ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರಾಹ್ಮಣರನ್ನು ಕೆಣಕಿದ ಜಾರಕಿಹೊಳಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬ್ರಾಹ್ಮಣರ ಬಗ್ಗೆ ಅವಹೇಳನಾಕಾರಿ ಹೇಳಿಕೆಯನ್ನು ನೀಡಿದ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವು ಚುನಾವಣಾ ಆಯೋಗಕ್ಕೆ ಮನವಿ ಮಾಡಲಿದೆ.

ಏಪ್ರಿಲ್ 16 ರಂದು ಬೆಳಗಾವಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸತೀಶ್ ಜಾರಕೊಹೊಳಿ ಅವರು, "ದೇಶದ ಸೇನೆಯಲ್ಲಿ ದಲಿತರು, ಹಿಂದುಳಿದವರು, ಮುಸ್ಲಿಮರು ಹೆಚ್ಚಾಗಿ ಪ್ರಾಣತ್ಯಾಗ ಮಾಡಿದ್ದಾರೆಯೇ ಹೊರತು ದೇಶಪಾಂಡೆ, ಕುಲಕರ್ಣಿ, ಜೋಶಿ ಸೇರಿದಂತೆ ಬ್ರಾಹ್ಮಣರು ಸೇನೆಗಾಗಿ ಜೀವ ಬಿಟ್ಟ ಇತಿಹಾಸವಿಲ್ಲ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಹರಿಪ್ರಸಾದ್ ಗೆ ಬೆಂಬಲ ವದಂತಿ: ಸ್ಪಷ್ಟನೆ ನೀಡಿದ ಬ್ರಾಹ್ಮಣ ಮಹಾಸಭಾ ಹರಿಪ್ರಸಾದ್ ಗೆ ಬೆಂಬಲ ವದಂತಿ: ಸ್ಪಷ್ಟನೆ ನೀಡಿದ ಬ್ರಾಹ್ಮಣ ಮಹಾಸಭಾ

ಆದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮತ್ತು ಸೇನೆಯಲ್ಲಿ ಬ್ರಾಹ್ಮಣರು ಮೊದಲಿನಿಂದಲೂ ಸೇವೆ ಸಲ್ಲಿಸುತ್ತ ಬಂದಿದ್ದು, ದೇಶದ ಇತಿಹಾಸದ ಬಗ್ಗೆ ತಿಳಿವಳಿಕೆ ಇರುವವರಿಗೆ ಈ ವಿಷಯ ಗೊತ್ತು. ಈ ರೀತಿ ಒಂದು ಸಮಾಜದ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡುವುದು ಚುನಾವಣಾ ಆಯೋಗ ವಿಧಿಸಿರುವ ನಿಯಮಗಳ ಸ್ಪಷ್ಟ ಉಲ್ಲಂಘನೆ. ಈ ಬಗ್ಗೆ ಸತೀಶ್ ಜಾರಕಿಹೊಳಿ ಅವರು ಬ್ರಾಹ್ಮಣರ ಕ್ಷಮೆ ಕೇಳಬೇಕು.ಯಾವುದೇ ಜಾತಿಯ ವಿರುದ್ಧ ಮಾತನಾಡುವುದನ್ನೂ ಬ್ರಾಹ್ಮಣ ಮಹಾಸಭಾ ಖಂಡಿಸುತ್ತದೆ. ಈ ರೀತಿ ಹೇಳಿಕೆನೀಡುವುದನ್ನು ಮುಂದುವರಿಸಿದರೆ ಮಹಾಸಭೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಮಹಾಸಭಾ ಅಧ್ಯಕ್ಷ ಕೆ ಎನ್ ವೇಂಕಟನಾರಾಯಣ್ ತಿಳಿಸಿದ್ದಾರೆ.

Brahmin Mahasabha to file complaint against Satish Jarakiholi with EC

ಹರಿಪ್ರಸಾದ್ ಗೆ ಬ್ರಾಹ್ಮಣರ ಬೆಂಬಲ ಎಂಬುದು ಕಟ್ಟುಕತೆ, ನಿಜಕ್ಕೂ ನಡೆದಿದ್ದೇನು?ಹರಿಪ್ರಸಾದ್ ಗೆ ಬ್ರಾಹ್ಮಣರ ಬೆಂಬಲ ಎಂಬುದು ಕಟ್ಟುಕತೆ, ನಿಜಕ್ಕೂ ನಡೆದಿದ್ದೇನು?

ಮೂರ್ನಾಲ್ಕು ದಿನಗಳ ಹಿಂದಷ್ಟೇ, ಬ್ರಾಹ್ಮಣರು ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾರೆ ಎಂಬ ಹೇಳಿಕೆ ನೀಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಅವರ ನಡೆಯನ್ನು ಮಹಾಸಭಾ ಖಂಡಿಸಿತ್ತು.

English summary
Akhila Karnataka Brahmin Mahasabha is going to file a complaint against Congress leader Satish Jarakiholi for his controversial statement against Brahmins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X