ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ರೈಲ್ವೆ ನಿಲ್ದಾಣದಲ್ಲಿ ಬಾಟಲ್ ಕ್ರಶರ್ ಅಳವಡಿಕೆ

|
Google Oneindia Kannada News

ಬೆಂಗಳೂರು, ಆಗಸ್ಟ್ 27 : ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಬಾಟಲ್ ಕ್ರಶರ್ ಅಳವಡಿಕೆ ಮಾಡಲಾಗಿದೆ. ಭಾರತೀಯ ರೈಲ್ವೆ ಅಕ್ಟೋಬರ್‌ನಿಂದ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಿದೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅಳವಡಿಸಿದ ಬಾಟಲ್ ಕ್ರಶರ್‌ಅನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಉದ್ಘಾಟಿಸಿದರು.

Recommended Video

ಎಲ್ಲಾ ರೈಲ್ವೆ ಟ್ರ್ಯಾಕ್ ಗಳು ಹಾಗು ಸ್ಟೇಷನ್ ಗಳು ಹೀಗೆ ಇದ್ರೆ ಎಷ್ಟು ಚಂದ | Oneindia Kannada

ಅಕ್ಟೋಬರ್ 2ರಿಂದ ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬ್ಯಾನ್ಅಕ್ಟೋಬರ್ 2ರಿಂದ ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬ್ಯಾನ್

ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಿಂದ ರೈಲ್ವೆ ಇಲಾಖೆ ನಿಲ್ದಾಣ, ರೈಲುಗಳಲ್ಲಿ ಒಂದು ಬಾರಿ ಬಳಕೆ ಮಾಡುವ ಎಲ್ಲಾ ಬಗೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಿದೆ. ಇದರ ಭಾಗವಾಗಿಯೇ ಕ್ರಶರ್ ಅಳವಡಿಸಲಾಗಿದೆ.

ಪ್ಲಾಸ್ಟಿಕ್ ರಸ್ತೆ ನಿರ್ಮಾಣ; 5 ಟನ್ ಪ್ಲಾಸ್ಟಿಕ್ ಕೊಟ್ಟ ಬಿಬಿಎಂಪಿಪ್ಲಾಸ್ಟಿಕ್ ರಸ್ತೆ ನಿರ್ಮಾಣ; 5 ಟನ್ ಪ್ಲಾಸ್ಟಿಕ್ ಕೊಟ್ಟ ಬಿಬಿಎಂಪಿ

Bottle Crusher Installed At Bengaluru Railway Station

ಪ್ಲಾಸ್ಟಿಕ್ ನಿರ್ವಹಣೆ ಮತ್ತು ಮರುಬಳಕೆಗೆ ರೈಲ್ವೆ ಇಲಾಖೆ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದೆ. ದೇಶದ 360 ನಿಲ್ದಾಣಗಳಲ್ಲಿ 1853 ಪ್ಲಾಸ್ಟಿಕ್ ವಾಟರ್ ಬಾಟಲ್ ಕ್ರಶರ್‌ಗಳನ್ನು ಅಳವಡಿಕೆ ಮಾಡಲಾಗುತ್ತಿದೆ.

ಬೆಂಗಳೂರಲ್ಲಿ ಸೆ.1 ರಿಂದ ಪ್ಲಾಸ್ಟಿಕ್ ನಿಷೇಧ; ಬಳಸಿದರೆ ದಂಡಬೆಂಗಳೂರಲ್ಲಿ ಸೆ.1 ರಿಂದ ಪ್ಲಾಸ್ಟಿಕ್ ನಿಷೇಧ; ಬಳಸಿದರೆ ದಂಡ

ರೈಲ್ವೆ ನಿಲ್ದಾಣದ ಸ್ವಚ್ಛತೆಗೆ ಇಲಾಖೆ ಆದ್ಯತೆ ನೀಡಿದೆ. ಆದರೆ, ಪ್ಲಾಸ್ಟಿಕ್ ಉತ್ಪನ್ನಗಳಿಂದಾಗಿ ಇದಕ್ಕೆ ಅಡಚಣೆಯಾಗಿದೆ. ಆದ್ದರಿಂದ, ರೈಲ್ವೆ ನಿಲ್ದಾಣ ಮತ್ತು ರೈಲುಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಇಲಾಖೆ ನಿಷೇಧಿಸಲಿದೆ.

English summary
South western railway installed plastic bottle crusher at Krantiveera Sangolli Rayanna railway station, Bengaluru. From October 2 Indian railways will ban single use plastic materials on its premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X