ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ವಿದ್ಯುತ್ ತಂತಿ ಸ್ಪರ್ಶಿಸಿದ ಬಾಲಕನ ಸ್ಥಿತಿ ಗಂಭೀರ

|
Google Oneindia Kannada News

ಬೆಂಗಳೂರು, ಮೇ 17 : ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನೊಬ್ಬ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬಿಬಿಎಂಪಿ ಮೇಯರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿಯ ಲಿಖಿತ್ (14) ಎಂಬ ಬಾಲಕ ವಿದ್ಯುತ್ ತಂತಿ ಸ್ಪರ್ಶಿಸಿ ಗಾಯಗೊಂಡಿದ್ದಾನೆ. ಬಾಲಕನ ದೇಹ ಶೇ 40ರಷ್ಟು ಸುಟ್ಟು ಹೋಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಜೂನ್ 1 ರಿಂದ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಸಾಧ್ಯತೆಜೂನ್ 1 ರಿಂದ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಸಾಧ್ಯತೆ

ಗುರುವಾರ ಮಧ್ಯಾಹ್ನ ಸ್ನೇಹಿತರ ಜೊತೆ ಕ್ರಿಕೆಟ್ ಆಡುವಾಗ ಬಾಲ್ ಕಟ್ಟಡದ ಮೊದಲ ಮಹಡಿಗೆ ಹೋಗಿತ್ತು. ಅದನ್ನು ತರಲು ಹೋಗಿದ್ದ ಲಿಖಿತ್ ವಿದ್ಯುತ್ ತಂತಿ ತುಳಿದು ಕೆಳಗೆ ಬಿದ್ದಿದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾಜಧಾನಿಯಲ್ಲಿ ವಿದ್ಯುತ್ ಅವಘಡಕ್ಕೆ ಬಲಿಯಾದವರೆಷ್ಟು? ನಿರ್ಲಕ್ಷ್ಯವೇಕೆ?ರಾಜಧಾನಿಯಲ್ಲಿ ವಿದ್ಯುತ್ ಅವಘಡಕ್ಕೆ ಬಲಿಯಾದವರೆಷ್ಟು? ನಿರ್ಲಕ್ಷ್ಯವೇಕೆ?

Boy injured

ಮತ್ತಿಕೆರೆಯ ರಮಾದೇವಿ ಹಾಗೂ ಅಂಬರೀಶ್‌ ದಂಪತಿಗಳ ಒಬ್ಬನೇ ಪುತ್ರ ಲಿಖಿತ್ 9ನೇ ತರಗತಿ ಓದುತ್ತಿದ್ದನು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ಅವರು ಭೇಟಿ ನೀಡಿದ ಆರೋಗ್ಯ ವಿಚಾರಿಸಿದರು.

ವಿದ್ಯುತ್ ಸಮಸ್ಯೆ, ಬೆಸ್ಕಾಂಗೆ ಒಂದೇ ದಿನ ಬರೋಬ್ಬರಿ 11,000 ದೂರುಗಳುವಿದ್ಯುತ್ ಸಮಸ್ಯೆ, ಬೆಸ್ಕಾಂಗೆ ಒಂದೇ ದಿನ ಬರೋಬ್ಬರಿ 11,000 ದೂರುಗಳು

ಕೇಬಲ್‌ ವೈರ್ ಜೊತೆ ವಿದ್ಯುತ್ ತಂತಿ ಸಹ ತುಂಡಾಗಿ ಕೆಳಗೆ ಬಿದ್ದಿತ್ತು. ಇದನ್ನು ಗಮನಿಸದ ಲಿಖಿತ್ ಅದನ್ನು ತುಳಿದು ಅವಘಡ ಸಂಭವಿಸಿದೆ. ಜನರು ಪಾಲಿಕೆ ಮತ್ತು ಬೆಸ್ಕಾಂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಿಂದಿನ ಘಟನೆಗಳು

* ಎಲ್‌.ಆರ್.ಬಂಡೆ ಬಳಿ ಆಟವಾಡುತ್ತಿದ್ದ ಬಾಲಕ ವಿಕ್ರಂ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದ

* ಏ.26ರಂದು ಮಹಾಲಕ್ಷ್ಮೀ ಲೇಔಟ್‌ನಲ್ಲಿ 9 ವರ್ಷದ ಸಾಯಿ ಚರಣ್ ವಿದ್ಯುತ್ ತಂತಿ ತುಳಿದು ಗಾಯಗೊಂಡಿದ್ದ.

English summary
14 year old Likith injured after electrified in Mathikere, Bengaluru. Likith 40 percent of body burned and his health condition critical.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X