ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ ಬೈಕ್ ಪ್ರಿಯರಿಗೆ ಖುಷಿ ಸುದ್ದಿ ನೀಡಿದ Bounce...

|
Google Oneindia Kannada News

ಬೆಂಗಳೂರು, ಫೆಬ್ರವರಿ 12: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬೌನ್ಸ್ ಬೈಕ್‌ಗಳ ಓಡಾಟ ಹೆಚ್ಚಾಗುತ್ತಿದೆ. ಬೈಕ್ ಸವಾರರ ಮೆಚ್ಚುಗೆ ಗಳಿಸಿರುವ 'ಬೌನ್ಸ್' ಬಾಡಿಗೆ ಬೈಕ್ ಸೇವೆ ಸಂಸ್ಥೆ ತನ್ನ ಗ್ರಾಹಕರಿಗೆ ಖುಷಿಯ ಸುದ್ದಿ ನೀಡಿದೆ.

ಈ ಜನಪ್ರಿಯ ಬೌನ್ಸ್ ಬೈಕ್ ಸೇವೆಯನ್ನು ಬೆಂಗಳೂರು ಅಷ್ಟೇ ಅಲ್ಲದೇ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗದಲ್ಲಿ ಈಗಾಗಲೇ ಪ್ರಾರಂಭಿಸಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಂಸ್ಥೆ ಇನ್ಮುಂದೆ ರಾಜ್ಯದ ಎಲ್ಲ 2 ಮತ್ತು 3ನೇ ಹಂತದ ನಗರಗಳು ಅಂದರೆ ಜಿಲ್ಲಾ ಮತ್ತು ಪ್ರಮುಖ ತಾಲೂಕು ಕೇಂದ್ರಗಳಿಗೆ ಹಾಗೂ ಪ್ರವಾಸಿ ತಾಣಗಳಲ್ಲಿ ಬೌನ್ಸ್ ಸೇವೆ ಒದಗಿಸಲು ಸಂಸ್ಥೆ ನಿರ್ಧರಿಸಿದೆ.

ಬೌನ್ಸ್ ಬೈಕ್‌ಗೆ ಬೆಂಕಿ ಇಟ್ಟು ಪರಾರಿಯಾದ ಫಟಿಂಗ..!ಬೌನ್ಸ್ ಬೈಕ್‌ಗೆ ಬೆಂಕಿ ಇಟ್ಟು ಪರಾರಿಯಾದ ಫಟಿಂಗ..!

ಈ ಕುರಿತು ಬೌನ್ಸ್ ಸಂಸ್ಥೆ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದ್ದು, ಬೌನ್ಸ್ ಬೈಕ್‌ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ನಾವು ಗ್ರಾಹಕರ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಈ ಸೇವೆಯನ್ನು ಜಾರಿಗೊಳಿಸಲು ಉತ್ಸುಕವಾಗಿದ್ದೇವೆ. ಅಲ್ಲದೇ ಇನ್ಮುಂದೆ ಇಲೆಕ್ಟ್ರಿಕಲ್ ಬೈಕ್‌ಗಳನ್ನು ರಸ್ತೆಗೆ ಇಳಿಸಲಿದ್ದೇವೆ ಎಂದು ಕಂಪೆನಿ ಹೇಳಿದೆ.

20 ಸಾವಿರ ಬೌನ್ಸ್ ಬೈಕ್

20 ಸಾವಿರ ಬೌನ್ಸ್ ಬೈಕ್

ಬೆಂಗಳೂರಿನಲ್ಲಿ ಸೇರಿದಂತೆ ರಾಜ್ಯಾದಂತ್ಯ ಸದ್ಯ 20 ಸಾವಿರ ಬೌನ್ಸ್ ಬೈಕ್‌ಗಳು ಇವೆ ಎಂದು ಕಂಪೆನಿ ಹೇಳಿಕೊಂಡಿದೆ. ಒಂದು ಬೈಕನ್ನು ದಿನಕ್ಕೆ 8ರಿಂದ 10 ಜನ ಬಳಸುತ್ತಿದ್ದಾರೆ. ಸರಾಸರಿ ಪ್ರತಿದಿನ 1.5 ಲಕ್ಷ ಗ್ರಾಹಕರು ಬೌನ್ಸ್ ಸೇವೆಯನ್ನು ರಾಜ್ಯಾದಂತ್ಯ ಪಡೆಯುತ್ತಿದ್ದಾರೆ.

ಎಲೆಕ್ಟ್ರಿಕ್‌ ಬೈಕ್ಗಳನ್ನು ನೀಡಲಿದೆ

ಎಲೆಕ್ಟ್ರಿಕ್‌ ಬೈಕ್ಗಳನ್ನು ನೀಡಲಿದೆ

ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಹೊಸ ಪ್ರಯೋಗದಲ್ಲಿ ತೊಡಗಿಸಿಕೊಂಡಿರುವ ಬೌನ್ಸ್‌ ಕಂಪನಿ, ಈಗ ಸ್ವತಃ ಎಲೆಕ್ಟ್ರಿಕ್‌ ಬೈಕ್‌ಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಮುಂದಾಗಿದೆ. ಬೌನ್ಸ್ ಬೈಕ್‌ಗಳ ಓಡಾಟ ಹೆಚ್ಚಾಗಿರುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟಬೇಕು ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ.

ಟ್ರಾಫಿಕ್ ಪೊಲೀಸ್ ಕೊಟ್ಟ ಚಲನ್ ಹರಿದು ಬೈಕ್ ಸವಾರ ಮಾಡಿದ್ದೇನು?ಟ್ರಾಫಿಕ್ ಪೊಲೀಸ್ ಕೊಟ್ಟ ಚಲನ್ ಹರಿದು ಬೈಕ್ ಸವಾರ ಮಾಡಿದ್ದೇನು?

ಶೀಘ್ರದಲ್ಲೇ ರಸ್ತೆಗಿಳಿಯಲಿವೆ

ಶೀಘ್ರದಲ್ಲೇ ರಸ್ತೆಗಿಳಿಯಲಿವೆ

ಸದ್ಯ ಟಿವಿಎಸ್‌ನ ಬೈಕ್‌ಗಳ ಮೂಲಕ ಎಲೆಕ್ಟ್ರಿಕ್‌ ಬೈಕ್ ಸೇವೆ ನೀಡಲಾಗುತ್ತಿದೆ. ಈಗ ಬೌನ್ಸ್‌ನ ತಂತ್ರಜ್ಞರೇ ಎಲೆಕ್ಟ್ರಿಕ್‌ ಬೈಕ್‌ ಅಭಿವೃದ್ಧಿಪಡಿಸುತ್ತಿದ್ದು, ಶೀಘ್ರದಲ್ಲಿ ಇವುಗಳ ಮೂಲಕ ಸೇವೆ ಆರಂಭಿಸಲಿದ್ದೇವೆ' ಎಂದು ಬೌನ್ಸ್ ಕಂಪೆನಿ ಹೇಳಿಕೊಂಡಿದೆ.

ದುರುಪಯೋಗ ತಡೆಗಟ್ಟಲು ಕ್ರಮ

ದುರುಪಯೋಗ ತಡೆಗಟ್ಟಲು ಕ್ರಮ

ಬೌನ್ಸ್ ಬೈಕ್‌ಗಳು ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ, ಮತ್ತೊಂದು ಕಡೆ ಬೈನ್ಸ್ ಬೈಕ್‌ಗಳನ್ನು ದುಷ್ಕರ್ಮಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವ ಘಟನೆ ಆಗಾಗ ವರದಿ ಆಗುತ್ತಿವೆ. ಇಂತಹ ಘಟನೆಗಳನ್ನು ತಡೆಗಟ್ಟಲು ಉನ್ನತ ತಂತ್ರಜ್ಞಾನವನ್ನು ಬೌನ್ಸ್‌ ಬೈಕ್‌ಗೆ ಅಳವಡಿಸುವುದಾಗಿ ಸಂಸ್ಥೆ ಹೇಳಿದೆ. ಬೌನ್ಸ್ ಬೈಕ್‌ಗಳನ್ನು ಸಾರ್ವಜನಿಕರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕು. ಸಂಸ್ಥೆಗೆ ಹಾನಿ ಮಾಡಬಾರದು ಎಂದು ಮನವಿ ಮಾಡಿದೆ.

English summary
Bounce Scooter Service Extended To Karnatakas 2 tier 3 tier Cities. Bounce Company Confirms it. 2 tier, 3 tier karnataka cities gets bounce service Shortly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X