ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮೀಕ್ಷಾ ವರದಿ: ಬೆಂಗಳೂರಿನ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರಲ್ಲಿ ಯಾರು ಬೆಸ್ಟ್?

ಸಮೀಕ್ಷಾ ವರದಿ: ಬೆಂಗಳೂರಿನ 28 ಶಾಸಕರಲ್ಲಿ ಯಾರು ಬೆಸ್ಟ್?

By Balaraj Tantry
|
Google Oneindia Kannada News

Recommended Video

Karnataka Elections 2018 : ಸಮೀಕ್ಷಾ ವರದಿ : ಬೆಂಗಳೂರಿನ ಜೆಡಿಎಸ್ ಕಾಂಗ್ರೆಸ್ ಬಿಜೆಪಿ ಶಾಸಕರಲ್ಲಿ ಯಾರು ಬೆಸ್ಟ್

ಸರಕಾರದಿಂದ ಕ್ಷೇತ್ರದ ಅಭಿವೃದ್ದಿ ಕೆಲಸಗಳಿಗೆ ನೀಡಲಾಗುವ ಶಾಸಕರ ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳುವುದು, ಅಸೆಂಬ್ಲಿಯಲ್ಲಿ ಹಾಜರಾತಿ.. ಮುಂತಾದ ವರದಿಯನ್ನು ಆಧರಿಸಿ ಬೆಂಗಳೂರು ಸಿಟಿಜನ್ ಫೋರಂ ವರದಿಯೊಂದನ್ನು ಬಿಡುಗಡೆ ಮಾಡಿದೆ.

ಬೆಂಗಳೂರು ನಗರ ವ್ಯಾಪ್ತಿಯ 28 ಕ್ಷೇತ್ರಗಳ ಶಾಸಕರಿಗೆ ನೀಡಲಾಗುವ ವಾರ್ಷಿಕ ಎರಡು ಕೋಟಿ ಅನುದಾನ, ಮತ್ತು ಒಟ್ಟಾರೆಯಾಗಿ ಕಳೆದ ಐದು ವರ್ಷಗಳಲ್ಲಿ ಸರಕಾರದಿಂದ ಹರಿದುಬಂದ ಹಣವನ್ನು ಅಭಿವೃದ್ದಿಯಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಬಳಸಿದ ಆಧಾರದ ಮೇಲೆ, ಜೊತೆಗೆ ಇತರ ಪ್ಯಾರಾಮೀಟರ್ ಇಟ್ಟುಕೊಂಡು, ಬಿಪ್ಯಾಕ್ (ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ) ವರದಿ ಬಿಡುಗಡೆ ಮಾಡಿದೆ.

ಜಯನಗರ ಕ್ಷೇತ್ರ ಹೊರತುಪಡಿಸಿ 431 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಜಯನಗರ ಕ್ಷೇತ್ರ ಹೊರತುಪಡಿಸಿ 431 ಅಭ್ಯರ್ಥಿಗಳು ಕಣದಲ್ಲಿದ್ದಾರೆ

ಬಿಪ್ಯಾಕ್ ಫೋರಂನ ಉಪಾಧ್ಯಕ್ಷ ಟಿ ವಿ ಮೋಹನದಾಸ್ ಪೈ ಈ ಬಗ್ಗೆ ಮಾತನಾಡುತ್ತಾ, ಎಂಟು ವಿವಿಧ ಮಾನದಂಡಗಳನ್ನು ಆಧರಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ. ನಾವು ಕೊಟ್ಟಿರುವ ರೇಟಿಂಗ್, ಕ್ಷೇತ್ರಾಭಿವೃದ್ದಿ ವಿಚಾರದಲ್ಲಿ ಮಾತ್ರವೇ ಹೊರತು, ಶಾಸಕರು ಒಳ್ಲೆಯವರೋ ಕೆಟ್ಟವರೋ ಎನ್ನುವುದರ ಬಗ್ಗೆ ಅಲ್ಲ ಎಂದು ಪೈ ಹೇಳಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದ ಶಾಸಕ ಆರ್ ಅಶೋಕ್, ಕೆ ಆರ್ ಪುರಂ ಶಾಸಕ ಭೈರತಿ ಬಸವರಾಜ್ ಅವರ ಮೇಲೆ ಗಂಭೀರ ಕೇಸ್ ಇದೆ ಎಂದು ಮೋಹನದಾಸ್ ಪೈ ಹೇಳಿದ್ದಾರೆ.

ಬೆಂಗಳೂರಿನ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರಲ್ಲಿ ಯಾರು ಬೆಸ್ಟ್? ಬೆಂಗಳೂರಿನ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರಲ್ಲಿ ಯಾರು ಬೆಸ್ಟ್?

ಅಸೆಂಬ್ಲಿಯಲ್ಲಿನ ಹಾಜರಾತಿ, ಶಾಸಕರ ಅನುದಾನ ಬಳಕೆ, ಶಿಕ್ಷಣ, ಕ್ರಿಮಿನಲ್ ಹಿನ್ನಲೆ, ಸಾಮಾಜಿಕ ತಾಣದಲ್ಲಿನ ಹಾಜರಾತಿ ಮುಂತಾದ ಮಾನದಂಡದ ಮೂಲಕ ಯಾರು ಬೆಸ್ಟ್ ಎನ್ನುವ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ಪೈ ಹೇಳಿದ್ದಾರೆ. ಬೆಂಗಳೂರಿನ 28 ಶಾಸಕರ ಪೈಕಿ ಯಾರು ಬೆಸ್ಟ್, ಮುಂದೆ ಓದಿ..

ಬೆಂಗಳೂರು ನಗರದ ಶಾಸಕರ ವಿದ್ಯಾರ್ಹತೆ

ಬೆಂಗಳೂರು ನಗರದ ಶಾಸಕರ ವಿದ್ಯಾರ್ಹತೆ

ಬೆಂಗಳೂರು ನಗರದ ಮೂವರು ಶಾಸಕರು ಸ್ನಾತಕೋತ್ತರ ಪದವಿ, ಹದಿನೆಂಟು ಶಾಸಕರು ಪದವೀಧರು, ಇಬ್ಬರು ಪಿಯುಸಿ ಮತ್ತು ಐವರು ಎಸ್ಎಸ್ಎಲ್ಸಿ ವರೆಗೆ ಶಿಕ್ಷಣವನ್ನು ಪಡೆದಿದ್ದಾರೆ. ನಗರದ ಎಲ್ಲಾ ಶಾಸಕರು ಸಾಮಾಜಿಕ ತಾಣದಲ್ಲಿ (ಫೇಸ್ ಬುಕ್, ಟ್ವಿಟ್ಟರ್) ಸಕ್ರಿಯರಾಗಿದ್ದಾರೆ. ಎಂಟು ಮಾನದಂಡವನ್ನು ಆಧರಿಸಿ, ನೂರಕ್ಕೆ ಅಂಕ ನೀಡಲಾಗಿದೆ ಎಂದು ಮೋಹನದಾಸ್ ಪೈ ಹೇಳಿದ್ದಾರೆ.

ನಂಬರ್ ಒನ್ ಶಾಸಕರಾಗಿ ಎನ್ ಎ ಹ್ಯಾರಿಸ್

ನಂಬರ್ ಒನ್ ಶಾಸಕರಾಗಿ ಎನ್ ಎ ಹ್ಯಾರಿಸ್

ಬಿಪ್ಯಾಕ್ ಬಿಡುಗಡೆ ಮಾಡಿದ ವರದಿಯ ಪ್ರಕಾರ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ. ಕ್ಷೇತ್ರದಲ್ಲಿನ ನೀರಿನ ಸಮಸ್ಯೆಗೆ ವಿಶೇಷ ಒತ್ತು ನೀಡಿರುವ ಹ್ಯಾರಿಸ್, ಶಿಕ್ಷಣ, ರಸ್ತೆ ನಿರ್ಮಾಣ, ಫುಟ್ ಪಾತ್, ಅಂಗವಿಕಲರ ಕ್ಷೇಮಾಭಿವೃದ್ದಿ, ರಸ್ತೆ ನಿರ್ಮಾಣ, ಪಾರ್ಕ್ ಮತ್ತು ಕ್ರೀಡಾಂಗಣ ಮುಂತಾದ ಕೆಲಸಗಳಿಗೆ ಹೆಚ್ಚಿನ ಅನುದಾನವನ್ನು ಬಳಸಿಕೊಂಡು ನಂಬರ್ ಒನ್ ಶಾಸಕರಾಗಿ ಹೊರಹೊಮ್ಮಿದ್ದಾರೆ. ಇವರು ನೂರಕ್ಕೆ 84 ಅಂಕವನ್ನು ಪಡೆದುಕೊಂಡಿದ್ದಾರೆ.

ನಗರದ ಕ್ಷೇತ್ರದಿಂದ ಪ್ರತಿನಿಧಿಸುವ ಸಚಿವರಲ್ಲಿ ಯಾರು ಬೆಸ್ಟ್?

ನಗರದ ಕ್ಷೇತ್ರದಿಂದ ಪ್ರತಿನಿಧಿಸುವ ಸಚಿವರಲ್ಲಿ ಯಾರು ಬೆಸ್ಟ್?

ಕೆ ಜೆ ಜಾರ್ಜ್ ( ಕಾಂಗ್ರೆಸ್, ಸರ್ವಜ್ಞ ನಗರ, ನೂರಕ್ಕೆ 87)
ಕೃಷ್ಣ ಭೈರೇಗೌಡ ( ಕಾಂಗ್ರೆಸ್, ಬ್ಯಾಟರಾಯನಪುರ, ನೂರಕ್ಕೆ 84)
ರಾಮಲಿಂಗ ರೆಡ್ಡಿ ( ಕಾಂಗ್ರೆಸ್, ಬಿಟಿಎಂ ಲೇಔಟ್ ಕ್ಷೇತ್ರ, ನೂರಕ್ಕೆ 76)
ಎಂ ಕೃಷ್ಣಪ್ಪ ( ಕಾಂಗ್ರೆಸ್, ವಿಜಯನಗರ, ನೂರಕ್ಕೆ 51)
ರೋಷನ್ ಬೇಗ್ ( ಕಾಂಗ್ರೆಸ್, ಶಿವಾಜಿನಗರ, ನೂರಕ್ಕೆ 64)

ಹ್ಯಾರಿಸ್ ನಂತರ ಯಾವ ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ?

ಹ್ಯಾರಿಸ್ ನಂತರ ಯಾವ ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ?

ಕೆ ಗೋಪಾಲಯ್ಯ ( ಜೆಡಿಎಸ್, ಮಹಾಲಕ್ಷ್ಮೀ ಲೇಔಟ್, ನೂರಕ್ಕೆ 78)
ವೈ ಎ ನಾರಾಯಣಸ್ವಾಮಿ ( ಬಿಜೆಪಿ, ಹೆಬ್ಬಾಳ, ನೂರಕ್ಕೆ 78)
ಬಿ ಎನ್ ವಿಜಯಕುಮಾರ್ ( ಬಿಜೆಪಿ, ಜಯನಗರ, ನೂರಕ್ಕೆ 77)
ರವಿಸುಬ್ರಮಣ್ಯ ( ಬಿಜೆಪಿ, ಬಸವನಗುಡಿ, ನೂರಕ್ಕೆ 75)
ಎಸ್ ಟಿ ಸೋಮಶೇಖರ್ ( ಕಾಂಗ್ರೆಸ್, ಯಶವಂತಪುರ, ನೂರಕ್ಕೆ 75)
(ಚಿತ್ರದಲ್ಲಿ ಶಾಸಕ ನಾರಾಯಣಸ್ವಾಮಿ)

ನಂತರದ ಸ್ಥಾನದಲ್ಲಿ ಮಲ್ಲೇಶ್ವರಂ ಶಾಸಕ

ನಂತರದ ಸ್ಥಾನದಲ್ಲಿ ಮಲ್ಲೇಶ್ವರಂ ಶಾಸಕ

ಡಾ. ಅಶ್ವಥ್ ನಾರಾಯಣ ( ಬಿಜೆಪಿ, ಮಲ್ಲೇಶ್ವರಂ, ನೂರಕ್ಕೆ 72)
ಎಸ್ ಆರ್ ವಿಶ್ವನಾಥ್ ( ಬಿಜೆಪಿ, ಯಲಹಂಕ, ನೂರಕ್ಕೆ 66)
ಅರವಿಂದ ಲಿಂಬಾವಳಿ ( ಬಿಜೆಪಿ, ಮಹದೇವಪುರ, ನೂರಕ್ಕೆ 65)
ಎಸ್ ಸುರೇಶ್ ಕುಮಾರ್ ( ಬಿಜೆಪಿ, ರಾಜಾಜಿನಗರ, ನೂರಕ್ಕೆ 55)
ಆರ್ ಅಶೋಕ್ ( ಬಿಜೆಪಿ, ಪದ್ಮನಾಭನಗರ, ನೂರಕ್ಕೆ 51)
ಮುನಿರತ್ನ ( ಕಾಂಗ್ರೆಸ್, ರಾಜರಾಜೇಶ್ವರಿ ನಗರ, ನೂರಕ್ಕೆ 51)
(ಚಿತ್ರದಲ್ಲಿ ಶಾಸಕ ಅಶ್ವಥ್ ನಾರಾಯಣ)

ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್

ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್ ( ಕಾಂಗ್ರೆಸ್, ಗಾಂಧಿನಗರ, 48/75)
ಅಖಂಡ ಶ್ರೀನಿವಾಸಮೂರ್ತಿ ( ಕಾಂಗ್ರೆಸ್, ಪುಲಿಕೇಶಿನಗರ, ನೂರಕ್ಕೆ 51)
ಎಂ ಕೃಷ್ಣಪ್ಪ ( ಬಿಜೆಪಿ, ಬೆಂಗಳೂರು ದಕ್ಷಿಣ, ನೂರಕ್ಕೆ 49)
ಎಸ್ ಮುನಿರಾಜು ( ಬಿಜೆಪಿ, ದಾಸರಹಳ್ಳಿ, ನೂರಕ್ಕೆ 47)
ಬಿ ಎ ಬಸವರಾಜ ( ಕಾಂಗ್ರೆಸ್, ಕೆ ಆರ್ ಪುರಂ, ನೂರಕ್ಕೆ 45)
(ಚಿತ್ರದಲ್ಲಿ ಶಾಸಕ ದಿನೇಶ್ ಗುಂಡೂರಾವ್)

ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ ವರದಿ

ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ ವರದಿ

ಪ್ರಿಯಕೃಷ್ಣ ( ಕಾಂಗ್ರೆಸ್, ಗೋವಿಂದರಾಜ ನಗರ, ನೂರಕ್ಕೆ 43)
ಜಮೀರ್ ಅಹಮದ್ ( ಕಾಂಗ್ರೆಸ್, ಚಾಮರಾಜಪೇಟೆ, ನೂರಕ್ಕೆ 41)
ಸತೀಶ್ ರೆಡ್ಡಿ ( ಬಿಜೆಪಿ, ಬೊಮ್ಮನಹಳ್ಳಿ, ನೂರಕ್ಕೆ 40)
ಆರ್ ವಿ ದೇವರಾಜ್ ( ಕಾಂಗ್ರೆಸ್, ಚಿಕ್ಕಪೇಟೆ, ನೂರಕ್ಕೆ 38)
ಎಸ್ ರಘು ( ಬಿಜೆಪಿ, ಸಿ ವಿ ರಾಮನ್ ನಗರ, ನೂರಕ್ಕೆ 32)
(ಚಿತ್ರದಲ್ಲಿ ಶಾಸಕ ಪ್ರಿಯಕೃಷ್ಣ)

English summary
Bengaluru-based citizen group, BPac ( Bangalore Political Action Committee) conducted a survey of Bengaluru MLAs on 8 various parameters. As per report, on Minister category (who represents from Bengaluru) KJ George stands top and in MLA category NA Haris is the number one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X