ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾರ್ಕ್‌ನಲ್ಲಿ ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಬೆಸ್ಕಾಂ ಸ್ಪಷ್ಟೀಕರಣ

|
Google Oneindia Kannada News

ಬೆಂಗಳೂರು, ಫೆಬ್ರವರಿ 25: ನಗರದ ರಾಜ್‌ಕುಮಾರ್ ಪಾರ್ಕ್‌ನಲ್ಲಿ ವಿದ್ಯುತ್ ತಂತಿ ತಗುಲಿ ಬಾಲಕ ಉದಯ್ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಬೆಸ್ಕಾಂ ಸ್ಪಷ್ಟನೆ ನೀಡಿದೆ.

ಬೆಂಗಳೂರಿನ ಕಮ್ಮನಹಳ್ಳಿ ವ್ಯಾಪ್ತಿಗೆ ಒಳಪಡುವ ರಾಜ್ ಕುಮಾರ್ ಪಾರ್ಕ್‍ನಲ್ಲಿ ಆಟವಾಡುತ್ತಿದ್ದಾಗ ಇನ್ಸುಲೇಷನ್ ಇಲ್ಲದ ಬೀದಿದೀಪದ ಐಖಿ ವೈರನ್ನು ಆಕಸ್ಮಿಕವಾಗಿ ತಗುಲಿದ ಕಾರಣ ವಿದ್ಯುತ್ ಪ್ರವಹಿಸಿ, ಮೃತಪಟ್ಟಿರುವುದು ಬೆವಿಕಂನ ಗಮನಕ್ಕೆ ಬಂದಿರುತ್ತದೆ.

ರಾಜ್‌ಕುಮಾರ್‌ ಪಾರ್ಕ್‌ನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಬಾಲಕ ಸಾವುರಾಜ್‌ಕುಮಾರ್‌ ಪಾರ್ಕ್‌ನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಬಾಲಕ ಸಾವು

ಪಾರ್ಕ್‍ನಲ್ಲಿ ಬಿಬಿಎಂಪಿ ವತಿಯಿಂದ ನವೀಕರಣ ಕಾರ್ಯವು ನಡೆಯುತ್ತಿದೆ. ಈ ಕಾರ್ಯವನ್ನು ಗುತ್ತಿಗೆ ಪಡೆದಿರುವ ಏಜೆನ್ಸಿರವರು, ನವೀಕರಣ ಕಾರ್ಯಕ್ಕಾಗಿ ವೆಲ್ಡಿಂಗ್ ಮಾಡಲು ಬೀದಿ ದೀಪದ ವೈರ್‍ನಿಂದ ಇನ್ಸುಲೇಷನ್ ತೆಗೆದು ಅನಧಿಕೃತವಾಗಿ ವಿದ್ಯುತ್ ಸಂಪರ್ಕವನ್ನು ಹಲವು ಪಾಯಿಂಟ್‌ಗಳಲ್ಲಿ ತೆಗೆದುಕೊಂಡಿದ್ದಾರೆ.

Boy electrocuted in bengaluru bescom clarification

ವೆಲ್ಡಿಂಗ್ ಕೆಲಸ ಮುಗಿದ ನಂತರ ಇನ್ಸುಲೇಷನ್ ತೆಗೆದ ವೈರನ್ನು ಸರಿಯಾಗಿ ಅಥವಾ ಸುರಕ್ಷಿತವಾಗಿ ಇನ್ಸುಲೇಷನ್ ಟೇಪ್‌ನಿಂಸ ಭದ್ರಪಡಿಸಿದೇ ಹಾಗೆಯೇ ಬಿಟ್ಟಿದ್ದಾರೆ. ಬಾಲಕ ಪಾರ್ಕ್‍ನಲ್ಲಿ ಆಟವಾಡುತ್ತಾ, ಆಕಸ್ಮಿಕವಾಗಿ ತೆರೆದ ವೈರಿನ ಸಂಪರ್ಕಕ್ಕೆ ಬಂದು, ವಿದ್ಯುತ್ ಪ್ರವಹಿಸಿ ಮೃತಪಟ್ಟಿರುತ್ತಾನೆ. ವಿವಿರವಾದ ವರದಿ ನಿರೀಕ್ಷಣೆಯಲ್ಲಿದೆ.

ಈ ದುರ್ಘಟನೆಗೆ, ನವೀಕರಣ ಕಾರ್ಯ ಕೈಗೊಂಡ ಏಜೆನ್ಸಿರವರ ನಿರ್ಲಕ್ಷತೆಯೇ ಪ್ರಮುಖ ಕಾರಣವಾಗಿರುವುದರಿಂದ, ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಃಃಒP ಅಧಿಕಾರಿಗಳಿಗೆ ತಿಳಿಸಲಾಗಿದೆ.

ಅಲ್ಲದೆ ವೆಲ್ಡಿಂಗ್‍ಗಾಗಿ ಅನಧಿಕೃತ ವಿದ್ಯುತ್ ಸಂಪರ್ಕವನ್ನು ಪಡೆದ ಕಾರಣ ಏಜೆನ್ಸಿರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ, ಬೆವಿಕಂನ ಸಂಬಂಧಪಟ್ಟ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ರವರಿಗೂ ಸೂಚಿಸಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.

English summary
Bescom clarified that bescom contractor leave the high tension electric wire in ground and this leads to boy death in Bengaluru Rajkumar park in Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X