• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಷ್ ನಿಂದ 5 ಲಕ್ಷ ರಕ್ಷಣಾತ್ಮಕ ಮುಖಗವಸು ಉತ್ಪಾದನೆ

|

ಬೆಂಗಳೂರು, ಜೂನ್ 25: ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಾಷ್ ತನ್ನದೇ ಆದ ವಿಶಿಷ್ಟ ರೀತಿಯ ರಕ್ಷಣಾ ಮುಖಗವಸು (ಮಾಸ್ಕ್) ಅನ್ನು ವಿನ್ಯಾಸಗೊಳಿಸಿದೆ. ಸಂಪೂರ್ಣ ಸ್ವಯಂಚಾಲಿತ ರಕ್ಷಣಾ ಮಾಸ್ಕ್ ಉತ್ಪಾದನಾ ವ್ಯವಸ್ಥೆಯನ್ನು ಬಾಷ್ ತನ್ನ ಬೆಂಗಳೂರಿನ ನಾಗನಾಥಪುರದಲ್ಲಿರುವ ಘಟಕದಲ್ಲಿ ಆರಂಭಿಸಿದೆ. ಇದರೊಂದಿಗೆ ದಿನಕ್ಕೆ 1,00,000 ದಷ್ಟು ಮಾಸ್ಕ್ ಗಳನ್ನು ಉತ್ಪಾದಿಸುವ ಗುರಿಯನ್ನು ಬಾಷ್ ಹೊಂದಿದೆ.

   SSLC Exam : ತಮಿಳುನಾಡು, ಆಂಧ್ರದಲ್ಲಿಲ್ಲ, ಕರ್ನಾಟಕದಲ್ಲೇಕೆ SSLC ಪರೀಕ್ಷೆ?| Oneindia Kannada

   ಭಾರತದಲ್ಲಿ ನಾಗನಾಥಪುರ ಸೇರಿದಂತೆ ವಿಶ್ವದ ತನ್ನ ಐದು ಆಟೋಮೇಟೆಡ್ ಉತ್ಪಾದನಾ ಘಟಕಗಳಲ್ಲಿ ಬಾಷ್ ಜಾಗತಿಕವಾಗಿ ದಿನಕ್ಕೆ 5,00,000 ಕ್ಕೂ ಅಧಿಕ ಮಾಸ್ಕ್ ಗಳನ್ನು ತಯಾರಿಸುತ್ತಿದೆ. ಈ ಮಾಸ್ಕ್ ಗಳನ್ನು ಬಾಷ್ ನ ವಿಶೇಷ ಘಟಕವು ವಿನ್ಯಾಸಗೊಳಿಸಿದೆ. ಈ ಮಾಸ್ಕ್ ಗಳು ಭಾರತದ ಬಾಷ್ ನಲ್ಲಿ ಲಭ್ಯವಿವೆ.

   ಬಾಷ್ ನ ಮತ್ತೊಂದು ವಿಶಿಷ್ಟವಾದ ನಿರ್ಧಾರವೆಂದರೆ 30,00,000 ಕ್ಕೂ ಅಧಿಕ ಮಾಸ್ಕ್ ಗಳನ್ನು ಎರಡನೇ ಹಂತದ ಕೋವಿಡ್-19 ವಿರುದ್ಧ ಸೇವೆ ಸಲ್ಲಿಸುತ್ತಿರುವ ಆರೋಗ್ಯ ರಕ್ಷಣೆ ಕಾರ್ಯಕರ್ತರು, ಪೊಲೀಸ್, ಮುನ್ಸಿಪಲ್ ಕಾರ್ಪೊರೇಷನ್ ಕಾರ್ಮಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಎನ್ ಜಿಒಗಳಿಗೆ ಉಚಿತವಾಗಿ ನೀಡಲಿದೆ.

   ಈ ಮೂರು ಪದರದ ಮಾಸ್ಕ್ ಗಳು ಬಳಕೆದಾರನ ಮೂಗು ಮತ್ತು ಗಂಟಲಿನೊಳಗೆ ಬ್ಯಾಕ್ಟೀರಿಯಾಗಳು ಪ್ರವೇಶ ಮಾಡುವುದನ್ನು ನಿಯಂತ್ರಣ ಮಾಡುತ್ತವೆ. ಈ ಮಾಸ್ಕ್ ಗಳು ಸಂಪೂರ್ಣವಾಗಿ ಉಚಿತವಾಗಿ ವಿತರಣೆ ಆಗುವ ಹಿನ್ನೆಲೆಯಲ್ಲಿ ಮಾಸ್ಕ್ ನ ಕೆಳಭಾಗದಲ್ಲಿ ಬಾಷ್ ಕಂಪನಿಯ ಲೋಗೋವನ್ನು ಒಳಗೊಂಡಿರುತ್ತವೆ.

   ಈ ಮಾಸ್ಕ್ ತಯಾರಿಕೆಯು ಭಾರತ ಸರ್ಕಾರದ ''ಮೇಕ್ ಇನ್ ಇಂಡಿಯಾ'' ಪರಿಕಲ್ಪನೆಯನ್ನು ಉತ್ತೇಜಿಸಲಿದೆ. ಒಟ್ಟಾರೆ, ಬಾಷ್ ನ ಐದು ಘಟಕಗಳಲ್ಲಿ ಜೂನ್ ಅಂತ್ಯದ ವೇಳೆಗೆ ತಿಂಗಳಿಗೆ 10 ದಶಲಕ್ಷಕ್ಕೂ ಅಧಿಕ ಮಾಸ್ಕ್ ತಯಾರಿಸಲಿದೆ.

   ಈ ಘಟಕದ ಉದ್ಘಾಟನೆ ವೇಳೆ ಮಾತನಾಡಿದ ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ & ಬಾಷ್ ಗ್ರೂಪ್ ಇನ್ ಇಂಡಿಯಾದ ಅಧ್ಯಕ್ಷರಾದ ಸೌಮಿತ್ರ ಭಟ್ಟಾಚಾರ್ಯ ಅವರು, ''ಬಾಷ್ ನಲ್ಲಿ ನಮ್ಮ ಎಲ್ಲಾ ಕಾರ್ಯಾಚರಣೆಗಳಲ್ಲಿ ನಮ್ಮ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಗೆ ಒತ್ತು ನೀಡುತ್ತಿದ್ದೇವೆ. ಕೋವಿಡ್-19 ವಿರುದ್ಧದ ಹೋರಾಟಕ್ಕೆ 50 ಕೋಟಿ ರೂಪಾಯಿಗಳ ದೇಣಿಗೆಯ ನಮ್ಮ ಬದ್ಧತೆಯ ಒಂದು ಭಾಗ ಇದಾಗಿದೆ. ನಮ್ಮ ಆವಿಷ್ಕಾರಕ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯವನ್ನು ಬಳಸಿಕೊಂಡು ನಾವು ಈ ಸರ್ಜಿಕಲ್ ಮಾಸ್ಕ್ ಗಳನ್ನು ಉತ್ಪಾದಿಸುತ್ತಿದ್ದೇವೆ'' ಎಂದು ತಿಳಿಸಿದರು.

   English summary
   Bosch has started Operative Mask-Production Lines completely Automated at Naganathapura plant, Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more