಸಲಾಗಿದೆ' ಎಂದು ಹೇಳಿದರು.

ಕಳೆದ ವರ್ಷ ಕೆನರಾ ಬ್ಯಾಂಕ್‌‌‌ 7ಸಾವಿರ ಜನರನ್ನು ಉದ್ಯೋಗಿಗಳನ್ನಾಗಿ ನೇಮಕ ಮಾಡಿದ್ದು, ಇನ್ನು ಎರಡು ವರ್ಷದಲ್ಲಿ15 ಸಾವಿರ ಉದ್ಯೋಗಿಗಳು ಕೆನರಾ ಬ್ಯಾಂಕ್‌ ನೇಮಕ ಮಾಡಲಿದೆ. ಆರ್ಹ‌ ನುರಿತ ಆನ್‌ಲೈನ್‌ ಬಗ್ಗೆ ತಿಳುವಳಿಕೆ ಇರುವ ಅಭ್ಯರ್ಥಿ‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿ‌‌ಗಳು ಅನ್‌ಲೈನ್‌ನತ್ತ ಹೆಚ್ಚಿನ ಆಸಕ್ತಿ ವಹಿಸಲು ಈ ವೆಬ್‌ಸೈಟ್‌ ಸಹಕಾರಿಯಾಗಲಿದೆ ಎಂದು ತಿಳಿಸಿದರು.[PF ಹಿಂಪಾವತಿ ಇನ್ನು ಆನ್‌ ಲೈನ್ ಮೂಲಕ]

BRet banking recruitment website launched

ಈ ವೆಬ್‌ಸೈಟ್‌ನ ವಿಶೇಷತೆ ಏನು?
ಆನ್‌ಲೈನ್‌ನಲ್ಲಿ ಬ್ಯಾಂಕಿಂಗ್‌ ತರಬೇತಿಗಾಗಿ ಆರಂಭಿಸಿದ ಮೊದಲ ವೆಬ್‌ಸೈಟ್‌ ಇದಾಗಿದ್ದು,ವಿವಿಧ ಬ್ಯಾಂಕ್‌ಗಳಲ್ಲಿ ಹಿರಿಯ ಸ್ಥಾನದಲ್ಲಿರುವ ಅಧಿಕಾರಿಗಳು ವೆಬ್‌ಸೈಟ್‌ನ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ. ಅಲ್ಲದೇ ಪ್ರಸ್ತುತ ಬ್ಯಾಂಕ್‌ಗಳಲ್ಲಿ ಉದ್ಯೋಗದಲ್ಲಿರುವ ಹಿರಿಯ ಅಧಿಕಾರಿಗಳು ಈ ವೆಬ್‌ಸೈಟ್‌ನ ಮೂಲಕ ವಿದ್ಯಾರ್ಥಿ‌ಗಳಿಗೆ ಮಾರ್ಗದರ್ಶ‌ನ ನೀಡಲಿದ್ದಾರೆ.

ಮೂರು ತಿಂಗಳ ಅವಧಿಯ ತರಬೇತಿಗೆ ಸಂಸ್ಥೆ 6,600 ರೂಪಾಯಿ ಶುಲ್ಕವನ್ನು ವಿಧಿಸಿದೆ. ಹೊಸದಾಗಿ ಆನ್‌ಲೈನ್‌ ಕೋಚಿಂಗ್‌ ಕ್ಲಾಸ್‌ ಆರಂಭಗೊಂಡಿದ್ದರಿಂದ ಶುಲ್ಕದಲ್ಲಿ ಶೇ.25 ರಿಯಾಯಿತಿಯನ್ನು ಪ್ರಕಟಿಸಿದ್ದು, ವಿದ್ಯಾರ್ಥಿ‌ಗಳು 4,950 ರೂ.ಪಾವತಿಸಿ ಕೋಚಿಂಗ್‌ ಕ್ಲಾಸ್‌‌ನಲ್ಲಿ ನೋಂದಣಿ ಮಾಡಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಬಹುದು:www.brets.in

English summary
An Initative started by highly experienced ex senoir banking professionals offers a comprehensive training program to prepare students for the bank exams. R.K Dubey CMD, Canara Bank launched the BRet website and BRet Solutions product.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X