ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲೆಕ್ಟ್ರಾನಿಕ್ ಸಿಟಿ ಬಳಿ ಪತಿ ಮೇಲೆ ಪತ್ನಿಯಿಂದ ಗುಂಡಿನ ದಾಳಿ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ವೀರಸಂದ್ರ ಬಳಿ ಶೂಟೌಟ್ ನಡೆದಿದೆ. ಪತ್ನಿಯೊಬ್ಬರು ತಮ್ಮ ಪತಿಯ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಮೇ 05: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ವೀರಸಂದ್ರ ಬಳಿ ಶೂಟೌಟ್ ನಡೆದಿದೆ. ಪತ್ನಿಯೊಬ್ಬರು ತಮ್ಮ ಪತಿಯ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಬಳಿ ವೀರಸಂದ್ರ ಬಳಿಯ ಟ್ರಾಫಿಕ್ ಸಿಗ್ನಲ್ ನಲ್ಲಿ ಪತಿ ಮೇಲೆ ಪತ್ನಿಯಿಂದಲೇ ಗುಂಡಿನ ದಾಳಿ ನಡೆದಿದೆ.

ಪತಿ ಸಾಯಿರಾಮ್ ಮೇಲೆ 3 ಸುತ್ತು ಗುಂಡು ಹಾರಿಸಿದ ಪತ್ನಿ ಹಂಸಾ ಅವರು ಸದ್ಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ವಶದಲ್ಲಿದ್ದಾರೆ. ಇಬ್ಬರು ಎಚ್ಎಸ್ಆರ್ ಲೇಔಟ್ ಬಳಿ ಹರಳೂರಿನ ನಿವಾಸಿಗಳು ಎಂದು ತಿಳಿದು ಬಂದಿದೆ.

Breaking: Shootout at Veerasandra Electronic City, Wife Fires at Husband

ಚಂದಾಪುರದ ಬಳಿ ಮ್ಯಾಕ್ಸ್ ರೆಸಿಡೆನ್ಸಿ ಬಳಿ ಮದ್ಯ ಸೇವಿಸಿದ್ದರು. ನಂತರ ಕಾರಿನಲ್ಲಿ ಬೆಂಗಳೂರಿನ ಕಡೆಗೆ ಜಗಳವಾಡುತ್ತಲೇ ತೆರಳಿದ್ದಾರೆ.ಮಾರ್ಗಮಧ್ಯದಲ್ಲಿ ಕಾರಿನಿಂದ ಇಳಿದ ಪತ್ನಿ ಸಾಯಿರಾಮ್ ಅವರು ಬಿಎಂಟಿಸಿ ಬಸ್ ಹತ್ತಿದ್ದಾರೆ.

ಬಸ್ ಚೇಸ್ ಮಾಡಿಕೊಂಡು ಬಂದ ಪತ್ನಿ ಹಂಸಾ ಅವರು ಹುಸ್ಕೂರ್ ಗೇಟ್ ದಾಟಿ ವೀರಸಂದ್ರ ಸಿಗ್ನಲ್ ಬಳಿ ಬಸ್ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಸ್ ನಿಂದ ಪತಿ ಸಾಯಿರಾಮ್ ಕೆಳಗಿಳಿಯುತ್ತಿದ್ದಂತೆ ಆತನ ಮೇಲೆ ಮೂರು ಸುತ್ತಿನ ಗುಂಡು ಹಾರಿಸಿದ್ದಾರೆ.

English summary
Breaking: A woman fatally shot her husband today at Veerasandra in Electronic city police station limits. Hamsa and Sai Ram couple had a quarrel before she fired 3 rounds at him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X