ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಎಂಟಿಆರ್‌ ಸಿಬ್ಬಂದಿಗೆ ಕೊರೊನಾ: ಘಟಕ ಸೀಲ್‌ಡೌನ್

|
Google Oneindia Kannada News

ಬೆಂಗಳೂರು, ಜುಲೈ 15: ಬೆಂಗಳೂರಿನ ಎಂಟಿಆರ್ ಕಂಪನಿಯ ಮುಖ್ಯ ಘಟಕದ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಘಟಕವನ್ನು ಸೀಲ್‌ಡೌನ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Recommended Video

Facebook ತ್ಯಜಿಸಿ ಇಲ್ಲ ಸೇನೆಯಿಂದ ಹೊರನಡೆಯಿರಿ | Oneindia Kannada

ಒಂದು ವಾರದ ಹಿಂದೆ ಕಂಪೆನಿಯ ಅಡುಗೆ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿತ್ತು. ಅವರಿಂದಾಗಿಯೇ ಇದೀಗ ಇಲ್ಲಿ ಕೆಲಸ ಮಾಡುವ ಸುಮಾರು 30 ಜನರಿಗೆ ವೈರಸ್‌ ತಗುಲಿದೆ. ಈ ಹಿನ್ನೆಲೆಯಲ್ಲಿ ಬೊಮ್ಮಸಂದ್ರದ ಘಟಕವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಕೊರೊನಾ ಸೋಂಕು ಶಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸುವಂತಿಲ್ಲಕೊರೊನಾ ಸೋಂಕು ಶಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸುವಂತಿಲ್ಲ

ಸಿದ್ಧ ಆಹಾರ ಮತ್ತು ಮಸಾಲಾ ಪದಾರ್ಥಗಳ ತಯಾರಿಕಾ ಕಂಪೆನಿಯಾದ ಎಂಟಿಆರ್‌ನ ಮುಖ್ಯ ಘಟಕವು ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಇದೆ. ಇದು ಪ್ರಮುಖ ಘಟಕವಾಗಿದ್ದ ಹಿನ್ನೆಲೆಯಲ್ಲಿ ಕಂಪೆನಿಗೆ ನೂರಾರು ಕೋಟಿ ರೂ. ನಷ್ಟವಾಗಲಿದೆ ಎನ್ನಲಾಗಿದೆ.

Branch of MTR Foods In Bengaluru Sealed After Employee Gets Coronavirus

ಸೋಂಕಿತರ ಸಂಪರ್ಕದಲ್ಲಿದ್ದ ಕಂಪೆನಿಯ ಇನ್ನೂ 40 ಉದ್ಯೋಗಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ. ಇಲ್ಲಿಂದ ತಯಾರಾಗುವ ಪದಾರ್ಥಗಳು ಭಾರತ ಮಾತ್ರವಲ್ಲದೇ ಬೇರೆಬೇರೆ ದೇಶಗಳಿಗೂ ರಫ್ತಾಗುತ್ತಿವೆ. ಸೀಲ್‌ಡೌನ್‌ನಿಂದಾಗಿ ಉತ್ಪಾದನಾ ಕಾರ್ಯ ಸ್ಥಗಿತವಾಗಿದೆ.

English summary
A branch of MTR Foods Private Limited in Bengaluru has been sealed after an employee tested coronavirus positive. The Bommasandra unit of MTR Foods was sealed after an employee was found to have COVID-19 over a week ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X