ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಫಿ ಗೋಪಾಲಕೃಷ್ಣನ್ ಬೆಂಗಳೂರಿಗೆ ಭರ್ಜರಿ ಕೊಡುಗೆ

By Srinath
|
Google Oneindia Kannada News

brain-study-center-at-bangalore-infosys-krish-iisc-joint-effort
ಬೆಂಗಳೂರು, ಜ.31: ಇದು ಅಕ್ಷರಶಃ ಇನ್ಫೋಸಿಸ್‌ ಟೆಕ್ನಾಲಜೀಸ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌ ಅವರ brain child. ಸೀದಾ ಮೆದುಳಿಗೇ ಕೈಹಾಕಿರುವ ಗೋಪಾಲಕೃಷ್ಣನ್‌ ಅವರು ಐಟಿ ಬಿಟಿ ಸಿಟಿ ಬೆಂಗಳೂರಿನಲ್ಲಿ ಸದ್ಯದಲ್ಲೇ ವಿಶ್ವಮಟ್ಟದ ಮೆದುಳು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದ್ದಾರೆ.

ಸುಮಾರು 225 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕೇಂದ್ರದಲ್ಲಿ ಮೆದುಳಿನ ಅಧ್ಯಯನ ಮತ್ತು ಸಂಶೋಧನೆ ನಡೆಯಲಿದೆ. { ಹರ್ಯಾಣದಲ್ಲಿ ಭೂದಾನ: ಅಂದು ಭಾವನಿಗೆ, ಈಗ ತಂಗಿಗೆ }

ಕ್ರಿಸ್‌ ಗೋಪಾಲಕೃಷ್ಣನ್‌ ಅಧ್ಯಕ್ಷತೆಯ ಪ್ರತೀಕ್ಷಾ ಟ್ರಸ್ಟ್‌ ಮತ್ತು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಸೈನ್ಸ್‌ (IISC) ಜಂಟಿಯಾಗಿ ಸುಮಾರು 225 ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಾಣ ಮಾಡಲಿದೆ. ಮುಂದಿನ 10 ವರ್ಷಗಳ ಕಾಲದಲ್ಲಿ ಟ್ರಸ್ಟ್‌ ಕಾಲಕಾಲಕ್ಕೆ ಹಣ ಮಂಜೂರು ಮಾಡುತ್ತದೆ.

ಈ ಕುರಿತು ಹೇಳಿಕೆ ನೀಡಿರುವ ಕ್ರಿಸ್‌ ಗೋಪಾಲಕೃಷ್ಣನ್‌ ಮತ್ತು ಟ್ರಸ್ಟಿ ಸುಧಾ ಗೋಪಾಲಕೃಷ್ಣನ್ ಅವರು ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ. ಟೋರ್‌ ಸ್ಟೆನ್‌ ವಿಸೆಲ್‌ (Prof. Torsten Wiesel) ಅಧ್ಯಕ್ಷತೆಯ ಅಂತಾರಾಷ್ಟ್ರೀಯ ಮಟ್ಟದ ಸಲಹಾ ಮಂಡಳಿಯೊಂದನ್ನು ಸ್ಥಾಪಿಸಲಾಗಿದೆ. ಸಂಶೋಧನಾ ಕೇಂದ್ರವು IISC ನರ ವಿಜ್ಞಾನ ಕೇಂದ್ರ ಹಾಗೂ ಬೆಂಗಳೂರಿನ ಇತರೆ ಆಸ್ಪತ್ರೆಗಳ ನೆರವು ಪಡೆಯಲಿದೆ ಎಂದು ತಿಳಿಸಿದ್ದಾರೆ. ಜತೆಗೆ, ಮದ್ರಾಸಿನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ (IIT Madras) ಸಹ ನೆರವಾಗಲಿದೆ.

ಮನುಷ್ಯನ ಮೆದುಳು ಇನ್ನೂ ಕುತೂಹಲದ ಗಣಿಯಾಗಿಯೇ ಉಳಿದಿದೆ. ಅದನ್ನು ಅರಿಯುವ ಕೆಲಸ ಮಾನವರಿಂದ ಇನ್ನೂ ಪೂರ್ಣಮಟ್ಟಿಗೆ ಸಾಧ್ಯವಾಗಿಲ್ಲ. ಹೀಗಾಗಿ ಮೆದುಳಿನ ಕುರಿತು ಹೆಚ್ಚಿನ ಅಧ್ಯಯನ ನಡೆಸುವ ನಿಟ್ಟಿನಲ್ಲಿ IISc ಜತೆಗೂಡಿ ವಿಶ್ವಮಟ್ಟದ ಸಂಶೋಧನಾ ಕೇಂದ್ರ ಆರಂಭಕ್ಕೆ ನಿರ್ಧರಿಸಲಾಗಿದೆ ಎಂದು ಗೋಪಾಲಕೃಷ್ಣನ್‌ ದಂಪತಿ ತಿಳಿಸಿದ್ದಾರೆ.

ಏನೆಲ್ಲಾ ಸಂಶೋಧನೆ ನಡೆಯಲಿದೆಯೆಂದರೆ:
ಮೆದುಳು ಕಾರ್ಯನಿರ್ವಹಿಸುವ ಬಗ್ಗೆ, ಜತೆಗೆ ನರಕೋಶ ವ್ಯವಸ್ಥೆ ಹಾನಿ(neurodegenerative conditions) ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ವೃದ್ಧಾಪ್ಯದಲ್ಲಿ ಸಾಮಾನ್ಯವಾಗಿ ಕಾಡುವ ತೊಂದರೆಗಳಿಗೆ ಉತ್ತರ ಕಂಡುಕೊಳ್ಳುವ ಕೆಲಸವನ್ನು ಸಂಶೋಧನಾ ಕೇಂದ್ರ ಮಾಡಲಿದೆ.

English summary
Rs 225 crore Brain study center is to come at Bangalore. It will be a joint effort between Infosys Executive Vice-Chairman Kris Gopalakrishnan lead Pratiksha Trust and IISc. Nobel prize winner Prof. Torsten Wiesel will be the guiding force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X