• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಡದಿಯ ಶ್ಯಾನುಮಂಗಲ ಕೆರೆಗೆ ಹೊಸ ರೂಪ ನೀಡಿದ ಬಾಷ್

|

ಬೆಂಗಳೂರು, ಮಾರ್ಚ್ 01: ಬಾಷ್ ಲಿಮಿಟೆಡ್ ಪುನರುಜ್ಜೀವನಗೊಳಿಸಿರುವ ಬಿಡದಿಯ ಉತ್ಪಾದನಾ ಘಟಕಗಳಿಗೆ ಹೊಂದಿಕೊಂಡಂತಿರುವ ಶ್ಯಾನುಮಂಗಲ ಕೆರೆಯನ್ನು ಉದ್ಘಾಟಿಸಲಾಗಿದೆ.

ಕಳೆದ ಹಲವು ವರ್ಷಗಳಿಂದ ಶ್ಯಾನುಮಂಗಲ ಕೆರೆ ಒತ್ತುವರಿ ಹಾಗೂ ನಿರ್ವಹಣಾ ಕೊರತೆಯಿಂದ ತನ್ನ ಹಳೆಯ ವರ್ಚಸ್ಸನ್ನು ಕಳೆದುಕೊಂಡಿತ್ತು. ಕೆರೆಯ ಜಲಾನಯನ ಪ್ರದೇಶವನ್ನು ತಡೆಗಟ್ಟಿರುವುದರಿಂದ ಹೂಳು ಸಂಗ್ರಹವಾಗಲು ಮತ್ತು ಕೆರೆಯ ಶೇಖರಣಾ ಸಾಮರ್ಥ್ಯ ಕೂಡ ಕಡಿಮೆಯಾಗಿತ್ತು. ಇದರಿಂದ ಸುತ್ತಮುತ್ತಲಿನ ಜನರು ನೀರಿನ ಅಭಾವ ಎದುರಿಸುತ್ತಿದ್ದರು.

207 ಕೆರೆಗಳಿಗೆ ಸಿಸಿಟಿವಿ ಅಳವಡಿಸಲಿದೆ ಬಿಬಿಎಂಪಿ

ಬಿಡದಿ ಒಂದು ಕಾಲದಲ್ಲಿ ದ್ರಾಕ್ಷಿ ಕೃಷಿ ಮತ್ತು ಕೋಳಿ ಸಾಕಾಣಿಕೆಗೆ ಪ್ರಸಿದ್ಧವಾಗಿತ್ತು. ಈ ಪಟ್ಟಣ ಮತ್ತು ಅದರ ಹತ್ತಿರದ ಸಮುದಾಯಗಳಿಗೆ ಕೆರೆ ನೀರಿನ ಮಹತ್ವನ್ನು ಗುರುತಿಸಿದ ಬಾಷ್, 2017 ರ ಕೊನೆಯಲ್ಲಿ ಅದರ ಪುನರುಜ್ಜೀವನ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಕೆರೆ ಪ್ರದೇಶದ ಹೊರಗೆ ಜಾನುವಾರು ತೊಟ್ಟಿ ನಿರ್ಮಾಣ, ನಿರ್ಜಲೀಕರಣ, ಬಂಡ್ ಬಲಪಡಿಸುವಿಕೆ, ಪೊದೆ ಸಸ್ಯ ತೆರವುಗೊಳಿಸುವಿಕೆ, ಜಲಾನಯನ ಪ್ರದೇಶದ ಉದ್ದಕ್ಕೂ ವಾಕಿಂಗ್ ಪಥಗಳ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು.

ಬಾಷ್ ಕಂಪನಿಯ ಪರಿಸರ ಸಂರಕ್ಷಣೆ

ಬಾಷ್ ಕಂಪನಿಯ ಪರಿಸರ ಸಂರಕ್ಷಣೆ

ಬಾಷ್ ಕಂಪನಿಯ ಪರಿಸರ ಸಂರಕ್ಷಣೆ ಹಾಗೂ ಕೆರೆಯ ಸುತ್ತಮುತ್ತಲಿನ ಪ್ರದೇಶದ ಜನರ ಜೀವನ ಸುಧಾರಣೆಯ ಬದ್ದತೆ ಈ ಕೆರೆಯನ್ನು ಮತ್ತೊಮ್ಮೆ ಸುಂದರ ತಾಣವನ್ನಾಗಿಸಿದೆ. ಸಾಮಾಜಿಕ ಜವಾಬ್ದಾರಿ, ಪರಿಸರ ಸುಸ್ಥಿರತೆಯನ್ನು ಗಮನದಲ್ಲಿರಿಸಿಕೊಂಡು ಸಂಸ್ಥೆ ಈ ಯೋಜನೆ ಕೈಗೆತ್ತಿಕೊಂಡಿತ್ತು. ಪುನರುಜ್ಜೀವನ ಕಾಮಗಾರಿ ಆರಂಭಿಸುವ ಮುನ್ನ ಸಂಸ್ಥೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಮುದಾಯದ ಸದಸ್ಯರೊಂದಿಗೆ ಚರ್ಚೆ ನಡೆಸಿತ್ತು.

ಬಾಷ್ ಸಮೂಹದ ಅಧ್ಯಕ್ಷ ಸೌಮಿತ್ರಾ ಭಟ್ಟಾಚಾರ್ಯ

ಬಾಷ್ ಸಮೂಹದ ಅಧ್ಯಕ್ಷ ಸೌಮಿತ್ರಾ ಭಟ್ಟಾಚಾರ್ಯ

ಕೆರೆಯ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಸಮೂಹದ ಅಧ್ಯಕ್ಷ ಸೌಮಿತ್ರಾ ಭಟ್ಟಾಚಾರ್ಯ, ''ಬಾಷ್ ನಲ್ಲಿ ನಾವು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಹಾಗೂ ಪರಿಸರದ ಸುಸ್ಥಿರತೆಯನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಗುರುತಿಸುತ್ತೇವೆ. ಕೆರೆ ಸಮೀಪದಲ್ಲಿರುವ ಸ್ಥಳೀಯರ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವ ಅನಿವಾರ್ಯತೆಯನ್ನು ಅರಿತು 2017ರಲ್ಲಿ ಕೆರೆಯ ಪುನರುಜ್ಜೀವನ ಯೋಜನೆಯನ್ನು ಕೈಗೆತ್ತಿಕೊಂಡೆವು. ಈಗ ಅದರ ಫಲಿತಾಂಶ ಜನರ ಕಣ್ಮುಂದೆ ಇದೆ. ಮುಂದಿನ ದಿನಗಳಲ್ಲಿ ಕೂಡ ನಾವು ಇಂತಹ ಹಲವು ಉಪಯುಕ್ತ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದೇವೆ'' ಎಂದರು.

ಆಡುಗೋಡಿಯಿಂದ ಬಿಡದಿಗೆ, ಬಾಷ್ ಹೊಸ ಘಟಕ ಉದ್ಘಾಟನೆ

ಮಾಗಡಿ ಶಾಸಕ ಎ.ಮಂಜುನಾಥ್ ಮಾತನಾಡಿ

ಮಾಗಡಿ ಶಾಸಕ ಎ.ಮಂಜುನಾಥ್ ಮಾತನಾಡಿ

ಮಾಗಡಿ ಶಾಸಕ ಎ.ಮಂಜುನಾಥ್ ಮಾತನಾಡಿ, "ಬಾಷ್ ಲಿಮಿಟೆಡ್ ಸಂಸ್ಥೆಯ ಯೋಜನೆಯ ಭಾಗವಾಗಿರಲು ಹೆಮ್ಮೆಯೆನಿಸುತ್ತಿದೆ. ಇಂದು ನಮಗೆ ಸ್ವಚ್ಛ ಹಾಗೂ ಸುಸ್ಥಿರ ವಾತಾವರಣದ ತುರ್ತು ಅಗತ್ಯವಿದೆ. ಶ್ಯಾನುಮಂಗಲ ಕೆರೆಯ ಪುನರುಜ್ಜೀವನ ಈನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆಯಾಗಿದೆ. ಈ ಕೆರೆಯ ನೀರನ್ನು ಶುದ್ಧವಾಗಿರಿಸಿಕೊಳ್ಳಲು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಲು ಸಾರ್ವಜನಿಕರು ಕೈಜೋಡಿಸಬೇಕು'' ಎಂದು ಮನವಿ ಮಾಡಿದರು.

ಶ್ಯಾನುಮಂಗಲ ಕೆರೆಗೆ ಹೊಸ ರೂಪ ನೀಡಿದ ಬಾಷ್

ಶ್ಯಾನುಮಂಗಲ ಕೆರೆಗೆ ಹೊಸ ರೂಪ ನೀಡಿದ ಬಾಷ್

ಕೆರೆ ಪ್ರದೇಶದ ಹೊರಗೆ ಜಾನುವಾರು ತೊಟ್ಟಿ ನಿರ್ಮಾಣ, ನಿರ್ಜಲೀಕರಣ, ಬಂಡ್ ಬಲಪಡಿಸುವಿಕೆ, ಪೊದೆ ಸಸ್ಯ ತೆರವುಗೊಳಿಸುವಿಕೆ, ಜಲಾನಯನ ಪ್ರದೇಶದ ಉದ್ದಕ್ಕೂ ವಾಕಿಂಗ್ ಪಥಗಳ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಪುನರುಜ್ಜೀವನಗೊಂಡಿರುವ ಕೆರೆಯಲ್ಲಿ ಅಂತರ್ಜಲ ಮಟ್ಟದ ವೃದ್ದಿಯಂತಹ ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಲಿದೆ.

English summary
Bosch ltd has taken task of upliftment of Shanumangala Lake in Bidadi and now it is made available to public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more